ದೇವರಿಗೆ ಬಳಸೋ ಕರ್ಪೂರದಲ್ಲಿ ನಾವು ಸ್ನಾನ ಮಾಡಿದ್ರೆ ಏನೇನು ಆಗ್ಬಹುದು?
ಬೆಳಗ್ಗೆ ಆಫೀಸ್‍ಗೆ ಹೋಗೋ ಅರ್ಜೆಂಟ್ ಅಲ್ಲೇ ಸ್ನಾನ ಮಾಡಿದ್ರೂ.. ರಾತ್ರಿ ಮನೆಗೆ ವಾಪಸ್ ಬರೋವರೆಗೂ ಫ್ರೆಶ್ ಆಗಿ ಇರೋದು ಕಷ್ಟ ಇದಕ್ಕೆ ಜನ ಸುಗಂಧ ದ್ರವ್ಯ ಯೂಸ್ ಮಾಡ್ತಾರೆ. ಆದರೆ ಯಾವುದೇ ಕೆಮಿಕಲ್ ಜಂಟಾಟವಿಲ್ಲದೇ ಕೇವಲ ಪೂಜೆಗೆ ಬಳಸುವ ಇದೊಂದು ವಸ್ತುವನ್ನು ನೀವು ಸ್ನಾನ ಮಾಡುವ ನೀರಿನಲ್ಲಿ ಬಳಸುವುದರಿಂದ ದಿನವಿಿ ಫ್ರೆಶ್ ಆಗಿ ಇರಬಹುದು.
ಕರ್ಪೂರ ಅಂದ್ರೆ ಮೊದಲು ನೆನಪಾಗೋದೇ ದೇವರು. ಆಮೇಲೆ ಅದರ ಪರಿಮಳ. ಕರ್ಪೂರ ಹಚ್ಚದೇ, ಆರತಿ ಬೆಳಗದೆ ಪೂಜೆ ಪೂರ್ತಿಯಾಗಲ್ಲ. ಆದ್ರೆ ಪೂಜೆಗೆ ಮಾತ್ರ ಅಲ್ಲ ಆಯುರ್ವೇದದ ಪ್ರಕಾರ ಹಲವು ಆರೋಗ್ಯ ಸಮಸ್ಯೆಗಳನ್ನ ದೂರ ಮಾಡೋದ್ರಲ್ಲೂ ಕರ್ಪೂರ ಮುಖ್ಯ ಪಾತ್ರ ವಹಿಸುತ್ತೆ. ಕೆಲ ಕಾಯಿಲೆಗಳನ್ನ ದೂರ ಮಾಡಲು ಕರ್ಪೂರನ ಬಳಸ್ತಾರೆ. ಆದ್ರೆ ನಮ್ಮನ್ನ ದಿನವಿಡೀ ಫ್ರೆಶ್ ಆಗಿ ಇಡೋಕೆ, ನಮ್ಮ ಸೌಂದರ್ಯ ಹೆಚ್ಚಿಸೋಕೂ ಈ ಕರ್ಪೂರ ಉಪಯೋಗಕ್ಕೆ ಬರುತ್ತೆ ಅಂತ ನಿಮಗೆ ಗೊತ್ತಾ?
ಸ್ನಾನ ಮಾಡಿದ ಒಂದು ಗಂಟೆಗೆಲ್ಲಾ ಆ ಫ್ರೆಶ್‍ನೆಸ್ ಕಡಿಮೆಯಾಗುತ್ತೆ. ಬೆವರಿನ ವಾಸನೆ ಬರೋಕೆ ಶುರುವಾಗುತ್ತೆ. ಆ ವಾಸನೆ ಕಂಟ್ರೋಲ್ ಮಾಡೋಕೆ ಪರ್ಫ್ಯೂಮ್, ಡಿಯೋಡೆಂಟ್ ಹಾಕೊಳ್ತೀವಿ. ಅವೂ ಕೂಡ ಒಂದು ಗಂಟೆ ಮಾತ್ರ ಫ್ರೆಶ್ ಆಗಿ ಇಡಬಲ್ಲವು. ಅಷ್ಟೇ. ಆದ್ರೆ ನಾವು ಸ್ನಾನ ಮಾಡೋ ಟೈಮಲ್ಲಿ ಒಂದು ಪುಟ್ಟ ಕರ್ಪೂರದ ಪೀಸನ್ನು ನೀರಿಗೆ ಸೇರಿಸಿ ಸ್ನಾನ ಮಾಡಿದ್ರೆ ದಿನವಿಡೀ ಫ್ರೆಶ್ ಆಗಿ ಇರೋದಲ್ಲದೆ, ನಮ್ಮ ಸೌಂದರ್ಯವೂ ಹೆಚ್ಚುತ್ತೆ. ಕರ್ಪೂರದಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಬಯೋಟಿಕ್ ಅಂಶಗಳಿವೆ. ನೀರಲ್ಲಿ ಹಾಕಿ ಸ್ನಾನ ಮಾಡಿದ್ರೆ ತುರಿಕೆ, ದದ್ದು, ಮೊಡವೆ ಹೋಗುತ್ತೆ. ಚರ್ಮ ಬೆಳ್ಳಗಾಗುತ್ತೆ. ನೈಸರ್ಗಿಕ ಸೌಂದರ್ಯ ವರ್ಧಕವಾಗಿ ಕೆಲಸ ಮಾಡುತ್ತೆ.
ಕರ್ಪೂರದ ಪರಿಮಳ ಮಾನಸಿಕ ಒತ್ತಡ, ಆತಂಕವನ್ನ ಕಡಿಮೆ ಮಾಡುತ್ತೆ. ಈಗಿನ ಕಾಲದಲ್ಲಿ ಕೆಲಸದ ಒತ್ತಡದಿಂದ ಬಳಲುವವರು ತುಂಬಾ ಜನ. ಅವರು ಸ್ನಾನ ಮಾಡುವಾಗ ಈ ಕರ್ಪೂರವನ್ನ ಬಳಸಿದ್ರೆ ಆ ಒತ್ತಡದಿಂದ ಹೊರಬರೋ ಸಾಧ್ಯತೆ ಇರುತ್ತೆ. ಸ್ಟ್ರೆಸ್ ರಿಲೀಫ್ ಆಗುತ್ತೆ. ಅಷ್ಟೇ ಅಲ್ಲ ಹಲವಾರು ರೀತಿಯ ದೈಹಿಕ ಸಮಸ್ಯೆಗಳನ್ನೂ ಕಡಿಮೆ ಮಾಡುತ್ತೆ. ತಲೆನೋವು, ಬೆನ್ನು ನೋವು ಕಡಿಮೆಯಾಗುತ್ತೆ. ಕೀಲು ನೋವು, ಗಾಯಗಳಿಂದ ಬಳಲುವವರು ಆಗಾಗ್ಗೆ ಈ ಕರ್ಪೂರ ಹಾಕಿ ಸ್ನಾನ ಮಾಡಿದ್ರೆ ನೋವಿಗೆ ಒಳ್ಳೆಯ ಪರಿಹಾರ ಸಿಗುತ್ತೆ.
ಕರ್ಪೂರ ಸ್ನಾನ
ಕರ್ಪೂರವನ್ನ ಬಿಸಿ ನೀರಿನಲ್ಲಿ ಹಾಕಿ ಸ್ನಾನ ಮಾಡಿದ್ರೆ ಆಯಾಸ, ಆಲಸ್ಯ ಕಡಿಮೆಯಾಗಿ ಉಲ್ಲಾಸ, ಚುರುಕುತನ ಬರುತ್ತೆ. ಹೊಸ ಶಕ್ತಿ ಬಂದಂತಾಗುತ್ತೆ. ಈ ನೀರಿನಿಂದ ಬರುವ ಪರಿಮಳದಿಂದ ಮನಸ್ಸಿಗೆ ಶಾಂತಿ ಸಿಗುತ್ತೆ. ರಾತ್ರಿ ಹೀಗೆ ಮಾಡಿದ್ರೆ ನಿದ್ದೆ ಚೆನ್ನಾಗಿ ಬರುತ್ತೆ.
(ಗಮನಿಸಿ: ಇಂಟರ್ನೆಟ್‍ನಲ್ಲಿ ಸಿಗುವ ಮಾಹಿತಿ ಆಧಾರದ ಮೇಲೆ ಈ ವಿವರಗಳನ್ನ ನಿಮಗೆ ನೀಡಲಾಗಿದೆ. ಇದು ಕೇವಲ ಮಾಹಿತಿಗಾಗಿ ಮಾತ್ರ. AsianetNewskannada.com ಇದನ್ನು ಪ್ರೋತ್ಸಾಹಿಸುವುದಿಲ್ಲ.)