Food and Health: ಈ ಅನಾರೋಗ್ಯ ಕಾಡುತ್ತಿದ್ದರೆ ರವೆ, ಕಡ್ಲೆಹಿಟ್ಟು ತಿನ್ಬೇಡಿ
ಲಡ್ಡು, ಪಕೋಡ, ಹೀಗೆ ಹಲವು ಖಾದ್ಯ ತಯಾರಿಸಲು ಬೇಸನ್ (besan) ಅಥವಾ ರವೆ ಬಳಸಲಾಗುತ್ತದೆ. ಇದು ಬಾಯಿಗೆನೋ ರುಚಿಸಬಹುದು. ಆದರೆ ಇದರಿಂದ ಆರೋಗ್ಯಕ್ಕೆ ಏನು ಲಾಭ? ಅಥವಾ ಎಲ್ಲರಿಗೂ ಇದು ಸೇವಿಸಲು ಯೋಗ್ಯವಾಗಿದೆಯೇ? ಇಲ್ಲ ಕೆಲವು ಅರೋಗ್ಯ ಸಮಸ್ಯೆ ಹೊಂದಿರುವವರು ಇದನ್ನು ಸೇವಿಸಬಾರದು. ಇದು ಹೆಚ್ಚು ಪರಿಣಾಮ ಬೀರುತ್ತದೆ.
ಬೆಸನ್ ಮತ್ತು ರವೆಯಿಂದ ಮಾಡಿದ ಆಹರ ತಿನ್ನುವುದರಿಂದ ಕೆಲವರಿಗೆ ಉರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು (gastric problem) ಉದ್ಭವಿಸುತ್ತದೆ. ಅಂತಹ ಸಂದರ್ಭದಲ್ಲಿ, ಮೊದಲನೆಯದಾಗಿ, ನೀವು ಈ ಎರಡು ವಿಷಯಗಳಿಗೆ ಅಲರ್ಜಿ (allergy) ಹೊಂದಿಲ್ಲ ಎಂದು ತಿಳಿದುಕೊಳ್ಳಬೇಕು. ಅಲರ್ಜಿ ಇದ್ದರೂ ಬೆಸನ್ ಮತ್ತು ರವೆಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಮತ್ತಷ್ಟು ಹಾನಿಯಾಗಬಹುದು. ಬೆಸನ್ ಮತ್ತು ರವೆಯಿಂದ ಮಾಡಿದ ವಸ್ತುಗಳನ್ನು ನೀವು ಯಾವಾಗ ತಿನ್ನಬಾರದು ಎಂದು ತಿಳಿಯಿರಿ.
ಖಾಲಿ ಹೊಟ್ಟೆ (empty stomach)
ಖಾಲಿ ಹೊಟ್ಟೆಯಲ್ಲಿ ಬೆಸನ್ ಮತ್ತು ರವೆ ಸೇವನೆ ಪ್ರಯೋಜನಕಾರಿಯಲ್ಲ. ಇದು ಹೊಟ್ಟೆಯ ಪಿಎಚ್ ಮಟ್ಟವನ್ನು ದುರ್ಬಲಗೊಳಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಬೆಸನ್ ಮತ್ತು ರವೆಯಿಂದ ಮಾಡಿದ ವಸ್ತುಗಳ ಬದಲಿಗೆ ರಾಗಿ ಮತ್ತು ಓಟ್ಸ್ ನಿಂದ ಮಾಡಿದ ವಸ್ತುಗಳನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.
ಲೊ ಬ್ಲಡ್ ಶುಗರ್ (low blood pressure)
ರವೆಯಲ್ಲಿ ಫೈಬರ್ ಸಮೃದ್ಧವಾಗಿದೆ. ಫೈಬರ್ ರಕ್ತದ ಹರಿವಿನಲ್ಲಿ ಕಾರ್ಬೋಹೈಡ್ರೇಟ್ಸ್ ಹೀರಿ ಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ಊಟದ ನಂತರ ರಕ್ತದಲ್ಲಿನ ಸಕ್ಕರೆಯ ಸ್ಪೈಕ್ಸ್ ನಿಯಂತ್ರಿಸಲು ಸಹಾಯ ಮಾಡುತ್ತದೆ, ಆದರೆ ಲೊ ಬ್ಲಡ್ ಶುಗರ್ ಸಮಸ್ಯೆ ಇರುವವರು ಅದನ್ನು ತಿನ್ನಬೇಡಿ.
ಬೆಸಾನ್ ಸೇವನೆಯು ಮಧುಮೇಹಿಗಳಿಗೆ (diabetics) ಪ್ರಯೋಜನಕಾರಿ. ಏಕೆಂದರೆ ಇದು ಉತ್ತಮ ನಾರಿನಂಶವನ್ನು ಹೊಂದಿದೆ, ಆದರೆ ನಿಮಗೆ ಲೊ ಬ್ಲಡ್ ಶುಗರ್ ಸಮಸ್ಯೆಗಳಿದ್ದರೆ ಅದನ್ನು ತಿನ್ನಬೇಡಿ. ಇದು ಆರೋಗ್ಯಕ್ಕೆ ಮಾರಕ. ಆದುದರಿಂದ ಸಾಧ್ಯವಾದಷ್ಟು ಅವಾಯ್ಡ್ ಮಾಡೋದು ಉತ್ತಮ.
ಹೊಟ್ಟೆಯ ಸಮಸ್ಯೆ (stomach upset)
ಮಲಬದ್ಧತೆ ಇದ್ದರೆ, ಬೆಸನ್ ಅಥವಾ ರವೆಯಿಂದ ಮಾಡಿದ ವಸ್ತುಗಳನ್ನು ತಿನ್ನಲೇ ಬೇಡಿ. ಇದು ಅಸ್ವಸ್ಥತೆಯನ್ನು ಹೆಚ್ಚಿಸಬಹುದು. ಬೆಸನ್ ಮತ್ತು ರವೆಯಿಂದ ಮಾಡಿದ ವಸ್ತುಗಳನ್ನು ತಿನ್ನುವುದರಿಂದ ಆಮ್ಲೀಯತೆ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಯೂ ಉಂಟಾಗಬಹುದು. ಇವುಗಳಲ್ಲಿ ಹೆಚ್ಚಿನದನ್ನು ತಿನ್ನುವುದರಿಂದ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ ಮತ್ತು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬುವಂತೆ ಮಾಡುತ್ತದೆ.
ಬೆಸನ್ ಮತ್ತು ರವೆಯಿಂದ ಮಾಡಿದ ವಸ್ತುಗಳನ್ನು ಸೇವಿಸಿದ ನಂತರ ನೀರನ್ನು ಕುಡಿಯುವ ಅಗತ್ಯ ಹೆಚ್ಚು ಎಂದು ಭಾವಿಸುತ್ತೇವೆ ಮತ್ತು ಅದನ್ನು ಮಾಡದಿದ್ದಾಗ ಮತ್ತು ಒಂದರ ನಂತರ ಒಂದರಂತೆ ವಸ್ತುಗಳನ್ನು ತಿನ್ನುವಾಗ, ಆಮ್ಲೀಯತೆ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಗಳು ಇರುತ್ತವೆ.
ಅಲರ್ಜಿ ಪ್ರತಿಕ್ರಿಯೆಗಳು (allergies)
ಗೋಧಿಯಿಂದ ಅಲರ್ಜಿಯಾಗಿದ್ದರೆ ರವೆಯಿಂದ ಮಾಡಿದ ಯಾವುದೇ ವಸ್ತುವನ್ನು ಸೇವಿಸಬಾರದು. ಗ್ಲುಟೆನ್ ಸೂಕ್ಷ್ಮತೆ ಮತ್ತು ಸೆಲಿಯಾಕ್ ಕಾಯಿಲೆಯಲ್ಲಿ ರವೆಯ ಸೇವನೆಯು ಕಿಬ್ಬೊಟ್ಟೆ ನೋವು, ಅತಿಸಾರ ಮತ್ತು ಊತಕ್ಕೂ ಕಾರಣವಾಗಬಹುದು. ಕೆಲವರಿಗೆ ಬೆಸನ್ ಅಲರ್ಜಿ ಇರುತ್ತದೆ. ಇದನ್ನು ತಿಂದ ಬಳಿಕ ಚರ್ಮದ ಮೇಲೆ ದದ್ದುಗಳ ಸಮಸ್ಯೆ ಉಂಟಾಗಬಹುದು.
ಇನ್ನು ಚಹಾದ ಜೊತೆಗೆ ಬೇಸನ್ ಆಹಾರ ಸೇವಿಸಿದರೆ ಇದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಹೊಟ್ಟೆ ಉಬ್ಬರ, ಹೊಟ್ಟೆ ನೋವು, ಗ್ಯಾಸ್ ಮೊದಲಾದ ತೊಂದರೆ ಕಾಣಿಸುತ್ತದೆ. ಆದುದರಿಂದ ಬೇಸನ್ ಆಹಾರಗಳನ್ನು ಚಹಾದ ಜೊತೆಗೆ ಸೇವಿಸ್ಬೇಡಿ.