MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ತೂಕ ಇಳಿಸೋಕೆ ಡಯಟಿಂಗ್ ಮಾಡಿದ್ರೆ ಕೂದಲು ಉದುರುತ್ತಾ?

ತೂಕ ಇಳಿಸೋಕೆ ಡಯಟಿಂಗ್ ಮಾಡಿದ್ರೆ ಕೂದಲು ಉದುರುತ್ತಾ?

ಒಂದು ವೇಳೆ ನೀವು ಡಯಟ್ ಮಾಡುತ್ತಿದ್ದರೆ ಮತ್ತು ಕೂದಲು ಉದುರುವಿಕೆ ಅಥವಾ ತಲೆನೋವು, ವಾಕರಿಕೆ ಅಥವಾ ವಾಂತಿ ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿದ್ದರೆ, ತಡಮಾಡದೆ ಡಾಕ್ಟರ್ ಹತ್ತಿರ ಹೋಗಿ. ಹೆಚ್ಚಿನ ಮಾಹಿತಿಗೆ ಈ ಸ್ಟೋರಿ ಓದಿ.  

2 Min read
Suvarna News
Published : Jan 25 2023, 11:07 AM IST
Share this Photo Gallery
  • FB
  • TW
  • Linkdin
  • Whatsapp
113

ತಮ್ಮ ತೂಕ ಇಳಿಸುವ ಜರ್ನಿಯಲ್ಲಿ,  ಹೆಚ್ಚಿನ ಜನರು ಕೆಲವು ಆಹಾರಗಳನ್ನು(Food) ಬಿಟ್ಟುಬಿಡುತ್ತಾರೆ ಹಾಗೆ ಇನ್ನೂ ಅನೇಕರು ಆಹಾರದಲ್ಲಿ ಕೆಲವು ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಾರೆ. ಹೆಚ್ಚುವರಿ ಕಿಲೋ ಕಳೆದುಕೊಳ್ಳೋ ವಿಷಯಕ್ಕೆ ಬಂದಾಗ ಜನರು ಹೆಚ್ಚಿನ ಪ್ರಮಾಣದಲ್ಲಿ ಆಹಾರಗಳನ್ನು ತ್ಯಜಿಸುತ್ತಾರೆ, ಆದರೆ ಇದು ನಿಮ್ಮ ಕೂದಲಿನ ಮೇಲೆ ಪರಿಣಾಮ ಬೀರುತ್ತಾ? ಇದರ ಬಗ್ಗೆ  ತಿಳಿಯಲು ಮುಂದೆ ಓದಿ. 

213

1) ಹೆಚ್ಚಿನ ಜನರು ಬೇಗನೆ ತೂಕ ಇಳಿಸಿಕೊಳ್ಳಲು(Weight loss) ಸಾಧ್ಯವಾದಷ್ಟು ಕಡಿಮೆ ತಿನ್ನಲು ಪ್ರಯತ್ನಿಸುತ್ತಾರೆ. ಕಡಿಮೆ ಆಹಾರ ತಿಂದಷ್ಟು ದೇಹಕ್ಕೆ ಪೌಷ್ಟಿಕಾಂಶ ಕಡಿಮೆ ಪ್ರಮಾಣದಲ್ಲಿ ಸಿಗುತ್ತೆ. ಇದರಿಂದ ಕೂದಲು ಗಟ್ಟಿಯಾಗುವ ಬದಲು ಉದುರುವ ಸಾಧ್ಯತೆ ಹೆಚ್ಚು. 

313

2) ಜನರು, ಕೆಲವೊಮ್ಮೆ, ಆಹಾರ ತಜ್ಞರನ್ನು ಸಂಪರ್ಕಿಸದೆ, ಅನ್ನ, ರೊಟ್ಟಿ, ಆಲೂಗಡ್ಡೆ, ತುಪ್ಪ ಮತ್ತು ಬಾಳೆಹಣ್ಣಿನಂತಹ(Banana) ಹಣ್ಣುಗಳನ್ನು ತಮ್ಮ ಆಹಾರದಿಂದ ಕಡಿತಗೊಳಿಸುತ್ತಾರೆ. ಹೀಗೆ ಮಾಡೋದರಿಂದ ಕೂದಲು ಹೆಚ್ಚಿನ ಪ್ರಮಾಣದಲ್ಲಿ ಉದುರಲು ಆರಂಭಿಸುತ್ತದೆ.

