ಸ್ತನಗಳಿಗೆ ಸರಿಯಾದ ಆಕಾರ ನೀಡಲು, ಸ್ತನ ಕ್ಯಾನ್ಸರ್ ನಿವಾರಿಸಲು ಈ ಆಹಾರವೇ ಬೆಸ್ಟ್
ಸ್ತನಗಳ ಆರೋಗ್ಯವನ್ನು ಕಾಪಾಡಿಕೊಳ್ಳುವ ಅನೇಕ ಪೋಷಕಾಂಶ ಭರಿತ ಆಹಾರಗಳಿವೆ, ಈ ಆಹಾರಗಳು ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸ್ತನಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಯಾವ ಆಹಾರ ಸೇವಿಸೋದು ಬೆಸ್ಟ್ ಅನ್ನೊದನ್ನು ನೋಡೋಣ.
ಸ್ತನ ಕ್ಯಾನ್ಸರ್ (breast cancer) ಅಪಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಸಮಸ್ಯೆ ಮಹಿಳೆಯರಲ್ಲಿ ಬಹಳ ಸಾಮಾನ್ಯ, ಅನೇಕ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದಾಗಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ನೀವು ಬಯಸಿದರೆ, ನೀವು ಅದರ ಅಪಾಯವನ್ನು ಕಡಿಮೆ ಮಾಡಬಹುದು. ಸರಿಯಾದ ಸ್ತನ ಆರೈಕೆ, ಸ್ತನ ಪರೀಕ್ಷೆ (Breast Test), ನಿಯಮಿತ ತಪಾಸಣೆ ಸೇರಿ ಕೆಲವು ಆಹಾರ ಸೇವಿಸೋದರಿಂದ ಸ್ತನ ಕ್ಯಾನ್ಸರ್ ದೂರ ಮಾಡಬಹುದು. ಹೌದು, ಸ್ತನಗಳ ಆರೋಗ್ಯವನ್ನು ಕಾಪಾಡಿಕೊಳ್ಳುವ ಮತ್ತು ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುವ ಅನೇಕ ಪೋಷಕಾಂಶ ಭರಿತ ಆಹಾರ ಮೂಲಗಳಿವೆ. ಸ್ತನ ಆರೋಗ್ಯವನ್ನು ಕಾಪಾಡುವ (healthy breast) ಜೊತೆಗೆ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಆಹಾರಗಳ ಬಗ್ಗೆ ತಿಳಿಯೋಣ.
ಸ್ತನ ಆರೋಗ್ಯಕ್ಕೆ ಹಸಿರು ಎಲೆಗಳ ತರಕಾರಿ (Green Vegetables)
ಮೆಂತೆ, ಪಾಲಕ್ ಮೊದಲಾದ ಸೊಪ್ಪುಗಳು ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುವ ಕೆಲವು ವಿಶೇಷ ತರಕಾರಿಗಳಾಗಿವೆ. ಎಲೆಗಳ ತರಕಾರಿಗಳು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ, ಇದು ಕ್ಯಾನ್ಸರ್ ಉಂಟುಮಾಡುವ ಫ್ರೀ ರಾಡಿಕಲ್ಸ್ ಪರಿಣಾಮಗಳನ್ನು ನಾಶಪಡಿಸುತ್ತದೆ. ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನ ಜರ್ನಲ್ನಲ್ಲಿ ಪ್ರಕಟವಾದ 2012 ರ ಅಧ್ಯಯನವು, ಹಸಿರು ಎಲೆ ತರಕಾರಿಗಳನ್ನು ತಿನ್ನುವ ಮಹಿಳೆಯರಿಗೆ , ಉಳಿದ ಮಹಿಳೆಯರಿಗಿಂತ ಸ್ತನ ಕ್ಯಾನ್ಸರ್ ಉಂಟಾಗುವ ಅಪಾಯ ತುಂಬಾ ಕಡಿಮೆ ಎಂದು ಕಂಡುಹಿಡಿದಿದೆ.
ಸಿಟ್ರಸ್ ಹಣ್ಣು (citrus fruits)
ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ, ಫೋಲೇಟ್, ಕ್ಯಾಲ್ಸಿಯಂ ಮತ್ತು ಇತರ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ, ಇದು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಜರ್ನಲ್ ಆಫ್ ಬ್ರೆಸ್ಟ್ ಕ್ಯಾನ್ಸರ್ ನಲ್ಲಿ ಪ್ರಕಟವಾದ 2013 ರ ಅಧ್ಯಯನದ ಪ್ರಕಾರ, ಸಾಕಷ್ಟು ಪ್ರಮಾಣದಲ್ಲಿ ಸಿಟ್ರಸ್ ಹಣ್ಣುಗಳನ್ನು ಸೇವಿಸುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 10 ರಷ್ಟು ಕಡಿಮೆ. ಸಿಟ್ರಸ್ ಹಣ್ಣುಗಳನ್ನು ಊಟದ ನಡುವೆ ಲಘು ಆಹಾರವಾಗಿ ತಿನ್ನಬಹುದು.
ಅಗಸೆ ಬೀಜಗಳು (flax seeds)
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ (National Library of Medicines) ಪ್ರಕಾರ, ಫ್ಲಾಕ್ಸಿ ಸೀಡ್ಸ್ ಅಥವಾ ಅಗಸೆ ಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ, ಇದು ಸ್ತನಗಳ ಆರೋಗ್ಯಕ್ಕೆ (Breast Health) ತುಂಬಾ ಪ್ರಯೋಜನಕಾರಿ. ಅವು ಇತರ ಯಾವುದೇ ಆಹಾರಕ್ಕಿಂತ ಹೆಚ್ಚಿನ ಲಿಗ್ನಾನ್ ಗಳನ್ನು ಹೊಂದಿರುತ್ತವೆ. ಇವು ಸಸ್ಯ ಸಂಯುಕ್ತಗಳಾಗಿವೆ, ಇವು ಫೈಬರ್ (Fiber) ಮತ್ತು ಉತ್ಕರ್ಷಣ ನಿರೋಧಕ ಫೈಟೊ ಈಸ್ಟ್ರೊಜೆನ್ಗಳನ್ನು ಹೊಂದಿರುತ್ತವೆ. ಇವುಗಳಿಂದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ. ಮೊಸರು, ಓಟ್ ಮೀಲ್, ಸಲಾಡ್ ಗಳು, ಸೂಪ್ ಗಳು, ಸ್ಮೂಥಿಗಳು ಮತ್ತು ಮಫಿನ್ ಗಳಲ್ಲಿ ಅಗಸೆ ಬೀಜಗಳನ್ನು ಸೇರಿಸಿ ಸೇವಿಸಬಹುದು.
ಅರಿಷಿನ (turmeric)
ಆಯುರ್ವೇದದಿಂದ ವೈದ್ಯಕೀಯ ವಿಜ್ಞಾನದವರೆಗೆ, ಅರಿಶಿನವನ್ನು ಔಷಧೀಯ ಗುಣವುಳ್ಳ ಒಂದು ಪದಾರ್ಥವಾಗಿ ಹೇಳಲಾಗಿದೆ. ಅರಿಷಿನವು ಸ್ತನ ಕ್ಯಾನ್ಸರ್ ಸಂದರ್ಭದಲ್ಲಿ ಎರಡು ಪ್ರಮುಖ ಪ್ರಯೋಜನಗಳನ್ನು ಹೊಂದಿದೆ. ಅರಿಶಿನವು ಕರ್ಕ್ಯುಮಿನ್ ಎಂಬ ಸಕ್ರಿಯ ಸಂಯುಕ್ತವನ್ನು ಹೊಂದಿರುತ್ತದೆ, ಇದು ಸ್ತನ ಕ್ಯಾನ್ಸರ್ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಕೀಮೋಥೆರಪಿ ನಿಮ್ಮ ದೇಹದ ಇತರ ಭಾಗಗಳಿಗೆ ಮಾಡುವ ಹಾನಿಯನ್ನು ಕಡಿಮೆ ಮಾಡುತ್ತದೆ. ನಿಮ್ಮ ಸೂಪ್, ಪಲ್ಯ, ತರಕಾರಿ, ಮೊಟ್ಟೆ (Eggs) ಅಥವಾ ಬೆಚ್ಚಗಿನ ಹಾಲಿಗೆ ಅರಿಷಿನವನ್ನು ಸೇರಿಸಿ ಸೇವಿಸಿ.
ಬೆರ್ರಿ ಹಣ್ಣು (berries)
ಬ್ಲೂಬೆರ್ರಿ, ಸ್ಟ್ರಾಬೆರಿ (Strawberry), ಬ್ಲ್ಯಾಕ್ಬೆರಿ (Blackberry) ಮತ್ತು ರಾಸ್ಪ್ಬೆರಿಗಳು (Rusberry) ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಂಯುಕ್ತಗಳು ಮತ್ತು ಪೋಷಕಾಂಶಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ ಇದೆ. ಬೆರ್ರಿಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ನಿಮ್ಮ ದೇಹದ ಜೀವಕೋಶಗಳಿಗೆ ಹಾನಿಯಾಗಲು ಅನುಮತಿಸುವುದಿಲ್ಲ. ಇವುಗಳನ್ನು ಡ್ರೈ, ಫ್ರೆಶ್, ಹೇಗೂ ಸೇವಿಸಬಹುದು. ನೀವು ಅವುಗಳನ್ನು ಮೊಸರು (Curds), ಧಾನ್ಯಗಳು, ಸ್ಮೂಥಿಗಳು ಮತ್ತು ಮಫಿನ್‌ಗಳೊಂದಿಗೆ ಸೇರಿಸಬಹುದು.
ಫರ್ಮೆಟೆಡ್ ಆಹಾರಗಳು (fermented food)
ಫರ್ಮೆಟೆಡ್ ಆಹಾರಗಳು ಸಾಕಷ್ಟು ಪ್ರಮಾಣದ ಪ್ರೋಬಯಾಟಿಕ್ಸ್ ಹೊಂದಿರುತ್ತವೆ, ಅವು ಜೀವಂತ "ಆರೋಗ್ಯಕರ" ಬ್ಯಾಕ್ಟೀರಿಯಾ (Healthy Bacteria) ಮತ್ತು ಯೀಸ್ಟ್‌ಗಳಾಗಿವೆ. ಪ್ರೋಬಯಾಟಿಕ್ ಗಳು ನಿಮ್ಮ ಜೀರ್ಣಕಾರಿ ಆರೋಗ್ಯಕ್ಕೆ ಉತ್ತಮವಾಗಿವೆ. ಸ್ತನ ಕ್ಯಾನ್ಸರ್ ಗೆ ಕಾರಣವಾಗುವ ಹಾನಿಕಾರಕ ಜೀವಾಣುಗಳನ್ನು ನಿಮ್ಮ ದೇಹವು ಹೀರಿಕೊಳ್ಳುವುದನ್ನು ಸಹ ಅವು ತಡೆಯಬಹುದು. ಆಂಕಾಲಜಿ ರಿವ್ಯೂಸ್ನಲ್ಲಿ ಪ್ರಕಟವಾದ 2019 ರ ಅಧ್ಯಯನದ ಪ್ರಕಾರ, ಪ್ರೋಬಯಾಟಿಕ್ಗಳು ರೋಗನಿರೋಧಕ ಶಕ್ತಿಯನ್ನು (Immunity Power) ಹೆಚ್ಚಿಸುತ್ತವೆ ಮತ್ತು ಕ್ಯಾನ್ಸರ್ ಕೋಶಗಳ (Cancer Cells) ವಿರುದ್ಧ ಹೋರಾಡಲು ದೇಹವನ್ನು ಸಿದ್ಧಪಡಿಸುತ್ತವೆ.
ಬೀನ್ಸ್ (Beans)
ಬೀನ್ಸ್ ಫೈಬರ್, ಜೀವಸತ್ವಗಳು ಮತ್ತು ಇತರ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ವಿಶೇಷ ಸೂಪರ್ ಫುಡ್ ಆಗಿದ್ದು, ಇದು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಬೀನ್ಸ್‌ನಲ್ಲಿರುವ ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ತಡೆಯಬಹುದು ಮತ್ತು ಹಾನಿಗೊಳಗಾದ ಕೋಶಗಳನ್ನು ಸರಿಪಡಿಸಬಹುದು. ಬೀನ್ಸ್ ನಲ್ಲಿರುವ ವಿಟಮಿನ್ ಗಳು ಮತ್ತು ಖನಿಜಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ಕಡಿಮೆ ಮಾಡುತ್ತೆ.
ವಾಲ್ನಟ್ (Walnut)
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಸ್ತನವನ್ನು ಕ್ಯಾನ್ಸರ್‌ನಿಂದ ರಕ್ಷಿಸಲು ಅಥವಾ ಮತ್ತೆ ಮತ್ತೆ ಉಂಟಾಗುವ ಅಪಾಯ ಕಡಿಮೆ ಮಾಡಲು, ಮಾಂಸಕ್ಕಿಂತ ಸಸ್ಯ ಆಧಾರಿತ ಪ್ರೋಟೀನ್ ಅನ್ನು ಆಧರಿಸಿದ ಆಹಾರ ಸೇವಿಸಲು ಇದು ಶಿಫಾರಸು ಮಾಡುತ್ತದೆ. ವಾಲ್ನಟ್ ತಿನ್ನುವುದು ಸ್ತನ ಗೆಡ್ಡೆಗಳ ಬೆಳವಣಿಗೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.