MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಮೊಟ್ಟೆಯ ಸಿಪ್ಪೆಯೂ ಪ್ರಯೋಜನಕಾರಿ; ಮೊಟ್ಡೆ ಬೇಯಸಿದ ನೀರನ್ನು ಚೆಲ್ಲದೆ ಹೀಗೆ ಮಾಡಿ!

ಮೊಟ್ಟೆಯ ಸಿಪ್ಪೆಯೂ ಪ್ರಯೋಜನಕಾರಿ; ಮೊಟ್ಡೆ ಬೇಯಸಿದ ನೀರನ್ನು ಚೆಲ್ಲದೆ ಹೀಗೆ ಮಾಡಿ!

ಭಾನುವಾರ ಅಥವಾ ಸೋಮವಾರ ಆಗಿರಲಿ ದಿನವೂ ಮೊಟ್ಟೆ ತಿನ್ನಿ ಎಂಬುದು ಎಲ್ಲರೂ ಕೇಳಿರುವವ ಮಾತು. ಏಕೆಂದರೆ ಮೊಟ್ಟೆಯಲ್ಲಿ ಆರೋಗ್ಯದ ನಿಧಿ ಅಡಗಿದೆ. ಅದಕ್ಕಾಗಿಯೇ ಜನರು ಬೆಳಿಗ್ಗೆ ಉಪಹಾರ ಮತ್ತು ಸಂಜೆಯ ತಿಂಡಿಯಲ್ಲಿ ಮೊಟ್ಟೆಗಳನ್ನು ಸೇರಿಸುತ್ತಾರೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಮೊಟ್ಟೆ ರಾಮಬಾಣವಿದ್ದಂತೆ. ಮೊಟ್ಟೆಯಲ್ಲಿ ಹೆಚ್ಚಿನ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಾರ್ಬೋಹೈಡ್ರೇಟ್‌ಗಳ ಜೊತೆಗೆ, ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ಸಾಕಷ್ಟು ಕಂಡುಬರುತ್ತದೆ. ಅಷ್ಟೇ ಅಲ್ಲ ಮೊಟ್ಟೆಯ ಸಿಪ್ಪೆಗಳು ಸಹ ಇಂತಹ ಅನೇಕ ಗುಣಗಳನ್ನು ಹೊಂದಿವೆ. ಆದರೆ ಇದರ ಲಾಭ ಪಡೆಯುವುದು ಹೇಗೆ?

1 Min read
Author : Suvarna News
Published : Sep 08 2022, 05:41 PM IST
Share this Photo Gallery
  • FB
  • TW
  • Linkdin
  • Whatsapp
17
egg

egg

ಮೊಟ್ಟೆಯನ್ನು ಬೇಯಿಸಿದ ನಂತರ, ನಾವು ನೀರನ್ನು ಎಸೆಯುತ್ತೇವೆ. ಆದರೆ ಇದನ್ನು ಬಳಸುವುದರಿಂದ ಹಲವು ರೀತಿಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಇದರ ಜೊತೆಗೆ ಮೊಟ್ಟೆಯ ಸಿಪ್ಪೆಯಿಂದ ಸಹ ಸಾಕಷ್ಟು ಪ್ರಯೋಜನ ಇದೆ.

27

ಮೊಟ್ಟೆಗಳಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ರಂಜಕ ಸಮೃದ್ಧವಾಗಿವೆ. ಇದಲ್ಲದೆ, ಮೆಗ್ನೀಸಿಯಮ್ ಮತ್ತು ಸೋಡಿಯಂ ಕೂಡ ಇದೆ. ಮೊಟ್ಟೆಗಳನ್ನು ನೀರಿನಲ್ಲಿ ಕುದಿಸಿದಾಗ, ಈ ಅಂಶಗಳು ನೀರಿನಲ್ಲಿ ಸೇರಿಕೊಳ್ಳುತ್ತವೆ. 

37

ಮೊಟ್ಟೆ ಬೇಯಿಸಿದ ನೀರು  ಗಿಡಗಳಿಗೆ ಬೆಸ್ಟ್. ಬೇಯಿಸಿದ ಮೊಟ್ಟೆಯ ನೀರನ್ನು ಗಿಡಗಳಿಗೆ ಹಾಕಿ. ಗಿಡಗಳು ಬೆಳೆಯಲು ಈ ಎಲ್ಲಾ ಪೋಷಕಾಂಶಗಳು ಅಗತ್ಯವಿದೆ. ಆದ್ದರಿಂದ, ಬೇಯಿಸಿದ ಮೊಟ್ಟೆಯ ನೀರನ್ನು ಎಸೆಯುವ ಬದಲು, ಅದನ್ನು ಗಿಡಗಳಿಗೆ ಬಳಿಸಿ.

47
egg in microwave

egg in microwave

ಮೊಟ್ಟೆ ಬೇಯಿಸಿದ ನೀರು ಗೊಬ್ಬರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅಧ್ಯಯನವೊಂದರಲ್ಲಿ ದೃಢಪಟ್ಟಿದೆ. ಈ ಅಧ್ಯಯನವನ್ನು ಹ್ಯಾಮಿಲ್ಟನ್‌ನ ಮಾಸ್ಟರ್ಸ್ ಗಾರ್ಡನರ್ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಮೊಟ್ಟೆಯನ್ನು ಕುದಿಸಿದ ನಂತರ ಮೊಟ್ಟೆಯ ಪೋಷಕಾಂಶಗಳು ನೀರಿಗೆ ಬರುತ್ತವೆ ಎಂದು ಹೇಳಲಾಗಿದೆ. ಅದನ್ನು ಗಿಡಕ್ಕೆ ಹಾಕುವುದರಿಂದ ಪ್ರಯೋಜನ ಪಡೆಯುತ್ತಾರೆ.
 

57

ಸೂರ್ಯನ ಬೆಳಕಿನ ಕೊರತೆಯಿಂದ ಹಾಳಾಗುವ ಸಸ್ಯಗಳು ಮೊಟ್ಟೆಯ ಕುದಿಸಿದ ನೀರನ್ನು ಅವುಗಳಲ್ಲಿ ಸುರಿಯುವುದರಿಂದ ಜೀವ ಪಡೆಯುತ್ತವೆ. ಇದು ಟೊಮೆಟೊ ಮತ್ತು ಮೆಣಸಿನಕಾಯಿ ಸಸ್ಯಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.

67

ಅದೇ ಸಮಯದಲ್ಲಿ ಮೊಟ್ಟೆಯ ಸಿಪ್ಪೆ ಚರ್ಮಕ್ಕೆ ಪ್ರಯೋಜನಕಾರಿ. ಇದರಿಂದ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಮೊಟ್ಟೆಯ ಚಿಪ್ಪನ್ನು ಪುಡಿಮಾಡಿ ಮತ್ತು ಜೇನುತುಪ್ಪದೊಂದಿಗೆ ಮುಖಕ್ಕೆ ಹಚ್ಚುವುದರಿಂದ ಹೊಳೆಯುವ ಚರ್ಮವನ್ನು ನೀಡುತ್ತದೆ. ಇದು ಮೊಡವೆಗಳು, ಟ್ಯಾನಿಂಗ್, ಕಲೆಗಳನ್ನು ತೆಗೆದುಹಾಕಲು ಕೆಲಸ ಮಾಡುತ್ತದೆ. 
 

 

77

ಇದಲ್ಲದೆ, ಮೊಟ್ಟೆಯ ಸಿಪ್ಪೆಯನ್ನು ಪುಡಿ ಮಾಡಿ ವಿನೆಗರ್ ಅಥವಾ ನಿಂಬೆ ರಸದ ಜೊತೆ   ಸಹ ಅಪ್ಲೇ ಮಾಡಬಹುದು. ಇದು ಮುಖದಲ್ಲಿರುವ ಹಳೆಯ ಕಲೆಗಳನ್ನೂ ನಿವಾರಿಸುತ್ತದೆ. ಮೊಟ್ಟೆ ಕೇವಲ ಆರೋಗ್ಯ, ಸೌಂದರ್ಯ ನೀಡುವುದಷ್ಟೇ ಅಲ್ಲ,  ಗಿಡಗಳಿಗೂ ಜೀವ ತುಂಬುವ ಕೆಲಸ ಮಾಡುತ್ತದೆ.
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಆರೋಗ್ಯ

Latest Videos
Recommended Stories
Recommended image1
ಕರಿದ ಎಣ್ಣೆ ಮರಳಿ ಬಳಸದಂತೆ ಏಮ್ಸ್ ವೈದ್ಯೆ ಎಚ್ಚರಿಕೆ, ಫಾಸ್ಟ್ ಫುಡ್ ಮಳಿಗೆಗಳಲ್ಲಿನ ಪರೀಕ್ಷೆಯ ಶಾಕಿಂಗ್ ಸತ್ಯ!
Recommended image2
52 ವಯಸ್ಸಲ್ಲೂ ನಿಂತಿಲ್ಲ ಉತ್ಸಾಹ: ಪ್ರತಿ ಬೆಳಿಗ್ಗೆ ಈ ಡ್ರಿಂಕ್ಸ್​ ಕುಡಿದು ಫಿಟ್​ ಆಗಿರಿ ಎಂದ Maliaka Arora!
Recommended image3
ಪಾದಗಳ ಅತಿಯಾದ ಉರಿಯಿಂದ ಬಳಲುತ್ತಿದ್ದೀರಾ? ಇಲ್ಲಿವೆ ನೋಡಿ ಹಳ್ಳಿ ಶೈಲಿಯ ಸೂಪರ್ ಮನೆಮದ್ದುಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved