ಆರೋಗ್ಯವಂತರಾಗಿ ದೀರ್ಘಾಯುಷಿಯಾಗಲು 20 ನಿಮಿಷ ವಾಕ್ ಮಾಡಿ
ಪ್ರಪಂಚದಾದ್ಯಂತ ನಡಿಗೆ (ವಾಕಿಂಗ್) ಯನ್ನು ಅತ್ಯುತ್ತಮ ತಾಲೀಮು ಎನ್ನಲಾಗುತ್ತದೆ. ಯಾವುದೇ ವಯಸ್ಸಿನ ಜನರು ಯಾವುದೇ ಸಲಕರಣೆಗಳಿಲ್ಲದೆ ಮತ್ತು ಅದೂ ಎಲ್ಲಿಯಾದರೂ ಮಾಡಬಹುದಾದ ವ್ಯಾಯಾಮ ಎಂದರೆ ಅದು ವಾಕಿಂಗ್. ಪ್ರತಿದಿನ 20 ನಿಮಿಷದಿಂದ ಒಂದು ಗಂಟೆ ನಡೆದರೆ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಇದು ನಿಮ್ಮ ಫಿಟ್ನೆಸ್ ಅನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳುವುದು ಮಾತ್ರವಲ್ಲದೆ ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಕಳೆದ ಕೆಲವು ತಿಂಗಳುಗಳಲ್ಲಿ, ಕೊರೊನಾ ಸಾಂಕ್ರಾಮಿಕದಿಂದಾಗಿ ನಮ್ಮ ಜೀವನಶೈಲಿ ಬದಲಾಗಿದೆ. ಅನೇಕ ರಾಜ್ಯಗಳಲ್ಲಿ ಲಾಕ್ಡೌನ್ ಇದೆ. ಈ ಸಂದರ್ಭದಲ್ಲಿ, ಬಯಸಿದರೆ ನಿಮ್ಮ ಫ್ಲಾಟ್‌ನ ಗ್ಯಾಲರಿಗೆ ಅಥವಾ ಕೋಣೆಯಲ್ಲಿ ನಡೆಯಬಹುದು. ಇದಕ್ಕಾಗಿ ಗಡಿಯಾರವನ್ನು ನೋಡಿಕೊಂಡು ಮನೆಯೊಳಗೆ ನಡೆಯಲು ಪ್ರಾರಂಭಿಸಬಹುದು ಮತ್ತು ಗಡಿಯಾರದ ಸೂಜಿ 20 ನಿಮಿಷಗಳ ಕಾಲ ದಾಟುವವರೆಗೆ ನಡೆಯುತ್ತಿರಬೇಕು.

ನಡಿಗೆಯು ಒಬ್ಬ ವ್ಯಕ್ತಿಯನ್ನು ಸದೃಢವಾಗಿಡಲು ತುಂಬಾ ಸುಲಭ ಮತ್ತು ಪ್ರಭಾವಶಾಲಿ ಮಾರ್ಗ. ಅಷ್ಟೇ ಅಲ್ಲ, ಸಮಯ ಸಿಕ್ಕಾಗಲೆಲ್ಲಾ ಅದನ್ನು ಮಾಡಬಹುದು. ನಡಿಗೆಯಿಂದ ಆಗುವ ಪ್ರಯೋಜನಗಳೇನು? ಅವುಗಳ ಬಗ್ಗೆ ತಿಳಿದುಕೊಂಡು, ಇಂದಿನಿಂದಲೇ ನಡೆಯಲು ಆರಂಭಿಸಿ...

ಹೃದಯವನ್ನು ಬಲಪಡಿಸುತ್ತದೆ
ಪ್ರತಿದಿನ ಅರ್ಧ ಗಂಟೆ ನಡೆದರೆ, ಅದು ಯಾವುದೇ ರೀತಿಯ ಪರಿಧಮನಿಯ ಹೃದಯ ಕಾಯಿಲೆಯ ಅಪಾಯವನ್ನು ಶೇಕಡಾ 19ರಷ್ಟು ಕಡಿಮೆ ಮಾಡುತ್ತದೆ. ಸ್ಪಿಡ್ ನಲ್ಲಿ ಹೆಚ್ಚು ಹೆಚ್ಚು ನಡೆದರೆ, ಅಪಾಯದ ಸಾಧ್ಯತೆ ಇನ್ನೂ ಕಡಿಮೆಯಾಗುತ್ತದೆ.

ಮೆದುಳಿಗೆ ಉತ್ತಮ
ಮೆದುಳಿನ ಅಂಗಾಂಶವು ವಾರಕ್ಕೆ 2 ಗಂಟೆಗಳ ಕಾಲ ಪ್ರಾಮಾಣಿಕವಾಗಿ ನಡೆಯುವ ಜನರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ಇದು ಮೆದುಳಿನ ಪಾರ್ಶ್ವವಾಯುವಿನ ಅಪಾಯವನ್ನು ಶೇಕಡಾ 30ರಷ್ಟು ಕಡಿಮೆ ಮಾಡುತ್ತದೆ.

ರಕ್ತದ ಸಕ್ಕರೆ ನಿಯಂತ್ರಿಸುತ್ತದೆ
ಪ್ರತಿದಿನ ಊಟ ಮಾಡಿದ ಬಳಿಕ ನಡೆದಾಡಿದರೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣವಾಗುತ್ತದೆ. ಒಂದು ಸಂಶೋಧನೆಯ ಪ್ರಕಾರ ಪ್ರತಿದಿನ ಊಟ ಮಾಡಿದ ನಂತರ 15 ನಿಮಿಷಗಳ ನಡಿಗೆ ಮಾಡಿದರೆ ರಕ್ತದಲ್ಲಿ ಸಕ್ಕರೆ ಕಡಿಮೆ ಇರುತ್ತದೆ.

ಕೀಲು ನೋವನ್ನು ಕಡಿಮೆ ಮಾಡುತ್ತದೆ
ಸೊಂಟ ಮತ್ತು ಮೊಣಕಾಲು ಮೂಳೆ ನೋವು ಇದ್ದರೆ ಪ್ರತಿದಿನ ನಡೆಯಬೇಕು. ಇದು ಮಸಲ್ಸ್ ಬಲಪಡಿಸಲು ಸಾಕಷ್ಟು ಸಹಾಯ ಮಾಡುತ್ತದೆ. ಸಂಧಿವಾತ ಹೊಂದಿರುವ ಜನರು ನಡೆಯಬೇಕು.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ತಕ್ಷಣ ಶೀತ ಬಂದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಡೆಯಬೇಕು. ಫ್ಲೂ ಸೈಜೆನ್ 1,000 ಜನರನ್ನು ಸಂಶೋಧನೆ ಮಾಡಿತು, ಅವರು ದಿನಕ್ಕೆ 30 ರಿಂದ 45 ನಿಮಿಷಗಳ ಕಾಲ ನಡೆಯುವ ಜನರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಶೇಕಡಾ 45 ರಷ್ಟು ಕಡಿಮೆ ಎಂದು ಕಂಡುಕೊಂಡರು.

ತೂಕ ನಿಯಂತ್ರಣವನ್ನು ಇಡುತ್ತದೆ
ಪ್ರತಿದಿನ 30 ನಿಮಿಷಗಳ ಕಾಲ ನಡೆಯುವ ಜನರು 50 ಪ್ರತಿಶತ ಕಡಿಮೆ ಬೊಜ್ಜು ಪ್ರಮಾಣವನ್ನು ಹೊಂದಿರುತ್ತಾರೆ. ಸ್ನಾಯುಗಳು ಬಲವಾಗಿರುತ್ತವೆ ಮತ್ತು ಯಾವುದೇ ಸೋಮಾರಿತನವಿಲ್ಲದೆ ಕೆಲಸವನ್ನು ಮಾಡುತ್ತೀರಿ.

ಮನಸ್ಥಿತಿಯನ್ನು ಉತ್ತಮವಾಗಿರಿಸುತ್ತದೆ
ಪ್ರತಿದಿನ 30 ನಿಮಿಷಗಳ ಕಾಲ ನಡೆದರೆ, ಉತ್ತಮ ಮನಸ್ಥಿತಿಯಲ್ಲಿರುತ್ತೀರಿ ಎಂದು ಸಂಶೋಧನೆಯು ಕಂಡುಕೊಂಡಿದೆ. ಇದು ಒತ್ತಡ, ಭಯ, ಖಿನ್ನತೆ, ನಕಾರಾತ್ಮಕ ಭಾವನೆಗಳನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲ, ಇದು ಮಾನಸಿಕ ಆರೋಗ್ಯವನ್ನೂ ಆರೋಗ್ಯಕರವಾಗಿರಿಸುತ್ತದೆ.

ಶ್ವಾಸಕೋಶದ ಅರೋಗ್ಯ
ಪ್ರತಿದಿನ ನಡೆಯುತ್ತಿದ್ದರೆ, ದೇಹಕ್ಕೆ ಉತ್ತಮ ಪ್ರಮಾಣದಲ್ಲಿ ಗಾಳಿ ಸೇರುತ್ತದೆ. ಇದರಿಂದ ಶ್ವಾಸಕೋಶದ ಅರೋಗ್ಯ ಕೂಡ ಉತ್ತಮವಾಗಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.