ರಾತ್ರಿ ಬಟ್ಟೆಯೇ ಇಲ್ಲದೇ ನಗ್ನವಾಗಿ ಮಲಗಿ… ಗಂಡಸರ ಫರ್ಟಿಲಿಟಿ ಹೆಚ್ಚಿಸೋಕೆ, ಮಹಿಳೆಯರ ಆರೋಗ್ಯಕ್ಕೂ ಇದು ಬೆಸ್ಟ್!
ನೀವು ಎಂದಾದರೂ ಬಟ್ಟೆ ಧರಿಸದೇ ಮಲಗಿದ್ದೀರಾ? ಹೌದು ಎಂದಾದರೆ, ನಿಮಗೆ ಆ ದಿನ ಚೆನ್ನಾಗಿ ನಿದ್ದೆ ಬಂದಿರಬೇಕು ಅಲ್ವಾ?. ಖಂಡಿತವಾಗಿಯೂ ಬಂದಿರುತ್ತೆ. ಯಾಕಂದ್ರೆ ಬಟ್ಟೆ ಧರಿಸದೇ ಮಲಗೋದ್ರಿಂದ ಉತ್ತಮ ನಿದ್ರೆಯ ಜೊತೆಗೆ ಹಲವು ಪ್ರಯೋಜನಗಳಿವೆ.
ರಾತ್ರಿ ಮಲಗುವಾಗ, ಜನರು ಸಾಮಾನ್ಯವಾಗಿ ಲೂಸ್ ಆಗಿರುವ ಪೈಜಾಮಾ ಮತ್ತು ಟಿ-ಶರ್ಟ್ಗಳು ಅಥವಾ ಅದೇ ರೀತಿಯ ಆರಾಮದಾಯಕ ಬಟ್ಟೆಗಳನ್ನು ಧರಿಸಿ ಮಲಗೋದಕ್ಕೆ ಇಷ್ಟಪಡುತ್ತಾರೆ. ಆದರೆ ನಿಮಗೊಂದು ವಿಷ್ಯ ಗೊತ್ತಾ?, ಬಟ್ಟೆಯಿಲ್ಲದೆ ಮಲಗುವುದು (naked sleep)ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತೆ. ಉತ್ತಮ ನಿದ್ರೆಯಿಂದ ಹಿಡಿದು ನಿಮ್ಮ ಆರೋಗ್ಯದಲ್ಲಿ ಅನೇಕ ಸುಧಾರಣೆಯಾಗೋದಕ್ಕೆ ರಾತ್ರಿ ಹೊತ್ತು ಬಟ್ಟೆ ಇಲ್ಲದೇ ಮಲಗೋದು ಸಹಾಯ ಮಾಡುತ್ತೆ, ಇದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ.
ಪುರುಷರ ಫರ್ಟಿಲಿಟಿ ಹೆಚ್ಚಿಸುತ್ತದೆ
ಪುರುಷರು ಬಟ್ಟೆಗಳನ್ನು ಧರಿಸದೆ ಮಲಗುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ಬಿಗಿಯಾದ ಒಳ ಉಡುಪುಗಳು ಮತ್ತು ಕಡಿಮೆ ವೀರ್ಯಾಣುಗಳ ಸಂಖ್ಯೆಯ ನಡುವೆ ಆಳವಾದ ಸಂಬಂಧವಿದೆ ಎಂದು ಇತ್ತೀಚಿನ ಸಂಶೋಧನೆ ತೋರಿಸಿದೆ. ಅಧ್ಯಯನದಲ್ಲಿ 656 ಪುರುಷರಲ್ಲಿ, ಬಾಕ್ಸರ್ ಧರಿಸಿದವರು ಬಿಗಿಯಾದ ಒಳ ಉಡುಪುಗಳನ್ನು ಧರಿಸಿದವರಿಗಿಂತ ಹೆಚ್ಚಿನ ವೀರ್ಯಾಣುಗಳ ಸಂಖ್ಯೆಯನ್ನು ಹೊಂದಿದ್ದರು. ಹಾಗಾಗಿ ಫರ್ಟಿಲಿಟಿ (fertility)ಹೆಚ್ಚಿಸೋದಕ್ಕೆ ನಗ್ನವಾಗ ಮಲಗೋದು ಉತ್ತಮ.
ಹೃದ್ರೋಗ ಮತ್ತು ಟೈಪ್ -2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತೆ
ಯುಎಸ್ ಸಿಡಿಸಿ ಪ್ರಕಾರ, ನಿದ್ರೆಯ ಕೊರತೆಯು ಹೃದ್ರೋಗ ಮತ್ತು ಮಧುಮೇಹದ (heart problem and diabetes) ಅಪಾಯವನ್ನು ಹೆಚ್ಚಿಸುತ್ತದೆ. ನೀವು ನಿಮ್ಮ ಬಟ್ಟೆಗಳನ್ನು ತೆಗೆದು ಮಲಗಿದರೆ, ನೀವು ದೀರ್ಘಕಾಲ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತದೆ. ಇದು ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
ತೂಕ ಹೆಚ್ಚಾಗುವುದಿಲ್ಲ
ರಾತ್ರಿಯ ಉತ್ತಮ ನಿದ್ರೆ ಸಿಗದಿರುವುದು ತೂಕ ಹೆಚ್ಚಳಕ್ಕೆ (weight gain) ಕಾರಣವಾಗಬಹುದು ಎಂದು ಸಂಶೋಧನೆ ತೋರಿಸುತ್ತದೆ. ನೀವು ಬಟ್ಟೆಯಿಲ್ಲದೆ ಮಲಗಿದರೆ, ಅದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ ಮತ್ತು ತೂಕವನ್ನು ಹೆಚ್ಚಿಸುವುದಿಲ್ಲ. ಇದಲ್ಲದೆ, ಬಟ್ಟೆಗಳಿಲ್ಲದೆ ಮಲಗೋದರಿಂದ ನಿಮ್ಮ ದೇಹ ತಂಪಾಗಿರುತ್ತೆ ಇದು ಉತ್ತಮ ಚಯಾಪಚಯಕ್ಕೆ ಕಾರಣವಾಗುತ್ತದೆ. ದೇಹದಲ್ಲಿ ಬ್ರೌನ್ ಫ್ಯಾಟ್ ಪ್ರಮಾಣವನ್ನು ಹೆಚ್ಚಿಸುವುದರಿಂದ ಬೊಜ್ಜು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ಯೋನಿಯ ಆರೋಗ್ಯವನ್ನು ಸುಧಾರಿಸುತ್ತದೆ
ಬಿಗಿಯಾದ ಅಥವಾ ಒಳ ಉಡುಪುಗಳನ್ನು ಧರಿಸುವುದರಿಂದ ನೀವು ಬೆವರುತ್ತಿದ್ದರೆ, ಅದು ಯೋನಿ ಯೀಸ್ಟ್ (vagina infection)ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ನೀವು ಮಲಗುವಾಗ ನಿಮ್ಮ ಒಳ ಉಡುಪುಗಳನ್ನು ಬದಲಾಯಿಸದಿದ್ದರೆ ಅನೇಕ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಬಟ್ಟೆಗಳನ್ನು ಧರಿಸದೆ ಮಲಗುವುದು ಯೀಸ್ಟ್ ಸೋಂಕುಗಳನ್ನು ತಡೆಯುತ್ತದೆ ಮತ್ತು ಯೋನಿ ಸಹ ಆರೋಗ್ಯಕರವಾಗಿರುತ್ತದೆ.
ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ
ನೀವು ಬಟ್ಟೆ ಧರಿಸದೇ ಮಲಗಿದರೆ, ಅದು ಒತ್ತಡ ಮತ್ತು ಆತಂಕವನ್ನು (stress free) ಕಡಿಮೆ ಮಾಡುತ್ತದೆ, ವಿಶೇಷವಾಗಿ ನೀವು ನಿಮ್ಮ ಸಂಗಾತಿಯೊಂದಿಗೆ ಬಟ್ಟೆಗಳಿಲ್ಲದೇ ಮಲಗೋದರಿಂದ ಚರ್ಮದಿಂದ ಚರ್ಮದ ಸಂಪರ್ಕವು ದೇಹದಲ್ಲಿ ಆಕ್ಸಿಟೋಸಿನ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ನೀವು ಒಬ್ಬಂಟಿಯಾಗಿ ಮಲಗಿದರೆ, ಅದು ನಿಮ್ಮ ದೇಹವನ್ನು ತಂಪಾಗಿರಿಸುತ್ತದೆ, ಇದು ಒತ್ತಡ ಮತ್ತು ಚಡಪಡಿಕೆಯನ್ನು ಕಡಿಮೆ ಮಾಡುತ್ತೆ.