413

3) ಅನೇಕ ಜನರು ಮಧ್ಯಂತರ ಉಪವಾಸ ಮತ್ತು ಕೀಟೋ, ಡಿಟಾಕ್ಸ್ ಇತ್ಯಾದಿಗಳಂತಹ ಆಹಾರಗಳಿಗೆ ಬಲಿಯಾಗುತ್ತಾರೆ. ಈ ವಿಧಾನಗಳು ಆಹಾರ ಮತ್ತು ಕ್ಯಾಲೊರಿ ಸೇವನೆಯನ್ನು ತೀವ್ರವಾಗಿ ನಿರ್ಬಂಧಿಸುತ್ತವೆ. ಪರಿಣಾಮವಾಗಿ, ದಿನಕಳೆದಂತೆ ದೇಹವು ಸಾಕಷ್ಟು ಮ್ಯಾಕ್ರೋ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಪಡೆಯೋದಿಲ್ಲ, ಇದರಿಂದಾಗಿ ಕೂದಲು ಉದುರುವಿಕೆಗೆ(Hairfall) ಕಾರಣವಾಗುತ್ತೆ.

513

ನಿಮ್ಮ ಆಹಾರ ಪದ್ಧತಿಯು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಯಾಕಂದ್ರೆ ಆಹಾರ ಮತ್ತು ಕೂದಲು ಉದುರುವಿಕೆಯ ನಡುವೆ ಸಂಬಂಧವಿದೆ. ನೀವು ಕ್ಯಾಲೋರಿ ನಿರ್ಬಂಧಿತ ಆಹಾರ ಅನುಸರಿಸುತ್ತಿದ್ದರೆ, ಇದರಿಂದ ಪ್ರೋಟೀನ್(Protein), ಕೊಬ್ಬಿನಾಮ್ಲ ಮತ್ತು ಜಿಂಕ್ ನಂತಹ ಸಾಕಷ್ಟು ಅಗತ್ಯ ಪೋಷಕಾಂಶಗಳನ್ನು ಪಡೆಯದಿರಬಹುದು. ಇದು ಈ ಪೋಷಕಾಂಶಗಳ ಕೊರತೆಗೆ ಕಾರಣವಾಗಬಹುದು. 

613
hair fall

hair fall

ದೇಹದಲ್ಲಿ ಪೋಷಕಾಂಶ(Nutrient) ಕಡಿಮೆಯಾದಾಗ ಟೆಲೋಜೆನ್ ಎಫ್ಲುವಿಯಮ್ ಎಂದು ಕರೆಯಲ್ಪಡುವ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಆದ್ದರಿಂದ, ಯಾವುದೇ ರೀತಿಯ ಪೋಷಕಾಂಶಗಳನ್ನು ತಿನ್ನೋದನ್ನು ಆವಾಯ್ಡ್ ಮಾಡಿದ ನಂತರ ಅನೇಕ ಜನರು ಕೂದಲು ಉದುರುವಿಕೆಯ ಬಗ್ಗೆ ದೂರು ನೀಡುತ್ತಾರೆ.

713

ಕೂದಲು ಉದುರದ ಹಾಗೆ ತೂಕ ಕಳೆದುಕೊಳ್ಳಬಹುದೇ?
1. ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸಬೇಡಿ. ನಿಧಾನವಾಗಿ ತೂಕ ಇಳಿಸಲು ಪ್ರಾರಂಭಿಸಿ, 500 ಕ್ಯಾಲೊರಿಗಳಿಗಿಂತ(Calorie) ಹೆಚ್ಚಿರುವ ಆಹಾರ ಸೇವಿಸಬೇಡಿ..

813

2. ಸಾಕಷ್ಟು ಪ್ರಮಾಣದ ಪ್ರೋಟೀನ್ ಸೇವಿಸಿ. ಪ್ರತಿ ಕೆಜಿ ದೇಹದ ತೂಕಕ್ಕೆ 1.5 ರಿಂದ 2 ಕೆಜಿ ಪ್ರೋಟೀನ್ ಸೂಕ್ತ. 


3. ನಿಮ್ಮ ಆಹಾರದಲ್ಲಿ ವಿವಿಧ ಧಾನ್ಯಗಳು, ದ್ವಿದಳ ಧಾನ್ಯ, ಡೈರಿ ಉತ್ಪನ್ನ, ಸೀಸನಲ್ ಹಣ್ಣು(Seasonal fruits), ಮತ್ತು ಸೀಡ್ಸ್ ಸೇರಿಸೋದನ್ನು ಖಚಿತಪಡಿಸಿಕೊಳ್ಳಿ.

