ಈ ಹಣ್ಣು ತಿಂದರೆ ತೂಕ ಕಡಿಮೆಯಾಗೋದು ಗ್ಯಾರಂಟಿ!
First Published Jan 13, 2021, 6:57 PM IST
ತೂಕ ಹೆಚ್ಚಾದರೆ ಯಾರಿಗೆ ತಾನೇ ತಲೆ ಕೆಟ್ಟೋಗಲ್ಲ ಹೇಳಿ? ತೂಕ ಇಳಿಕೆಗಾಗಿ ಏನೇನೋ ಕಸರತ್ತು ಮಾಡುತ್ತಾರೆ. ಕೊನೆಗೆ ಊಟವನ್ನು ಸಹ ಬಿಟ್ಟು ದೇಹ ದಂಡಿಸುತ್ತಾರೆ. ಇದರಿಂದ ತೂಕ ಏನು ಕಡಿಮೆ ಆಗೋದಿಲ್ಲ. ಹಾಗಾದ್ರೆ ತೂಕ ಇಳಿಕೆಗೆ ಏನು ಮಾಡಬೇಕು? ದೇಹದ ತೂಕವನ್ನು ಕಡಿಮೆ ಮಾಡಲು ಮತ್ತು ಕಾಪಾಡಿಕೊಳ್ಳಲು ಬಯಸುವುದಾದರೆ ಈ ಹಣ್ಣುಗಳನ್ನು ತಿನ್ನಿರಿ.

ದ್ರಾಕ್ಷಿ ಹಣ್ಣು
ದ್ರಾಕ್ಷಿ ಹಣ್ಣಿನಲ್ಲಿ ಕಡಿಮೆ ಕ್ಯಾಲರಿ, ಕಿಣ್ವಗಳು ಅಧಿಕವಾಗಿದ್ದು, ಆರೋಗ್ಯಕರ ಕಾರ್ಬೋಹೈಡ್ರೇಟ್ ಗಳು ಹೊಟ್ಟೆ ತುಂಬಿಸುತ್ತದೆ. ಇನ್ಸುಲಿನ್ (ಕೊಬ್ಬು ಶೇಖರಿಸುವ ಹಾರ್ಮೋನ್) ಕಡಿಮೆ ಮಾಡುವಂತಹ ಒಂದು ಸಂಯುಕ್ತವು ಹಣ್ಣಿನಲ್ಲಿದೆ, ಇದು ತೂಕ ಕಳೆದುಕೊಳ್ಳಲು ಕಾರಣವಾಗುತ್ತದೆ.

ಸೇಬು
ತೂಕ ಇಳಿಸುವ ಆಹಾರಕ್ರಮದಲ್ಲಿದ್ದರೆ, ಖಂಡಿತವಾಗಿಯೂ ಸೇಬಿನ ಅವಶ್ಯಕತೆ ಇದೆ. ಒಂದು ಮಧ್ಯಮ ಗಾತ್ರದ ಸೇಬಿನಲ್ಲಿ ಸುಮಾರು 50 ಕ್ಯಾಲೋರಿಗಳಿದ್ದು, ಯಾವುದೇ ಕೊಬ್ಬು ಅಥವಾ ಸೋಡಿಯಂ ಇರುವುದಿಲ್ಲ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?