ಬೆಳಗ್ಗೆ ಎದ್ದ ತಕ್ಷಣವೇ ಫೋನ್ ಚೆಕ್ ಮಾಡುತ್ತಿರಾ?? ಎಚ್ಚರ!!

First Published Apr 5, 2021, 6:28 PM IST

ಇತ್ತೀಚಿಗೆ ಸ್ಮಾರ್ಟ್ ಫೋನ್ ಬಳಕೆ ಅದೆಷ್ಟು ಅಭ್ಯಾಸವಾಗಿದೆ ಎಂದರೆ, ಫೋನ್ ಇಲ್ಲದೆ ಒಂದು ದಿನವೂ ಕಳೆಯುವುದು ಕಷ್ಟ. ಆದರೆ, ಫೋನ್ ಮೇಲೆ ಇಂತಹ ಅವಲಂಬನೆ ಅಪಾಯಕಾರಿ. ಅದರಲ್ಲೂ ಬೆಳಗ್ಗೆ ಒಬ್ಬ ವ್ಯಕ್ತಿ ತನ್ನ ಸ್ಮಾರ್ಟ್ ಫೋನ್ ಚೆಕ್ ಮಾಡುವ ಅಭ್ಯಾಸವಿದ್ದರೆ ಸಾಕಷ್ಟು ಹಾನಿಯಾಗುತ್ತದೆ. ಒಂದು ಸಂಶೋಧನೆ ಪ್ರಕಾರ, ಸ್ಮಾರ್ಟ್ ಫೋನ್ ಬಳಸುವವರಲ್ಲಿ ಶೇ.80ರಷ್ಟು ಮಂದಿ ಬೆಳಗ್ಗೆ ಎದ್ದ 15 ನಿಮಿಷದಲ್ಲಿ ತಮ್ಮ ಫೋನ್‌ಗಳನ್ನು ಪರೀಕ್ಷಿಸುತ್ತಾರೆ. ಇದರಿಂದ ದೇಹಕ್ಕೆ ಏನಾಗುತ್ತದೆ ಎಂದು ತಿಳಿಯಿರಿ?