ಸ್ನಾನ ಮಾಡಿದ ಬಳಿಕ ಈ ತಪ್ಪು ಮಾಡಿದ್ರೆ, ದೊಡ್ಡ ಸಮಸ್ಯೆ ಆಗುತ್ತೆ!
ಸ್ನಾನ ಮಾಡಿದ ತಕ್ಷಣ ನಾವು ಒಂದೊಂದು ಕೆಲಸವನ್ನು ಮಾಡುತ್ತೇವೆ. ಆದರೆ ನಾವು ಮಾಡೋ ಕೆಲವೊಂದು ಕೆಲಸಗಳು ನಮ್ಮ ಶರೀರದ ಮೇಲೆ ಅಥವಾ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಯಾವ ಕೆಲಸ ಮಾಡಬಾರದು ನೋಡೋಣ.
ನಾವು ಆರೋಗ್ಯವಾಗಿರಬೇಕು ಅಂದ್ರೆ ತಿನ್ನುವುದರಿಂದ ಹಿಡಿದು, ಕುಡಿಯುವುದರಿಂದ ಹಿಡಿದು, ದೈಹಿಕ ವ್ಯಾಯಾಮದ ಬಗ್ಗೆಯೂ ಗಮನ ಹರಿಸಬೇಕು. ಇದರೊಂದಿಗೆ ಪ್ರತಿದಿನ ಸ್ನಾನ ಮಾಡುವುದು ಸಹ ದೇಹಕ್ಕೆ ತುಂಬಾ ಅಗತ್ಯ. ಸ್ನಾನ ಮಾಡೋದೇನೋ ಸರಿ, ಆದರೆ ಸ್ನಾನ (bathing) ಮಾಡಿದ ತಕ್ಷಣ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಹೌದು ಆಹಾರ ತಿಂದು ತಕ್ಷಣ ಸ್ನಾನ ಮಾಡಬಾರದು ಎನ್ನುತ್ತಾರೆ, ಅದೇ ರೀತಿ ಸ್ನಾನ ಮಾಡಿದ ಬಳಿಕ ಕೆಲವು ಕೆಲಸಗಳನ್ನು ಮಾಡಬಾರದು. ಈ ಕೆಲಸಗಳನ್ನು ಮಾಡುವುದರಿಂದ ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು (health issues) ಉಂಟಾಗಬಹುದು. ಹಾಗಿದ್ರೆ, ಸ್ನಾನದ ನಂತರ ಏನು ಮಾಡಬಾರದು ಎಂದು ತಿಳಿಯೋಣ.
ನೀರು ಕುಡಿಯಬೇಡಿ (Drink water)
ಸ್ನಾನ ಮಾಡಿ ಬಂದ ತಕ್ಷಣ ಯಾವತ್ತೂ ನೀರು ಕುಡಿಯಲೇಬೇಡಿ. ಯಾಕಂದ್ರೆ ಸ್ನಾನ ಮಾಡುವಾಗ ನಮ್ಮ ದೇಹದ ಟೆಂಪ್ರೇಚರ್ ಮತ್ತು ಬ್ಲಡ್ ಸರ್ಕ್ಯುಲೇಶನ್ ಬೇರೆ ಬೇರೆಯಾಗಿರುತ್ತೆ. ಇಂತಹ ಸಂದರ್ಭದಲ್ಲಿ ಸ್ನಾನ ಮಾಡಿದ ತಕ್ಷಣ ನೀರು ಕುಡಿಯೋದರಿಂದ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಬ್ಲಡ್ ಪ್ರೆಶರ್ ಅಸಮತೋಲವಾಗುತ್ತೆ
ನೀವು ಸ್ನಾನ ಮಾಡಿ ಬಂದ ಕೂಡಲೇ ನೀರು ಕುಡಿದ್ರೆ ಅದರಿಂದ ಬ್ಲಡ್ ಸರ್ಕ್ಯುಲೇಶನ್ ಮೇಲೆ ಪ್ರಭಾವ ಬೀರುತ್ತದೆ. ಇದರಿಂದಾಗಿ ರಕ್ತದೊತ್ತಡ (blood pressure) ಸಹ ಅಸಮತೋಲನಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಡ್ರೈಯರ್ ಬಳಸಿ ಕೂದಲು ಒಣಗಿಸಬೇಡಿ
ಸ್ನಾನ ಮಾಡಿದ ತಕ್ಷಣ ಅಥವಾ ನಂತರವೂ ಹೇರ್ ಡ್ರೈಯರ್ (Hair Dryer) ಬಳಸಿ ಕೂದಲು ಡ್ರೈ ಮಾಡೋದು ಬೇಡ. ಇದರಿಂದ ಕೂದಲಿನ ಸಾಫ್ಟ್ ನೆಸ್ ಮರೆಯಾಗುತ್ತದೆ, ಕೂದಲು ಹೆಚ್ಚು ಡ್ರೈ ಆಗುತ್ತೆ, ನಂತರ ಉದುರುವ ಸಾಧ್ಯತೆಯೂ ಹೆಚ್ಚು.
ಚರ್ಮವನ್ನು ಜೋರಾಗಿ ಉಜ್ಜಬೇಡಿ
ಸ್ನಾನ ಮಾಡಿ ಬಂದ ತಕ್ಷಣ, ಟವೆಲ್ ತೆಗೆದುಕೊಂಡು ಸ್ಕಿನ್ ಅನ್ನು ಜೋರಾಗಿ ಉಜ್ಜುವ ಅಭ್ಯಾಸ ಕೆಲವರಿಗಿದೆ. ಆದರೆ ಹೀಗೆ ಮಾಡಲೇಬಾರದು. ಇದರಿಂದ ತ್ವಚೆಯಲ್ಲಿ ಡೀಹೈಡ್ರೇಟ್ ಆಗುವ ಸಾಧ್ಯತೆ ಇದೆ. ಇದರಿಂದ ಚರ್ಮ ಒಣಗುತ್ತದೆ.
ಚರ್ಮದಲ್ಲಿ ತುರಿಕೆ
ಸ್ನಾನ ಮಾಡಿ ಬಂದ ನಂತರ ಟವೆಲ್‌ನಿಂದ ಮೈಯನ್ನು ಗಟ್ಟಿಯಾಗಿ ಉಜ್ಜೋದರಿಂದ ಸ್ಕಿನ್ ಮೇಲಿರುವ ನೀರಿನ ಕಣಗಳನ್ನು ಚರ್ಮ ಎಳೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ತ್ವಚೆ ಡ್ರೈ ಆಗುತ್ತದೆ, ಇದರಿಂದಾಗಿ ಚರ್ಮದಲ್ಲಿ ತುರಿಕೆ (skin itching) ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಬಿಸಿಲಲ್ಲಿ ಹೋಗಬೇಡಿ
ಸ್ನಾನ ಮಾಡಿ ಬಂದ ತಕ್ಷಣ ಬಿಸಿಲಿನಲ್ಲಿ ಹೋಗಬೇಡಿ. ಇದರಿಂದ ಒಮ್ಮಿಂದೊಮ್ಮೆಲೆ ನಿಮ್ಮ ಮೇಲೆ ಬಿಸಿಲು ಬಿದ್ದು, ದೇಹ ಬಿಸಿಯೇರಿ, ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಸ್ನಾನ ಮಾಡಿ ಬಂದ ತಕ್ಷಣ ಈ ನಾಲ್ಕು ಕೆಲಸ ಮಾಡೋದನ್ನು ತಪ್ಪಿಸಿ.