MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ನೀವು ಸೋಮಾರಿಯಾಗಿದ್ರೂ ಶವಾಸನ ಮಾಡಿ ಆರೋಗ್ಯ ಸಮಸ್ಯೆ ನಿವಾರಿಸಬಹುದು…

ನೀವು ಸೋಮಾರಿಯಾಗಿದ್ರೂ ಶವಾಸನ ಮಾಡಿ ಆರೋಗ್ಯ ಸಮಸ್ಯೆ ನಿವಾರಿಸಬಹುದು…

ಯೋಗದ ನಂತರ ಶವಾಸನವನ್ನು ಮಾಡಲಾಗುತ್ತದೆ. ಇದನ್ನು ಮಾಡುವುದರಿಂದ, ದೇಹವು ವಿಶ್ರಾಂತಿ ಪಡೆಯುತ್ತದೆ ಮತ್ತು ಮನಸ್ಸು ಶಾಂತವಾಗುತ್ತದೆ ಅನ್ನೋದು ನಿಮಗೆ ಗೊತ್ತೇ ಇದೆ. ಈವಾಗ ಶವಾಸನ ಮಾಡೋದ್ರಿಂದ ಆಗುವ ಪ್ರಯೋಜನಗಳು ಮತ್ತು ಅದನ್ನು ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ತಿಳಿದುಕೊಳ್ಳೋಣ.

2 Min read
Suvarna News
Published : Jun 15 2023, 02:37 PM IST
Share this Photo Gallery
  • FB
  • TW
  • Linkdin
  • Whatsapp
17

ಶವಾಸನವು (Shavasana) ಒಂದು ಆಸನವಾಗಿದ್ದು, ಇದನ್ನು ಸಾಮಾನ್ಯವಾಗಿ ಯೋಗಾಭ್ಯಾಸದ ನಂತರ ಮಾಡಲಾಗುತ್ತದೆ. ಈ ಆಸನವನ್ನು ಮಾಡುವಾಗ ಧ್ಯಾನ ಮಾಡುವ ಅವಶ್ಯಕತೆಯಿದೆ. ಈ ಆಸನವು ದೇಹ ಮತ್ತು ಮನಸ್ಸನ್ನು ಒತ್ತಡದಿಂದ ಮತ್ತು ರೋಗಗಳಿಂದ ದೂರವಿರಿಸುತ್ತದೆ. ಇದರಿಂದ ಇನ್ನೇನು ಪ್ರಯೋಜನಗಳಿವೆ?

27

ಶವಾಸನವು ಶವ ಮತ್ತು ಆಸನ ಎಂಬ ಎರಡು ಪದಗಳಿಂದ ಕೂಡಿದೆ. ಈ ಆಸನದಲ್ಲಿ, ದೇಹವು ಮೃತ ದೇಹದಂತೆ ಕಾಣುತ್ತದೆ, ಅದಕ್ಕಾಗಿಯೇ ಇದಕ್ಕೆ ಈ ಹೆಸರನ್ನು ನೀಡಲಾಗಿದೆ. ಇಂಗ್ಲಿಷ್ ನಲ್ಲಿ ಇದನ್ನು ಕಾರ್ಪ್ಸ್ ಫೋಸ್ (Corpse Pose) ಎಂದು ಕರೆಯಲಾಗುತ್ತದೆ. ಈ ಆಸನವನ್ನು ಮಲಗಿ ಕಣ್ಣುಗಳನ್ನು ಮುಚ್ಚುವ ಮೂಲಕ ಮಾಡಲಾಗುತ್ತದೆ. ನೀವು ತುಂಬಾ ದಣಿದಿದ್ದರೂ ಸಹ ಈ ಆಸನವನ್ನು ಮಾಡಬಹುದು. ಶವಾಸನದ ಒಂದು ಸಣ್ಣ ಅಭ್ಯಾಸವು ನಿಮ್ಮಲ್ಲಿ ತಾಜಾತನ, ಹೊಸ ಹುರುಪು ತುಂಬುವಂತೆ ಮಾಡುತ್ತೆ. ಈ ಆಸನದ ಇತರ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

37

ಶವಾಸನದ ಪ್ರಯೋಜನಗಳು
ಒತ್ತಡವನ್ನು ನಿವಾರಿಸುತ್ತೆ (stress relief) 
ಶವಾಸನ ಮಾಡುವುದರಿಂದ, ದೇಹವು ವಿಶ್ರಾಂತಿ ಭಂಗಿಗೆ ಹೋಗುತ್ತದೆ, ಇದರಿಂದ ಅದು ಸಂಪೂರ್ಣವಾಗಿ ವಿಶ್ರಾಂತಿ ಪಡೆಯುತ್ತದೆ. ಈ ಆಸನವು ಅಂಗಾಂಶಗಳು ಮತ್ತು ಜೀವಕೋಶಗಳನ್ನು ಸರಿಪಡಿಸುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ.

47

ರಕ್ತದೊತ್ತಡ ನಿಯಂತ್ರಿಸಲು ಸಹಾಯ (blood pressure control)
ಶವಾಸನದ ಅಭ್ಯಾಸವು ಅಧಿಕ ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ, ಇದು ಹೃದಯ ಸಂಬಂಧಿತ ಸಮಸ್ಯೆಗಳ ಸಾಧ್ಯತೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಹಾಗಾಗಿ ಈ ಯೋಗವನ್ನು ನಿಯಮಿತವಾಗಿ ಮಾಡಿ.

57

ಶಕ್ತಿ ಹೆಚ್ಚಿಸುತ್ತೆ (strength)
ಶವಾಸನ ಮಾಡುವುದರಿಂದ, ದೇಹವು ತ್ವರಿತವಾಗಿ ಶಕ್ತಿಯನ್ನು ಪಡೆಯುತ್ತದೆ, ಇದು ಕೆಲಸ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಶವಾಸನವು ಋತುಚಕ್ರದ ಅನಿಯಮಿತತೆಯನ್ನು ಸಹ ತೆಗೆದುಹಾಕುತ್ತದೆ.

67

ಏಕಾಗ್ರತೆ ಮದ್ದು (concentration)
ಶವಾಸನ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ, ಇದರಿಂದ ನೀವು ಯಾವುದೇ ಕೆಲಸದ ಮೇಲೆ ಉತ್ತಮವಾಗಿ ಗಮನ ಹರಿಸಬಹುದು. ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಜ್ಞಾಪಕ ಶಕ್ತಿ ಉತ್ತಮವಾಗಿರುತ್ತದೆ. ಈ ಆಸನವು ದೇಹದಲ್ಲಿ ರಕ್ತ ಪರಿಚಲನೆಯನ್ನು ಸಹ ಸುಧಾರಿಸುತ್ತದೆ. 

77

ಶವಾಸನ ಮಾಡುವಾಗ ಈ ಮುನ್ನೆಚ್ಚರಿಕೆ ವಹಿಸಿ
ನಿಮ್ಮ ಸೊಂಟದ ಸ್ನಾಯುಗಳು ಬಿಗಿಯಾಗಿದ್ದರೆ, ಶವಾಸನದ ಅಭ್ಯಾಸವು ಅಲ್ಪಾವಧಿಯಲ್ಲಿ ಬೆನ್ನು ನೋವಿಗೆ ಕಾರಣವಾಗಬಹುದು. ಆದ್ದರಿಂದ ಇದನ್ನು ತಪ್ಪಿಸಲು, ಶವಾಸನ ಮಾಡುವಾಗ ಕಾಲುಗಳನ್ನು ಹಗುರವಾಗಿ ಎತ್ತಿ. ಇದರಿಂದ ಸ್ನಾಯುಗಳು ಸಡಿಲವಾಗುತ್ತೆ.
 

About the Author

SN
Suvarna News
ಯೋಗ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved