Health Tips: ಡ್ರಿಂಕ್ಸ್ ಮಾಡೋದು ತಪ್ಪು, ಹೆಚ್ಚು ತೊಂದ್ರೆ ಆಗದಂತೆ ಮೊದಲು ಈ ಫುಡ್ ತಿನ್ನಿ
ಡ್ರಿಂಕ್ಸ್ ಪಾರ್ಟಿ ಮಾಡೋಕೆ ರೆಡಿ ಆಗಿದೀರಾ? ಹಾಗಿದ್ರೆ ಕೇಳಿ, ಡ್ರಿಂಕ್ಸ್ ಮಾಡೋದು ಹೇಗೋ ಆರೋಗ್ಯಕ್ಕೆ ಹಾನಿ ಮಾಡುತ್ತೆ ಅನ್ನೋದು ಗೊತ್ತು. ಅದರ ಜೊತೆಗೆ ನೀವು ಸೇವಿಸೋ ಆಹಾರ ಕೂಡ, ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು. ಹಾಗಿದ್ರೆ ಯಾವ ರೀತಿ ಆಹಾರ ಸೇವಿಸಬೇಕು?
ಆಲ್ಕೋಹಾಲ್ (alcohol) ಸೇವಿಸೋದು ಆರೋಗ್ಯಕ್ಕೆ ತುಂಬಾನೆ ಹಾನಿ ಮಾಡುತ್ತೆ ಅನ್ನೋದು ನಿಮಗೆ ಗೊತ್ತೆ ಇದೆ. ಆಲ್ಕೋಹಾಲ್ ಕುಡಿದಾಗ ಅದು ರಕ್ತದೊಂದಿಗೆ ಸೇರಿ ನಮ್ಮ ಅಂಗಾಂಗದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಆಲ್ಕೋಹಾಲ್ ಸೇವಿಸಬಾರದು. ಒಂದು ವೇಳೆ ಆಲ್ಕೋಹಾಲ್ ಬಿಟ್ಟಿರಲು ಸಾಧ್ಯವೇ ಇಲ್ಲ ಅನ್ನೋದಾದ್ರೆ, ಡ್ರಿಂಕ್ಸ್ ಮಾಡೋ ಮೊದಲು ಆರೋಗ್ಯಯುತ ಆಹಾರ ಸೇವಿಸಿ.
ಆಲ್ಕೋಹಾಲ್ ಸೇವಿಸುವ ಮೊದಲು ಆಹಾರವನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಮೊದಲನೆಯದಾಗಿ, ನಿಮ್ಮ ಹೊಟ್ಟೆಯಲ್ಲಿರುವ ಆಹಾರದ ನೀರಿನ ಅಂಶವು ಆಲ್ಕೋಹಾಲ್ ಅನ್ನು ದುರ್ಬಲಗೊಳಿಸುತ್ತದೆ. ಅಷ್ಟೆ ಅಲ್ಲ, ಈಗಾಗಲೇ ಹೊಟ್ಟೆಯಲ್ಲಿರುವ ಆಹಾರದ ಪ್ರೋಟೀನ್ಗಳು, ಕೊಬ್ಬುಗಳು ಮತ್ತು ಫೈಬರ್ ಅಂಶಗಳು ಆಲ್ಕೋಹಾಲ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಜೊತೆಗೆ, ಆರೋಗ್ಯಕರ ಆಹಾರವು (healthy food) ನಿಮ್ಮ ದೇಹಕ್ಕೆ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ, ಇದರಿಂದ ಆಲ್ಕೋಹಾಲ್ ಕ್ಷೀಣಿಸುತ್ತದೆ.
ಡ್ರಿಂಕ್ಸ್ ಮಾಡೋವಾಗ ಇದನ್ನ ಅವಾಯ್ಡ್ ಮಾಡಿ.
ಆಲ್ಕೋಹಾಲ್ ಕುಡಿಯುವಾಗ ತಿನ್ನಲು ಬಯಸಿದ್ರೆ, ಉಪ್ಪಿನ ತಿಂಡಿಗಳನ್ನು (salty food) ಅವಾಯ್ಡ್ ಮಾಡಿ. ಇವು ನಿಮಗೆ ಬಾಯಾರಿಕೆ ಉಂಟುಮಾಡಬಹುದು, ಇದರಿಂದ ನೀವು ಹೆಚ್ಚು ಹೆಚ್ಚು ಕುಡಿಯುವ ಸಾಧ್ಯತೆಯಿದೆ. ಡೀಹೈಡ್ರೇಶನ್ ತಡೆಯಲು ಡ್ರಿಂಕ್ಸ್ ಮಾಡೋ ಮೊದಲು ಮತ್ತು ನಡುವೆ ನೀರು ಕುಡಿಯುವುದು ಸಹ ಮುಖ್ಯ.
ಡ್ರಿಂಕ್ಸ್ ಮಾಡೋ ಮೊದಲು ಈ ಆಹಾರ ಸೇವಿಸಿ
ಕುಡಿಯುವ ಮೊದಲು ತಿನ್ನಬೇಕಾದ ಅತ್ಯುತ್ತಮ ಆಹಾರವೆಂದರೆ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಹಣ್ಣು ಮತ್ತು ತರಕಾರಿಗಳು (fruits and vegetables). ನೀವು ಸೌತೆಕಾಯಿ, ಟೊಮೆಟೊ, ಬೆಲ್ ಪೆಪ್ಪರ್ ಮತ್ತು ಮೂಲಂಗಿಗಳನ್ನು ಸೇವಿಸಬಹುದು. ಇವು ಆರೋಗ್ಯಕ್ಕೆ ಅತ್ಯುತ್ತಮವಾಗಿದೆ.
ಇನ್ನು ಡ್ರಿಂಕ್ಸ್ ಮಾಡುವ ಮೊದಲು ನಿಮ್ಮ ಹೊಟ್ಟೆಯನ್ನು ಪ್ಯಾಕ್ ಮಾಡಲು ಪೌಷ್ಠಿಕಾಂಶ ಭರಿತ ಸ್ಟಾರ್ಟರ್ ಸೇವಿಸಿ. ನೀವು ಹಣ್ಣು ತಿನ್ನಲು ಬಯಸಿದರೆ, ಒಂದು ಅಥವಾ ಎರಡು ಬಾಳೆಹಣ್ಣುಗಳನ್ನು ಸೇವಿಸಿ. ಇದು ಫೈಬರ್, ನೀರಿನ ಅಂಶ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ಕುಡಿಯುವ ಎಷ್ಟು ಸಮಯದ ಮೊದಲು ತಿನ್ನಬೇಕು?
ಡ್ರಿಂಕ್ಸ್ ಮಾಡುವ ಮುನ್ನ ಸ್ವಲ್ಪ ತಿನ್ನುವುದು ಮುಖ್ಯ. ನೀವು ಆಹಾರದ ಜೊತೆ ಡ್ರಿಂಕ್ಸ್ ಮಾಡಿದ್ರೆ, ಆಲ್ಕೋಹಾಲ್ ತಕ್ಷಣ ಹೊಟ್ಟೆಯಲ್ಲಿ ಹೀರಲ್ಪಡುತ್ತದೆ. ಆಹಾರವು ಆಲ್ಕೋಹಾಲ್ ಹೀರಿಕೊಳ್ಳುವ ಪ್ರಮಾಣವನ್ನು ನಿಧಾನಗೊಳಿಸಲು, ಡ್ರಿಂಕ್ಸ್ ಮಾಡುವ ಕನಿಷ್ಠ 15 ನಿಮಿಷಗಳ ಮೊದಲು ಅದನ್ನು ಸೇವಿಸಿ.
ಕುಡಿದ ನಂತರ ತಿನ್ನುವುದರಿಂದ ಏನೇನು ಪ್ರಯೋಜನವಿದೆಯೇ?
ಅತಿಯಾಗಿ ಡ್ರಿಂಕ್ಸ್ ಮಾಡಿದ ನಂತರ ನೇರವಾಗಿ ನೀರು ಕುಡಿಯುವುದು ಅಥವಾ ಆಹಾರವನ್ನು ಸೇವಿಸುವುದು ಹ್ಯಾಂಗೋವರ್ ಅನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಜನರು ನಂಬುತ್ತಾರೆ. ಆದರೆ , ನೆದರ್ಲ್ಯಾಂಡ್ ನ ಆಮ್ಸ್ಟರ್ಡ್ಯಾಮ್ನಲ್ಲಿ ನಡೆದ ಯುರೋಪಿಯನ್ ಕಾಲೇಜ್ ಆಫ್ ನ್ಯೂರೋಫಾರ್ಮಾಕಾಲಜಿ (ಇಸಿಎನ್ಪಿ) ನಡೆಸಿದ ಸಂಶೋಧನೆ ಮಾತ್ರ ಹ್ಯಾಂಗ್ ಓವರ್ (hangover) ಕಡಿಮೆ ಆಗುತ್ತೆ ಅನ್ನೋದಕ್ಕೆ ಯಾವ ಆಧಾರವೂ ಇಲ್ಲ ಎಂದಿದೆ.