ಜ್ಯೋತಿಷ್ಯದ ಪ್ರಕಾರ, ಮಹಿಳೆಯರು ಚಿನ್ನದ ಕಿವಿಯೊಲೆ ಯಾಕೆ ಧರಿಸಬೇಕು?
Wearing gold earrings advantages: ಮುಖ್ಯವಾಗಿ ಕಿವಿಯೋಲೆಗಳನ್ನು ಧರಿಸುವುದರಿಂದ ಹೆಚ್ಚಿನ ಲಾಭಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಿಳೆಯರು ಕಿವಿಗೆ ಚಿನ್ನವನ್ನು ಏಕೆ ಧರಿಸಬೇಕು ಎಂಬುದನ್ನು ಈಗ ತಿಳಿಯೋಣ.

ಚಿನ್ನ
ಹೆಂಗಸರಿಗೆ ಚಿನ್ನದ ಮೇಲೆ ತುಂಬಾ ಮೋಹ ಇರುತ್ತೆ. ಬಹಳಷ್ಟು ಜನ ಚಿನ್ನವನ್ನು ಹೂಡಿಕೆಯಾಗಿ ನೋಡಿದ್ರೆ, ಹೆಂಗಸರು ಮಾತ್ರ ಆಭರಣವಾಗಿ ನೋಡ್ತಾರೆ. ಎಷ್ಟೇ ತರಹದ ಆಭರಣಗಳಿದ್ದರೂ, ಇನ್ನೂ ಕೊಂಡುಕೊಳ್ಳಬೇಕು ಅಂತ ಅನ್ಸುತ್ತೆ. ಆದ್ರೆ, ಚಿನ್ನ ಧರಿಸುವುದರಿಂದ ಹೆಂಗಸರಿಗೆ ಬಹಳಷ್ಟು ಆರೋಗ್ಯಕರ ಪ್ರಯೋಜನಗಳಿವೆ. ಅದ್ರಲ್ಲೂ ಮುಖ್ಯವಾಗಿ ಕಿವಿಯೋಲೆಗಳನ್ನು ಧರಿಸುವುದರಿಂದ ಹೆಚ್ಚಿನ ಲಾಭಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹಿಳೆಯರು ಕಿವಿಗೆ ಚಿನ್ನವನ್ನು ಏಕೆ ಧರಿಸಬೇಕು ಎಂಬುದನ್ನು ಈಗ ತಿಳಿಯೋಣ.
ಚಿನ್ನ
ಬುಧ ಗ್ರಹ ಅನುಕೂಲಕರವಾಗಿ ಬದಲಾಗುತ್ತದೆ.. ಜ್ಯೋತಿಷ್ಯದ ಪ್ರಕಾರ, ಹೆಂಗಸರು ಕಿವಿಗೆ ಬಂಗಾರದ ಓಲೆ ಹಾಕಿಕೊಂಡ್ರೆ ಜಾತಕದಲ್ಲಿ ಬುಧ ಗ್ರಹ ಬಲವಾಗಿರುತ್ತೆ. ಕಿವುಡು, ನೋವು ರೀತಿಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಬಹಳಷ್ಟು ರೀತಿಯ ನೋವುಗಳು ಹತ್ತಿರಕ್ಕೂ ಬರೋದಿಲ್ಲ. ಬುದ್ಧಿಯನ್ನು ಹೆಚ್ಚಿಸುತ್ತದೆ ಕಿವಿಗೆ ಬಂಗಾರದ ಓಲೆ ಹಾಕಿಕೊಂಡ್ರೆ ಬುದ್ಧಿ ವಿಕಾಸವಾಗುತ್ತದೆ, ಶಕ್ತಿ ಹೆಚ್ಚಾಗುತ್ತದೆ, ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ.
ಚಿನ್ನ
ನೆಗೆಟಿವಿಟಿಯನ್ನು ದೂರ ಮಾಡುತ್ತದೆ ಬಂಗಾರ ಪಾಸಿಟಿವಿಟಿಯನ್ನು ಆಕರ್ಷಿಸುತ್ತದೆ. ನಿಮ್ಮ ಮನಸ್ಸಿನಲ್ಲಿ ನೆಗೆಟಿವ್ ಆಲೋಚನೆಗಳು ಬರ್ತಿದ್ರೆ ಬಂಗಾರದ ಓಲೆ ಹಾಕೊಳ್ಳಿ. ಇದರಿಂದ ಕೆಟ್ಟ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ. ನೆಗೆಟಿವಿಟಿ ಕಡಿಮೆ ಆಗಿ, ಪಾಸಿಟಿವಿಟಿ ಹೆಚ್ಚಾಗುತ್ತದೆ. ನೆಮ್ಮದಿಯಾಗಿ ಇರುತ್ತೆ. ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ ನಿಜ, ನೀವು ನಂಬದೇ ಇರಬಹುದು. ಆದ್ರೆ, ಬಂಗಾರದ ಓಲೆ ಹಾಕಿಕೊಂಡ್ರೆ ಕಣ್ಣಿನ ದೃಷ್ಟಿ ಕೂಡಾ ಸುಧಾರಿಸುತ್ತದೆ. ಇದರಿಂದ ಒತ್ತಡ ಕೂಡಾ ಕಡಿಮೆಯಾಗುತ್ತದೆ ಅಂತ ತಜ್ಞರು ಹೇಳ್ತಾರೆ.
ಬಂಗಾರದ ಓಲೆ ಹಾಕಿಕೊಂಡವರೆಲ್ಲರಿಗೂ ಕಣ್ಣಿನ ಸಮಸ್ಯೆ ಬರೋದಿಲ್ಲ ಅಂತ ಹೇಳೋಕೆ ಆಗಲ್ಲ. ಸ್ವಲ್ಪ ತೆಗೆದುಕೊಳ್ಳುವ ಆಹಾರದಲ್ಲಿ ಕೂಡಾ ಇರುತ್ತದೆ. ಸ್ವಲ್ಪ ಮಟ್ಟಿಗೆ ಮಾತ್ರ.. ಕಣ್ಣಿನ ದೃಷ್ಟಿಯನ್ನು ಸುಧಾರಿಸೋದ್ರಲ್ಲಿ ಈ ಬಂಗಾರದ ಕಿವಿಯೋಲೆಗಳು ಸಹಾಯ ಮಾಡುತ್ತವೆ.
ಚಿನ್ನ
ಜಾತಕದಲ್ಲಿ ಗುರು ಗ್ರಹವನ್ನು ಬಲಪಡಿಸುತ್ತದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಿವಿಗೆ ಬಂಗಾರದ ಓಲೆ ಹಾಕಿಕೊಂಡ್ರೆ ಜಾತಕದಲ್ಲಿ ಗುರು ಗ್ರಹ ಬಲವಾಗುತ್ತದೆ. ಗುರುಗಳ ದಯೆಯಿಂದ ಶುಭ ಫಲಿತಾಂಶಗಳು ಸಿಗುತ್ತವೆ. ಮಾನಸಿಕ ಒತ್ತಡವನ್ನು ದೂರ ಮಾಡುತ್ತದೆ ಬಂಗಾರ ನಮ್ಮ ಮೆಂಟಲ್ ಲೆವೆಲ್ ಅನ್ನು ಬ್ಯಾಲೆನ್ಸ್ ಮಾಡುತ್ತದೆ. ಅದಕ್ಕೆ ಬಂಗಾರದ ಓಲೆ ಹಾಕಿಕೊಂಡ್ರೆ ಮಾನಸಿಕ ಒತ್ತಡ ಕಡಿಮೆಯಾಗಿ, ಸ್ಟ್ರೆಸ್ ಕಡಿಮೆಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.