ವ್ಯಾಯಾಮಕ್ಕೆ ಪುರುಸೊತ್ತಿಲ್ವ? ಹೊಟ್ಟೆಯ ಕೊಬ್ಬು ಕರಗಿಸಲು ಬೆಳಗ್ಗೆ ಕುಡಿಯುವ 5 ಪಾನೀಯಗಳು!
ವ್ಯಾಯಾಮ ಮತ್ತು ಡಯಟ್ ಮಾಡಿದ್ರೂ ಹೊಟ್ಟೆ ಕರಗ್ತಿಲ್ಲ ಅಂತ ಕೆಲವರು ಹೇಳ್ತಾರೆ. ಹೊಟ್ಟೆ ಹೆಚ್ಚಲು ಕೇವಲ ಆಹಾರವಲ್ಲ ಕಾರಣ. ನಿಮ್ಮ ಕೆಲವು ಅಭ್ಯಾಸಗಳು ಕೂಡ ಕಾರಣವಾಗಿರಬಹುದು. ಹೊಟ್ಟೆಯ ಸುತ್ತ ಅತಿಯಾದ ಕೊಬ್ಬು ಸೇರಿದಾಗ ಅದನ್ನ ಹೊಟ್ಟೆಬೊಜ್ಜು ಅಂತಾರೆ. ಹೊಟ್ಟೆಯ ಕೊಬ್ಬು ಕರಗಿಸಲು ಕೆಲವು ಪಾನೀಯಗಳು ಸಹಾಯ ಮಾಡುತ್ತವೆ.
ಎಸ್ಪ್ರೆಸೊ ಕಾಫಿ
ದಿನಕ್ಕೆ 2-3 ಕಪ್ ಕಾಫಿ ಕುಡಿದರೆ ದೇಹ ಮತ್ತು ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ. ಕೆಫೀನ್ ಕೊಬ್ಬು ಕರಗಿಸುವುದನ್ನು ಹೆಚ್ಚಿಸುತ್ತದೆ ಎಂದು ಕ್ಲಿನಿಕಲ್ ಫಿಸಿಯೋಲಾಜಿಕಲ್ ಆ್ಯಂಡ್ ಫಂಕ್ಷನಲ್ ಇಮೇಜಿಂಗ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನ ಹೇಳುತ್ತದೆ.
ಗ್ರೀನ್ ಟೀ
ಪಾಲಿಫಿನಾಲ್ಸ್ ಎಂಬ ಆಂಟಿಆಕ್ಸಿಡೆಂಟ್ ಗಳು ಗ್ರೀನ್ ಟೀ ನಲ್ಲಿ ಹೆಚ್ಚಿವೆ. ನಿತ್ಯ ಗ್ರೀನ್ ಟೀ ಕುಡಿದರೆ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.
ಎಂಜೈಮ್ ಗಳು, ಪೊಟ್ಯಾಶಿಯಂ, ಪ್ರೋಟೀನ್ ಮತ್ತು ನಾರಿನಂಶ ಇರುವ ಕರಿಕೆ ಹಣ್ಣಿನ ನೀರು ತೂಕ ಇಳಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಬಿಸಿ ನೀರಿಗೆ ತುಪ್ಪ ಹಾಕಿ ಕುಡಿದ್ರೆ ಏನಾಗುತ್ತೆ ಗೊತ್ತಾ?
ಬ್ಲಾಕ್ ಟೀ ನಲ್ಲಿ ಹೆಚ್ಚಿನ ಪ್ರಮಾಣದ ಪಾಲಿಫಿನಾಲ್ ಇದೆ. ಇದು ತೂಕ ಇಳಿಸಲು ಸಹಾಯ ಮಾಡುವ ಆಂಟಿಆಕ್ಸಿಡೆಂಟ್ ಎಂದು ಯುರೋಪಿಯನ್ ಜರ್ನಲ್ ಆಫ್ ನ್ಯೂಟ್ರಿಷನ್ ನಲ್ಲಿ ಪ್ರಕಟವಾದ ಅಧ್ಯಯನ ಹೇಳುತ್ತದೆ.
ಶುಂಠಿ ಚಹಾ ಕೂಡ ಒಳ್ಳೆಯದು. ಶುಂಠಿಯಲ್ಲಿರುವ ಶೋಗಾಲ್ಸ್ ಮತ್ತು ಜಿಂಜರಾಲ್ಸ್ ಕೊಬ್ಬು ಕರಗಿಸಲು ಸಹಾಯ ಮಾಡುತ್ತವೆ. ಶುಂಠಿ, ನಿಂಬೆರಸ ಸೇರಿಸಿದ ಚಹಾ ತೂಕ ಇಳಿಸಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕ.