ರಕ್ತದ ಗುಂಪಿಗೆ ತಕ್ಕಂತೆ ನಿಮ್ಮ ಸ್ವಭಾವವೂ ಇರುತ್ತಾ? ಇಲ್ಲಿದೆ ಫುಲ್ ಡೀಟೈಲ್ಸ್
ಜನರ ಸ್ವಭಾವವು ರಕ್ತದ ಗುಂಪಿಗೆ ಅನುಗುಣವಾಗಿ ಬದಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು ಇದು ನಿಜಾ, ಒಂದೊಂದು ರಕ್ತದ ಗುಂಪಿಗೂ ಒಂದೊಂದು ರೀತಿಯ ಗುಣ ಸ್ವಭಾವ ಇರುತ್ತದೆ. ನಿಮ್ಮ ರಕ್ತದ ಗುಂಪಿಗೆ ಅನುಗುಣವಾಗಿ ಯಾವ ವ್ಯಕ್ತಿ ಯಾವ ವಿಶೇಷ ಗುಣಗಳನ್ನು ಹೊಂದಿರುತ್ತಾನೆ ಅನ್ನೋದನ್ನು ತಿಳಿದುಕೊಳ್ಳಿ.
ಮಾನವನ ದೇಹದಲ್ಲಿ 4 ರಕ್ತದ ಗುಂಪುಗಳಿವೆ, ಇದರಲ್ಲಿ A, B, AB ಮತ್ತು O ರಕ್ತದ ಗುಂಪುಗಳು (blood group) ಕಂಡುಬರುತ್ತವೆ. ಈ 4 ರಕ್ತ ಗುಂಪುಗಳಲ್ಲಿ, ನೆಗೆಟಿವ್ ಮತ್ತು ಪಾಸಿಟಿವ್ ರಕ್ತದ ಗುಂಪುಗಳನ್ನು ವಿಂಗಡಿಸಲಾಗಿದೆ. ವಿವಿಧ ರಕ್ತದ ಗುಂಪುಗಳ ಪ್ರಕಾರ, ಜನರ ಸ್ವಭಾವ ಸಹ ವಿಭಿನ್ನವಾಗಿದೆ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ. ರಕ್ತದ ಗುಂಪಿನಲ್ಲಿರುವ ಜನರು ಬಹಳಷ್ಟು ಸಾಮ್ಯತೆಗಳನ್ನು ಹೊಂದಿರುತ್ತಾರೆ. ಇಂದು ನಾವು ನಿಮಗೆ ಎಲ್ಲಾ ರಕ್ತದ ಗುಂಪಿನ ಜನರ ಸ್ವಭಾವಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹೇಳುತ್ತಿದ್ದೇವೆ. ತಿಳಿಯಿರಿ.
O ರಕ್ತದ ಗುಂಪಿಗೆ ಸಂಬಂಧಿಸಿದ ವಿಶೇಷ ವಿಷಯಗಳು
O+ ರಕ್ತದ ಗುಂಪು
ಅಂತಹ ಜನರು ಇತರ ಜನರಿಗೆ ಸಹಾಯ ಮಾಡುವಲ್ಲಿ ನಂಬಿಕೆ ಹೊಂದಿದ್ದಾರೆ.
ಅವರ ಮನಸ್ಸು ತುಂಬಾ ಉದಾರವಾಗಿರುತ್ತೆ ಮತ್ತು ಅವರು ಸ್ವಭಾವದಲ್ಲಿ (character) ಸಾಕಷ್ಟು ಸ್ನೇಹಪರರಾಗಿದ್ದಾರೆ.
ಈ ರಕ್ತದ ಗುಂಪಿನ ಜನರು ಉಲ್ಲಾಸಭರಿತರು, ಮಾತನಾಡುವವರು ಮತ್ತು ತುಂಬಾನೆ ಕೂಲ್ ಸ್ವಭಾವದವರಾಗಿರುತ್ತಾರೆ.
O- ರಕ್ತದ ಗುಂಪು
ಈ ರಕ್ತದ ಗುಂಪಿನ ಜನರು ಸಹ ಸಹಾಯ ಮಾಡುವ ಸ್ವಭಾವದವರು.
ಈ ಜನರು ಸಮಾಜಮುಖಿ, ಮುಕ್ತ ಮನಸ್ಸಿನವರು ಮತ್ತು ಚಿಂತನಶೀಲರು. ಅವರ ಸ್ವಭಾವವು ಉಲ್ಲಾಸದಿಂದ ಕೂಡಿದೆ. ಇವರು ತುಂಬಾನೆ ಹಸನ್ಮುಖಿಯಾಗಿರುತ್ತಾರೆ.
A ರಕ್ತದ ಗುಂಪಿಗೆ ಸಂಬಂಧಿಸಿದ ವಿಶೇಷ ವಿಷಯಗಳು
A+ ರಕ್ತದ ಗುಂಪು
ಈ ರಕ್ತದ ಗುಂಪಿನಲ್ಲಿರುವ ಜನರ ನಾಯಕತ್ವದ ಸಾಮರ್ಥ್ಯವು (leadership quality) ಉತ್ತಮವಾಗಿದೆ. ಅವರು ನಾಯಕತ್ವದ ಗುಣವನ್ನು ಹೊಂದಿದ್ದಾರೆ.
ಈ ಜನರು ಸಾಕಷ್ಟು ಬುದ್ಧಿವಂತರು ಮತ್ತು ಎಲ್ಲರ ವಿಶ್ವಾಸವನ್ನು ಗಳಿಸುವಲ್ಲಿ ನಂಬಿಕೆ ಇಟ್ಟಿರುತ್ತಾರೆ.
A-ರಕ್ತದ ಗುಂಪು
ಈ ಗುಂಪಿನಲ್ಲಿರುವ ಜನರು ತುಂಬಾ ಶ್ರಮಜೀವಿಗಳು. ಅವರು ತೊಂದರೆಗಳು ಬಂದ ಕೂಡಲೇ ಓಡಿಹೋಗುವುದಿಲ್ಲ. ಅದನ್ನು ಎದುರಿಸುತ್ತಾರೆ.
ಈ ಜನರು ಉತ್ತಮ ಯೋಜನೆಯೊಂದಿಗೆ ಕೆಲಸ ಮಾಡುತ್ತಾರೆ ಮತ್ತು ಯಶಸ್ವಿಯಾಗುತ್ತಾರೆ.
ಈ ಜನರು ಸಾಕಷ್ಟು ಆಕರ್ಷಕ ಮತ್ತು ಬಲಶಾಲಿಗಳು.
B ರಕ್ತದ ಗುಂಪಿಗೆ ಸಂಬಂಧಿಸಿದ ವಿಶೇಷ ವಿಷಯಗಳು
B+ ರಕ್ತದ ಗುಂಪು
ಈ ರಕ್ತದ ಗುಂಪಿನಲ್ಲಿರುವ ಜನರು ತುಂಬಾನೆ ಭಾವನಾತ್ಮಕರಾಗಿರುತ್ತಾರೆ ಮತ್ತು ಯಾವಾಗಲೂ ಇತರರಿಗೆ ಸಹಾಯ ಮಾಡುತ್ತಾರೆ. ಅದರಲ್ಲಿ ಖುಷಿಯನ್ನು ಕಾಣುತ್ತಾರೆ.
ಈ ಜನರು ಸಾಕಷ್ಟು ಸುಂದರ ಮತ್ತು ಬುದ್ಧಿವಂತರಾಗಿರುತ್ತಾರೆ. ಅಲ್ಲದೇ ಸಂಬಂಧಗಳ ಮಹತ್ವವನ್ನು ಅರ್ಥಮಾಡಿಕೊಂಡವರಾಗಿರುತ್ತಾರೆ.
B- ರಕ್ತದ ಗುಂಪು
ಈ ರಕ್ತದ ಗುಂಪಿನಲ್ಲಿರುವ ಜನರು ಸುಂದರವಾಗಿರುತ್ತಾರೆ ಮತ್ತು ಬುದ್ಧಿವಂತರೂ ಆಗಿರುತ್ತಾರೆ. ಅಷ್ಟೇ ಅಲ್ಲ ಅವರು ತುಂಬಾ ಕಷ್ಟಪಟ್ಟು ದುಡಿಯುವ ಸ್ವಭಾವದವರು, ಅವರು ಕಠಿಣ ಪರಿಶ್ರಮದಿಂದ ಎಲ್ಲವನ್ನೂ ಸಾಧಿಸುತ್ತಾರೆ. ಜೀವನದಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ.
AB+ ರಕ್ತದ ಗುಂಪಿಗೆ ಸಂಬಂಧಿಸಿದ ವಿಶೇಷ ವಿಷಯಗಳು
ಈ ರಕ್ತದ ಗುಂಪಿನಲ್ಲಿರುವ ಜನರು ತುಂಬಾನೆ ಬುದ್ಧಿವಂತರಾಗಿರುತ್ತಾರೆ. ಅವರು ಮಹನೀಯರು ಮತ್ತು ಸ್ವಭಾವತಃ ಎಲ್ಲಾ ವಿಷಯ ಮತ್ತು ಜನರ ಬಗ್ಗೆ ತುಂಬಾನೆ ಕಾಳಜಿ ವಹಿಸುತ್ತಾರೆ.
ಈ ಜನರು ತಮ್ಮನ್ನು ತಾವು ಯಾವುದೇ ತೊಂದರೆ ಬಾರದಂತೆ, ಸಾಕಷ್ಟು ಸುರಕ್ಷಿತವಾಗಿಡುತ್ತಾರೆ.
AB- ರಕ್ತದ ಗುಂಪು
ಈ ಗುಂಪಿನ ರಕ್ತ ಹೊಂದಿರುವ ಜನರ ಮನಸ್ಸುಗಳು ಸಾಕಷ್ಟು ವೇಗವಾಗಿ ಓಡುತ್ತವೆ. ಅವರು ಸಾಕಷ್ಟು ಬುದ್ಧಿವಂತರಾಗಿರುತ್ತಾರೆ ಎಂದು ಹೇಳಲಾಗುತ್ತದೆ.
ಅಷ್ಟೇ ಅಲ್ಲ AB- ರಕ್ತದ ಗುಂಪಿಗೆ ಸೇರಿದ ಜನರು ಎಲ್ಲವನ್ನೂ ಬಹಳ ಬೇಗನೆ ಅರ್ಥಮಾಡಿಕೊಳ್ಳುತ್ತಾರೆ.