913

ಕೂದಲು ಉದುರುವುದನ್ನು ತಡೆಗಟ್ಟಲು, ಉರಿಯೂತ ನಿವಾರಕ ಮತ್ತು ಸಸ್ಯ ಆಧಾರಿತ ಆಹಾರಗಳನ್ನು ಒಳಗೊಂಡಿರುವ ಸಮತೋಲಿತ ಆಹಾರ ಆಯ್ಕೆ ಮಾಡೋದು ಪರಿಣಾಮಕಾರಿ. ದೈನಂದಿನ ಪ್ರೋಟೀನ್, ವಿಟಮಿನ್ಸ್ ಮತ್ತು ಮಿನರಲ್ಸ್ ಪಡೆಯುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ಯಾವುದೇ ಕ್ರ್ಯಾಶ್ ಡಯಟ್  ಅನುಸರಿಸೋದರಿಂದ ದೂರವಿರಬೇಕು. ಸರಿಯಾದ ಆಹಾರ ತಜ್ಞರನ್ನು ಸಂಪರ್ಕಿಸಿ. ನೀವು ಡಯಟ್ ಮಾಡುತ್ತಿದ್ದರೆ ಮತ್ತು ಕೂದಲು ಉದುರುವಿಕೆ ಅಥವಾ ಹೆಡೆಕ್, ವಾಕರಿಕೆ ಅಥವಾ ವಾಂತಿ(Vomit) ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿದ್ದರೆ, ತಡಮಾಡದೆ ಡಾಕ್ಟರ್ ಬಳಿ ಹೋಗಿ.

1013

ನಿಮ್ಮ ಕೂದಲಿಗೆ ಉತ್ತಮವಾದ ಆಹಾರ ಪದಾರ್ಥಗಳು ಹೀಗಿವೆ,

ಕೋಳಿ, ಫ್ಯಾಟಿ ಫಿಶ್, ಡೈರಿ, ದ್ವಿದಳ ಧಾನ್ಯಗಳು, ಟೋಫು ಮತ್ತು ಮೊಟ್ಟೆಗಳಂತಹ ಪ್ರೋಟೀನ್ ಮೂಲಗಳು.
ಡಾರ್ಕ್ ಗ್ರೀನ್ ಸೊಪ್ಪು ತರಕಾರಿಗಳು(Dark green vegetables)
ಗೆಣಸು, ಕುಂಬಳಕಾಯಿ, ಕ್ಯಾರೆಟ್, ಬೆಲ್ ಪೆಪ್ಪರ್, ಬ್ರೊಕೋಲಿ, ಬೀಟ್ರೂಟ್, ನೆಲ್ಲಿಕಾಯಿ 

1113

ಸಿಟ್ರಸ್ ಹಣ್ಣು(Citrus fruit), ಬೆರ್ರಿ, ಪೇರಳೆ, ಕಿತ್ತಳೆ, ಬಾಳೆಹಣ್ಣು
ತೆಂಗಿನಕಾಯಿ, ಬಾದಾಮಿ, ವಾಲ್ನಟ್, ಗೋಡಂಬಿ, ಕಡಲೆಕಾಯಿ ಮತ್ತು ಬ್ರೆಜಿಲ್ ಬೀಜಗಳಂತಹ ಬೀಜಗಳು.

1213

ಕುಂಬಳಕಾಯಿ, ಕಪ್ಪು ಎಳ್ಳು, ಅಗಸೆ, ಎಳ್ಳು, ಸೂರ್ಯಕಾಂತಿ ಮತ್ತು ಅಲಿವ್ / ಹಲೀಮ್ ಬೀಜಗಳಂತಹ ಬೀಜಗಳು.
ನಿಮ್ಮ ಊಟದಲ್ಲಿ ಕರಿಬೇವಿನ ಎಲೆ(Curry leaves), ಕಲೋಂಜಿ , ಮೆಂತ್ಯ ಬೀಜಗಳನ್ನು ಸೇರಿಸೋದು ಸಹ ತುಂಬಾ ಪ್ರಯೋಜನಕಾರಿ.

1313

ಈ ಆಹಾರಗಳು ನಿಮಗೆ ಸಾಕಷ್ಟು ಪ್ರೋಟೀನ್, ಒಮೆಗಾ 3(Omega 3), ವಿಟಮಿನ್ ಎ, ಬಿ, ವಿಶೇಷವಾಗಿ ಬಯೋಟಿನ್, ಬಿ 12, ಸಿ, ಇ ಮತ್ತು ಡಿ ಮತ್ತು ಕಬ್ಬಿಣ, ಜಿಂಕ್ ಮತ್ತು ಸೆಲೆನಿಯಂನಂತಹ ಮಿನರಲ್ಸ್ ಕೊಡುತ್ತವೆ ಎಂದು ಖಚಿತಪಡಿಸಿಕೊಳ್ಳಿ. ನೀವು ಮೀನು ತಿನ್ನದಿದ್ದರೆ ಒಮೆಗಾ -3 ಪೂರಕವನ್ನು ತೆಗೆದುಕೊಳ್ಳಿ.

About the Author

SN
Suvarna News
ಆಹಾರಕ್ರಮ
ಆಹಾರ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved