River Rafting: ಏನೆಲ್ಲಾ ಆರೋಗ್ಯ ಪ್ರಯೋಜನ ಸಿಗುತ್ತೆ ಗೊತ್ತಾ?
ರಿವರ್ ರಾಫ್ಟಿಂಗ್ ಒಂದು ಸಾಹಸ ಕ್ರೀಡೆಯಾಗಿದ್ದು, ಇದಕ್ಕಾಗಿ ದೂರ ದೂರದಿಂದ ಜನರು ಹೃಷಿಕೇಶ, ದಾಂಡೇಲಿಗೆ ಹೋಗುತ್ತಾರೆ. ಈ ಸಾಹಸವು ಸದ್ದಿಲ್ಲದೆ ಅವರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ, ಅನ್ನೋದರ ಬಗ್ಗೆ ತಿಳಿದಿದೆಯೇ? ಇಲ್ಲಿದೆ ಆ ಬಗ್ಗೆ ಮಾಹಿತಿ…
ಭಾರತದಲ್ಲಿ ರಿವರ್ ರಾಫ್ಟಿಂಗ್ (River Rafting) ಕ್ರೇಜ್ ಹಲವಾರು ಜನರಿಗೆ ಇದೆ. ರಿಷಿಕೇಶ್, ಮನಾಲಿ, ಸಿಕ್ಕಿಂನ, ಕರ್ನಾಟಕದ ದಾಂಡೇಲಿ ರಿವರ್ ರಾಫ್ಟಿಂಗ್‌ಗೆ ಬಹಳಷ್ಟು ಜನಪ್ರಿಯತೆ ಪಡೆದ ಸ್ಥಳಗಳು. ಇದನ್ನು ಮಾಡಲು ಜನರು ದೂರದ ಸ್ಥಳಗಳಿಂದ ಬರುತ್ತಾರೆ. ಆದರೆ ಈ ಸಾಹಸವು ರಹಸ್ಯವಾಗಿ ಎಷ್ಟು ಪ್ರಯೋಜನಗಳನ್ನು ನೀಡುತ್ತದೆ ಎಂದು ಜನರಿಗೆ ತಿಳಿದಿಲ್ಲ.
ಹಾಗೇ ನೋಡಿದ್ರೆ, ರಿವರ್ ರಾಫ್ಟಿಂಗ್ ಉತ್ತಮ ತಾಲೀಮು ಆಗಿದೆ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಮಾಡಲು, ನೀವು ಎಷ್ಟು ಶಕ್ತಿಯನ್ನು ಹಾಕಬೇಕು ಎಂದರೆ ಅದು ಇಡೀ ತಿಂಗಳ ವ್ಯಾಯಾಮದಂತೆಯೇ ಪರಿಣಾಮ ಬೀರುತ್ತದೆ.
ರಿವರ್ ರಾಫ್ಟಿಂಗ್ ಕೆಲವು ಜನರಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಆದ್ದರಿಂದ, ಈ ಜನರು ಅವಕಾಶ ಸಿಕ್ಕಾಗ ರಿವರ್ ರಾಫ್ಟಿಂಗ್ ಮಾಡಬೇಕು. ನೀವು ಬೊಜ್ಜು, ದಣಿವು, ವ್ಯಾಯಾಮ ಮಾಡದಿರುವುದು, ಒತ್ತಡ ಮತ್ತು ಆತ್ಮವಿಶ್ವಾಸದ ಕೊರತೆಯನ್ನು ಹೊಂದಿದ್ದರೆ, ವೈಟ್ ರಿವರ್ ರಾಫ್ಟಿಂಗ್ ಮಾಡಿ. ಇದನ್ನು ಮಾಡುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.
ಒತ್ತಡ ನಿವಾರಿಸುತ್ತೆ (stress relief)
ರಿವರ್ ರಾಫ್ಟಿಂಗ್ ಒಂದು ಹೆವಿ ವ್ಯಾಯಾಮವಾಗಿದ್ದು, ಇದು ಎಂಡಾರ್ಫಿನ್ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್ ಮೆದುಳಿಗೆ ಉತ್ತಮ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಒತ್ತಡ ಕಡಿಮೆಯಾಗುತ್ತದೆ ಮತ್ತು ಮನಸ್ಥಿತಿ ಸುಧಾರಿಸುತ್ತದೆ.
ಶಕ್ತಿ ಮತ್ತು ತ್ರಾಣ ಹೆಚ್ಚುತ್ತೆ (energy increases)
ಈ ಕ್ರೀಡೆಯಲ್ಲಿ, ನಿಮ್ಮ ಸ್ನಾಯುಗಳು ತುಂಬಾ ಹೆವಿ ವರ್ಕ್ ಮಾಡಬೇಕು. ಅದಕ್ಕಾಗಿ ಶಕ್ತಿ ಮತ್ತು ತ್ರಾಣವನ್ನು ಹೊಂದಿರುವುದು ಅವಶ್ಯಕ. ಶಕ್ತಿಯ ಕೊರತೆಯಿರುವ ಜನರು ಇದನ್ನು ಅಭ್ಯಾಸ ಮಾಡುವ ಮೂಲಕ ಸ್ನಾಯುಗಳನ್ನು ಬಲಪಡಿಸಬಹುದು.
ಹೃದಯದ ಆರೋಗ್ಯ ಒಳ್ಳೇ ಮದ್ದು
ರಾಫ್ಟಿಂಗ್ ಅನ್ನು ಕಾರ್ಡಿಯೋ ವರ್ಕೌಟ್ ಎಂದೂ ಕರೆಯಲಾಗುತ್ತೆ, ಏಕೆಂದರೆ ಈ ಸಮಯದಲ್ಲಿ ಅನೇಕ ಸ್ನಾಯುಗಳು ಒಟ್ಟಿಗೆ ಕೆಲಸ ಮಾಡುತ್ತವೆ. ಕಾರ್ಡಿಯೊ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಹೃದಯವು ಹೃದಯಾಘಾತ-ಹೃದಯ ವೈಫಲ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ.
ತೂಕ ಇಳಿಕೆಯಾಗುತ್ತೆ (weight loss)
ಕೆಲವೊಮ್ಮೆ ರಾಫ್ಟಿಂಗ್ ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡೋದಿಲ್ಲ. ಆದರೆ ನೀವು ರಾಫ್ಟಿಂಗ್ ಮಾಡಿದಾಗ, ಚಯಾಪಚಯವು ವೇಗವಾಗಿರುತ್ತದೆ. ಈ ಕಾರಣದಿಂದಾಗಿ, ಜೀರ್ಣಕ್ರಿಯೆ ಹೆಚ್ಚಾಗುತ್ತದೆ ಮತ್ತು ಫ್ಯಾಟ್ ಬರ್ನ್ ವೇಗಗೊಳ್ಳುತ್ತದೆ.
ಹೆಚ್ಚಿದ ಆತ್ಮವಿಶ್ವಾಸ (high confidence)
ರಾಫ್ಟಿಂಗ್ ಒಂದು ಕಷ್ಟಕರ ಕ್ರೀಡೆಯಾಗಿದೆ, ಇದು ನಿಮ್ಮನ್ನು ಭಯಭೀತರನ್ನಾಗಿ ಮಾಡುತ್ತದೆ. ಆದರೆ ನೀವು ಅದನ್ನು ಪೂರ್ಣಗೊಳಿಸಿದಾಗ, ನೀವು ನಿಮ್ಮ ಸಾಮರ್ಥ್ಯವನ್ನು ನಂಬಲು ಪ್ರಾರಂಭಿಸುತ್ತೀರಿ. ಈ ಕಾರಣಕ್ಕಾಗಿ, ಆತ್ಮವಿಶ್ವಾಸವನ್ನು ಹೆಚ್ಚಿಸಲು ಇದು ಸಹಾಯಕವಾಗಿದೆ ಎಂದು ಹೇಳಲಾಗುತ್ತೆ.