ಕತ್ತರಿಸಿಟ್ಟ ಈರುಳ್ಳಿ ನಿಮ್ಮ ಆರೋಗ್ಯಕ್ಕೆ ಮಾರಕವಾಗುತ್ತೆ ಹುಷಾರ್!
ಅಡುಗೆ ಮನೆಯಲ್ಲಿ ಮುಖ್ಯವಾಗಿ ಬಳಕೆಯಾಗುವ ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು ಹೌದು, ಆದರೆ ಇದನ್ನು ಕತ್ತರಿಸಿಟ್ಟು ತಡವಾಗಿ ತಿನ್ನೋದರಿಂದ ಆರೋಗ್ಯಕ್ಕೆ ಮಾರಕವಾಗುತ್ತದೆ ಅನ್ನೋದು ಗೊತ್ತಾ?

ಈರುಳ್ಳಿಯಲ್ಲಿ ವಿವಿಧ ನಂಜುನಿರೋಧಕ ಮತ್ತು ಪ್ರತಿಜೀವಕ ಗುಣಗಳಿವೆ. ಇದರ ಹೊರತಾಗಿಯೂ, ಈರುಳ್ಳಿ ನಮ್ಮನ್ನು ಅನಾರೋಗ್ಯಕ್ಕೆ ದೂಡಬಹುದು. ಇದರ ಹಿಂದಿನ ಕಾರಣವೆಂದರೆ ಕತ್ತರಿಸಿದ ಈರುಳ್ಳಿಯನ್ನು ದೀರ್ಘಕಾಲದವರೆಗೆ ಇಟ್ಟು ಸೇವಿಸೋದು. ಹೀಗೆ ಕತ್ತರಿಸಿಟ್ಟ ಈರುಳ್ಳಿಯನ್ನು ಸೇವಿಸೋದರಿಂದ ಆಗುವ ಅನಾನುಕೂಲಗಳು ಯಾವುವು ತಿಳಿದುಕೊಳ್ಳೋಣ.
ಈರುಳ್ಳಿ ಖಂಡಿತವಾಗಿಯೂ ಭಾರತೀಯ ಅಡುಗೆಮನೆಗಳಲ್ಲಿ ಕಂಡು ಬರುಬರುವ ಬಹಳ ಮುಖ್ಯವಾದ ಆಹಾರ ಪದಾರ್ಥವಾಗಿದೆ. ಅಡುಗೆ ಮನೆಯಲ್ಲಿ ತಯಾರಿಸಿದ ಅನೇಕ ಆಹಾರಗಳಲ್ಲಿ ಇದನ್ನು ಬಳಸಲಾಗುತ್ತದೆ. ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ತುಂಬಾ ಸಹಾಯಕವಾಗಿದೆ. ಆದರೆ ಕತ್ತರಿಸಿದ ಈರುಳ್ಳಿಯನ್ನು ದೀರ್ಘಕಾಲದವರೆಗೆ ಇಡುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಕತ್ತರಿಸಿದ ಈರುಳ್ಳಿಯನ್ನು ದೀರ್ಘಕಾಲದವರೆಗೆ ಇಟ್ಟು ಬಳಕೆ ಮಾಡೋದರಿಂದ ನಿಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಅನ್ನೋದನ್ನು ನೋಡೋಣ.
ಇದು ಹೇಗೆ ಪರಿಣಾಮ ಬೀರುತ್ತದೆ?
ಮನೆಯಲ್ಲಿ ಆಹಾರದೊಂದಿಗೆ ಸಲಾಡ್ ಗಾಗಿ ಜನರು ಈರುಳ್ಳಿಯನ್ನು ಊಟ ಮಾಡುವ ತುಂಬಾ ಸಮಯದ ಮುನ್ನವೇ ಕತ್ತರಿಸಿಡುತ್ತಾರೆ. ಆದರೆ ನಿಮಗೆ ಗೊತ್ತಾ? ತಿಳಿಯದೆ, ಅದು ನಿಮ್ಮನ್ನು ಅನಾರೋಗ್ಯಕ್ಕೆ ದೂಡಬಹುದು. ಈರುಳ್ಳಿ ಪರಿಸರದಲ್ಲಿರುವ ಬ್ಯಾಕ್ಟೀರಿಯಾವನ್ನು ಬಹಳ ವೇಗವಾಗಿ ಹೀರಿಕೊಳ್ಳುತ್ತದೆ ಎಂದು ಆಹಾರ ತಜ್ಞರು ಮತ್ತು ವೈದ್ಯರು ತಿಳಿಸಿದ್ದಾರೆ. ಈ ಕಾರಣದಿಂದಾಗಿ, ಕತ್ತರಿಸಿದ ಈರುಳ್ಳಿಯನ್ನು ದೀರ್ಘಕಾಲದವರೆಗೆ ಇಟ್ಟು ತಿನ್ನೋದು ಆರೋಗ್ಯಕ್ಕೆ ಮಾರಕ. ಹಾಗಾಗಿ ಆ ತಪ್ಪು ಂಆಡಬೇಕು.
ಯಾವ ಸಮಸ್ಯೆಗಳು ಕಾಡುತ್ತವೆ?
ಕತ್ತರಿಸಿದ ಈರುಳ್ಳಿಯನ್ನು ದೀರ್ಘಕಾಲದವರೆಗೆ ಇಟ್ಟು ತಿನ್ನೋದರಿಂದ ಫುಡ್ ಪಾಯ್ಸನ್, ಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಉಂಟಾಗಬಹುದು. ಈರುಳ್ಳಿಯಲ್ಲಿ ಉತ್ತಮ ಪ್ರಮಾಣದ ಸಲ್ಫರ್ ಸಂಯುಕ್ತವಿದೆ, ಇದು ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಕತ್ತರಿಸಿಟ್ಟ ಈರುಳ್ಳಿ ಎಷ್ಟು ಮಾರಕ ಅನ್ನೋದರ ಬಗ್ಗೆ ಸರಿಯಾದ ವೈಜ್ಞಾನಿಕ ಪುರಾವೆ ಸಿಕ್ಕಿಲ್ಲ.
ಈರುಳ್ಳಿ ತಿನ್ನುವುದರ ಪ್ರಯೋಜನಗಳೇನು?
ಈರುಳ್ಳಿಯಲ್ಲಿ ಪ್ರತಿಜೀವಕ, ನಂಜುನಿರೋಧಕ, ಆಂಟಿಮೈಕ್ರೊಬಿಯಲ್ ಮತ್ತು ಕಾರ್ಮಿನೇಟಿವ್ ಗುಣಗಳಿವೆ. ಅವು ನಿಮ್ಮ ಆಂತರಿಕ ರೋಗನಿರೋಧಕ ಶಕ್ತಿಯನ್ನುಹೆಚ್ಚಿಸುತ್ತೆ. ಇದರಿಂದಾಗಿ ನೀವು ರೋಗಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ.
ಈರುಳ್ಳಿ ತಿನ್ನುವುದು ಹೇಗೆ?
ಈರುಳ್ಳಿಯನ್ನು ಸರಿಯಾಗಿ ಸೇವಿಸಬೇಕು ಎಂದಾದ್ರೆ, ನೀವು ಅವುಗಳನ್ನು ಕತ್ತರಿಸಿದ ತಕ್ಷಣ ತಾಜಾವಾಗಿ ತಿನ್ನಬೇಕು. ತಕ್ಷಣವೇ ಕತ್ತರಿಸಲು ಸಾಧ್ಯವಾಗದಿದ್ದರೆ, ನೀವು ಈರುಳ್ಳಿಯನ್ನು ಕತ್ತರಿಸಿ ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಬಹುದು. ಇದಲ್ಲದೆ, ಈರುಳ್ಳಿಯನ್ನು ಸಂಗ್ರಹಿಸಲು ಉತ್ತಮ ತಾಪಮಾನ ಅಂದ್ರೆ 0 ಡಿಗ್ರಿಗಳು, ಆದರೆ ಅದನ್ನು 5 ಡಿಗ್ರಿಗಳವರೆಗೆ ಹೆಚ್ಚಿಸಬಹುದು.