ಅಧಿಕ ರಕ್ತದೊತ್ತಡ ಹೊಂದಿರೋರಿಗೆ ಬೆಸ್ಟ್ ಈ ಆಹಾರಗಳು
ರಕ್ತದೊತ್ತಡ ಸಮಸ್ಯೆ (blood pressure) ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ. ನಿಮಗೂ ಬಿಪಿ ಸಮಸ್ಯೆ ಇದೆಯೇ? ಬಿಪಿ ಹೆಚ್ಚಾಗಿದ್ದು, ಔಷಧಿಗಳನ್ನು ಸೇವಿಸಲು ಇಷ್ಟಪಡೋದಿಲ್ವೇ?, ಯಾರು ಔಷಧಿಗಳು ತಿನ್ನದೆ ಕೆಲಸ ಮಾಡುವುದಿಲ್ಲವೋ, ಅವರು ತಮ್ಮ ಆಹಾರದಲ್ಲಿ ಕೆಲವು ರೀತಿಯ ಆಹಾರಗಳನ್ನು ಸೇರಿಸಬೇಕು. ಆರೋಗ್ಯಕರ ಆಹಾರವು (Healthy Food) ಅಧಿಕ ರಕ್ತದೊತ್ತಡವನ್ನು ನಿರ್ವಹಿಸಲು ಸಾಕಷ್ಟು ಸಹಾಯ ಮಾಡುತ್ತೆ.
ಭಾರತದಲ್ಲಿ ಪ್ರತಿ ವರ್ಷ ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ಪ್ರಕರಣಗಳು ದಾಖಲಾಗುತ್ತಿವೆ. ರಕ್ತದೊತ್ತಡವು 140/90 ಕ್ಕಿಂತ ಹೆಚ್ಚಾದಾಗ, ಅದು ಅಧಿಕ ರಕ್ತದೊತ್ತಡವನ್ನು ಮತ್ತು 180/90 ಕ್ಕಿಂತ ಹೆಚ್ಚಿನದನ್ನು ತಲುಪಿದರೆ ಅದನ್ನು ತೀವ್ರವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ ಅದಕ್ಕೆ ಯಾವುದೇ ರೋಗಲಕ್ಷಣಗಳು ಗೋಚರಿಸೋದಿಲ್ಲ. ಆದರೆ ಇದು ಹೃದ್ರೋಗ (heart problem)ಮತ್ತು ಪಾರ್ಶ್ವವಾಯುವಿನಂತಹ ಮಾರಣಾಂತಿಕ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತೆ.
ಒಂದು ವೇಳೆ ನೀವು ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿದ್ದರೆ ನಿಮ್ಮ ಜೀವನಶೈಲಿ ಮತ್ತು ಆಹಾರದಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ಅಧಿಕ ರಕ್ತದೊತ್ತಡದ ಸ್ಥಿತಿಯನ್ನು ನಿಯಂತ್ರಿಸಬಹುದು ಎಂದು ಆಹಾರ ತಜ್ಞರು ಸೂಚಿಸುತ್ತಾರೆ. ಅಧಿಕ ರಕ್ತದೊತ್ತಡದ ರೋಗಲಕ್ಷಣಗಳನ್ನು ನಿಯಂತ್ರಿಸಲು ನೀವು ಏನೆಲ್ಲಾ ಆಹಾರ ಸೇವಿಸಬಹುದು ನೋಡೋಣ…
ಸಿಟ್ರಸ್ ಹಣ್ಣುಗಳು
ಅಧಿಕ ಬಿಪಿ ಹೊಂದಿರುವ ಜನರು ಸಿಟ್ರಸ್ ಹಣ್ಣುಗಳನ್ನು (citrus fruits) ತಿನ್ನಬೇಕು. ದ್ರಾಕ್ಷಿ, ಕಿತ್ತಳೆ, ನಿಂಬೆ ಸೇರಿದಂತೆ ಸಿಟ್ರಸ್ ಹಣ್ಣುಗಳು ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ. ಈ ಎಲ್ಲಾ ಹಣ್ಣುಗಳು ಜೀವಸತ್ವಗಳು, ಖನಿಜಗಳಿಂದ ಸಮೃದ್ಧವಾಗಿರುವುದರಿಂದ, ಅಧಿಕ ರಕ್ತದೊತ್ತಡದಂತಹ ಹೃದ್ರೋಗದ ಅಪಾಯದ ಅಂಶಗಳನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತೆ. ಈ ಹಣ್ಣುಗಳನ್ನು ಹಾಗೆಯೇ ತಿನ್ನಬಹುದು, ಅಥವಾ ಸಲಾಡ್, ಜ್ಯೂಸ್ ಮಾಡಿಯೂ ಸೇವಿಸಬಹುದು.
ಸೆಲೆರಿ ಅಥವಾ ಅಜ್ವಾಯ್ನ್ ಎಲೆಗಳು
ಪೌಷ್ಟಿಕತಜ್ಞರ ಪ್ರಕಾರ, ಪಾರ್ಸ್ಲಿ ಕೂಡ ಅತ್ಯಂತ ಜನಪ್ರಿಯ ತರಕಾರಿಯಾಗಿದೆ, ಬಿಪಿ ಸಮಸ್ಯೆ ಹೊಂದಿರೋರು ಇದನ್ನು ಸೇವಿಸೋದು ಬೆಸ್ಟ್ ಎಂದು ತಜ್ಞರು ಹೇಳುತ್ತಾರೆ. ಸೆಲೆರಿ (celery) ಅಥವಾ ಅಜ್ವಾಯ್ನ್ ಎಲೆಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ.
ಚಿಯಾ ಮತ್ತು ಫ್ಲಾಕ್ಸ್ ಬೀಜಗಳು
ಚಿಯಾ ಮತ್ತು ಫ್ಲಾಕ್ಸ್ ಬೀಜಗಳು (flax seeds) ನೋಡಲು ತುಂಬಾ ಚಿಕ್ಕದಾಗಿವೆ, ಆದರೆ ಈ ಬೀಜಗಳು ಪೋಷಕಾಂಶಗಳಿಂದ ತುಂಬಿದೆ ಅನ್ನೋದು ನಿಮಗೆ ಗೊತ್ತಾ?. ಇದು ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೈಬರ್ ಅಂಶಗಳನ್ನು ಸಹ ಹೊಂದಿದೆ, ಇದು ಆರೋಗ್ಯಕರ ರಕ್ತದೊತ್ತಡಕ್ಕೆ ಅತ್ಯಗತ್ಯವಾಗಿದೆ.
ಇದೆಲ್ಲದರ ಹೊರತಾಗಿ, ಹಸಿರು ಎಲೆ ತರಕಾರಿಗಳನ್ನು (green vegetables) ಸೇವಿಸುವುದು ಮತ್ತು ಪ್ರತಿದಿನ ವ್ಯಾಯಾಮ ಮಾಡುವುದು ಸಹ ಅಧಿಕ ರಕ್ತದೊತ್ತಡದ ರೋಗಲಕ್ಷಣಗಳನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಅಷ್ಟೇ ಅಲ್ಲ ಹೈ ಬಿಪಿಯನ್ನು ನಿಯಂತ್ರಿಸಲು ಜಂಕ್ ಫುಡ್ ನಿಂದ ದೂರವಿರಿ ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
ಬ್ರೊಕೋಲಿ
ಬ್ರೊಕೊಲಿಯಲ್ಲಿ ಫ್ಲೇವನಾಯ್ಡ್ ಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಇದು ರಕ್ತನಾಳಗಳ ಕೆಲಸ ಮತ್ತು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಹೆಚ್ಚಿಸುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ.
ಕ್ಯಾರೆಟ್
ಕ್ಯಾರೆಟ್ ನಲ್ಲಿ (carrot)ಕ್ಲೋರೊಜೆನಿಕ್, ಕೌಮಾರಿಕ್ ಮತ್ತು ಕೆಫೀಕ್ ಆಮ್ಲದಂತಹ ಫಿನೋಲಿಕ್ ಘಟಕಗಳು ಅಧಿಕವಾಗಿವೆ. ಇದು ರಕ್ತನಾಳಗಳಿಗೆ ವಿಶ್ರಾಂತಿ ನೀಡುವುದರ ಜೊತೆಗೆ ಉರಿಯೂತವನ್ನು ಕಡಿಮೆ ಮಾಡುತ್ತದೆ, ಇದು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.
ಪಿಸ್ತಾ
ಪಿಸ್ತಾ, (pista) ಇದು ಹೆಚ್ಚಿನ ಬಿಪಿ ಹೊಂದಿರುವವರಿಗೆ ವರದಾನವಾಗಿದೆ. ಇದು ನಿಮ್ಮ ಹೃದಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತೆ. ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವ ಜನರು ತಮ್ಮ ಆಹಾರದಲ್ಲಿ ಯಾವುದೇ ರೂಪದಲ್ಲಿ ಪಿಸ್ತಾವನ್ನು ಸೇರಿಸಬೇಕು.
ಕುಂಬಳಕಾಯಿ ಬೀಜಗಳು
ಕುಂಬಳಕಾಯಿ ಬೀಜಗಳನ್ನು (pumpkin seeds) ಪೋಷಕಾಂಶಗಳ ಆಗರ ಎಂದರೆ ತಪ್ಪಾಗುವುದಿಲ್ಲ. ಹೆಚ್ಚಾಗಿ ಹೈ ಬಿಪಿ ಹೊಂದಿರುವ ಜನರು ಖಂಡಿತವಾಗಿಯೂ ಕುಂಬಳಕಾಯಿ ಬೀಜಗಳನ್ನು ಸೇವಿಸಬೇಕು. ರಕ್ತದೊತ್ತಡವನ್ನು ಕಡಿಮೆ ಮಾಡಲು ಇದು ತುಂಬಾನೇ ಸಹಾಯ ಮಾಡುತ್ತದೆ.
ಬೀನ್ಸ್ ಮತ್ತು ಬೇಳೆಕಾಳುಗಳು
ಬೀನ್ಸ್ ಮತ್ತು ದ್ವಿದಳ ಧಾನ್ಯಗಳು ಪ್ರೋಟೀನ್ ಮತ್ತು ನಾರಿನ ಅತ್ಯುತ್ತಮ ಮೂಲವಾಗಿದೆ. ಅವು ತುಂಬಾ ಉತ್ತಮ ಪೋಷಕಾಂಶಗಳನ್ನು ಹೊಂದಿರುತ್ತವೆ. ಹೈ ಬಿಪಿ ಹೊಂದಿರುವ ರೋಗಿಗಳು ಬೀನ್ಸ್ ಮತ್ತು ಬೇಳೆಕಾಳುಗಳನ್ನು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ. ಇದು ರಕ್ತದೊತ್ತಡವನ್ನು ಬಹಳ ಕಡಿಮೆ ಸಮಯದಲ್ಲಿ ನಿಯಂತ್ರಿಸುತ್ತೆ.
ಸಾಲ್ಮನ್ ಮತ್ತು ಫ್ಯಾಟಿ ಫಿಶ್
ಹೆಚ್ಚಿನ ಬಿಪಿ ರೋಗಿಗಳಿಗೆ ಫ್ಯಾಟಿ ಫಿಶ್ ಮತ್ತು ಸಾಲ್ಮನ್ (salmon fish) ತಿನ್ನಲು ತಜ್ಞರು ಸಲಹೆ ನೀಡುತ್ತಾರೆ. ಫ್ಯಾಟಿ ಫಿಶ್ ಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ನಿಮ್ಮ ಹೃದಯದ ಆರೋಗ್ಯಕ್ಕೂ ಉತ್ತಮವಾಗಿದೆ.
ಟೊಮೆಟೊ
ಟೊಮೆಟೊದಲ್ಲಿ (tomato) ಪೊಟ್ಯಾಸಿಯಮ್ ಮತ್ತು ಕ್ಯಾರೊಟೆನಿಲಾಯ್ಡ್ ಪಿಂಗ್ಮೆಂಟ್ ಲೈಕೋಪೀನ್ ಸಮೃದ್ಧವಾಗಿದೆ. ಲೈಕೋಪೀನ್ ನಿಮ್ಮ ಹೃದಯದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತೆ. ಪೋಷಕಾಂಶ ಭರಿತ ಟೊಮೆಟೊ ತಿನ್ನುವುದರಿಂದ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.