ಸ್ಯಾಮ್‌ಸಂಗ್‌ನಿಂದ ಹೊಸ ಗ್ಯಾಲಕ್ಸಿ ಸ್ಮಾರ್ಟ್‌ವಾಚ್ ಸೀರಿಸ್ ಲಾಂಚ್, 15,000 ರೂ ಆಫರ್
ಸ್ಯಾಮ್‌ಸಂಗ್ ಇದೀಗ ಹೊಸ ವಾಚ್ ಸಿರೀಸ್ ಬಿಡುಗಡೆ ಮಾಡಿದೆ. ಆಕರ್ಷಕ ಬೆಲೆಯಲ್ಲಿ ಹೊಸ ವಿನ್ಯಾಸ ಹಾಗೂ ಫೀಚರ್ಸ್ ವಾಚ್ ಲಭ್ಯವಿದೆ. ಈಗಾಗಲೇ ಪ್ರೀ ಆರ್ಡರ್ ಆರಂಭಗೊಂಡಿದೆ.

ಸ್ಮಾರ್ಟ್‌ಫೋನ್ ಮೂಲಕ ಭಾರತದ ಅತೀ ದೊಡ್ಡ ಬ್ರ್ಯಾಂಡ್ ಆಗಿ ಹೊರಹೊಮ್ಮಿರುವ ಸ್ಯಾಮ್‌ಸಂಗ್ ಇದೀಗ ಗ್ಯಾಲಕ್ಸಿ ವಾಚ್8 ಹಾಗೂ ಗ್ಯಾಲಕ್ಸಿ ವಾಚ್8 ಕ್ಲಾಸಿಕ್ ಬಿಡುಗಡೆ ಮಾಡಿದೆ. ಈ ಗ್ಯಾಲಕ್ಸಿ ವಾಚ್ ಸರಣಿಯು ಗ್ಯಾಲಕ್ಸಿ ವಾಚ್ ಗಳಲ್ಲಿಯೇ ಅತಿ ವಿಶಿಷ್ಟವಾದ ವಿನ್ಯಾಸವನ್ನು ಹೊಂದಿದೆ. ಈ ವಿನ್ಯಾಸವನ್ನು ಗ್ಯಾಲಕ್ಸಿ ಅಲ್ಟ್ರಾದ ಕುಶನ್ ಡಿಸೈನ್ ಆಧಾರದಲ್ಲಿ ರಚಿಸಲಾಗಿದೆ. ಈ ಸರಣಿಯು ಇದುವರೆಗಿನ ಅತ್ಯಂತ ತೆಳುವಾದ ಗ್ಯಾಲಕ್ಸಿ ವಾಚ್ ಆಗಿರುವುದು ವಿಶೇಷ. ಬಿಡುಗಡೆಯ ಭಾಗವಾಗಿ ಸ್ಯಾಮ್‌ಸಂಗ್ ಆರಂಭಿಕ ಹಂಕದಲ್ಲಿ ಆಕರ್ಷಕ ಬೆಲೆಗಳನ್ನು ಪರಿಚಯಿಸಿದೆ ಮತ್ತು ವಿಶೇಷ ಪ್ರೀ-ಆರ್ಡರ್ ಕೊಡುಗೆಗಳನ್ನು ನೀಡುತ್ತಿದೆ. ಗ್ಯಾಲಕ್ಸಿ ವಾಚ್8 40ಎಂಎಂ ಬಿಟಿ ಬೆಲೆ ₹32,999 ಆಗಿದ್ದು, 40ಎಂಎಂ ಎಲ್ ಟಿ ಇ ಆವೃತ್ತಿಯ ಬೆಲೆ ₹36,999. ದೊಡ್ಡ 44ಎಂಎಂ ಬಿಟಿ ಮತ್ತು ಎಲ್ ಟಿ ಐ ಆವೃತ್ತಿಗಳ ಬೆಲೆ ಕ್ರಮವಾಗಿ ₹35,999 ಮತ್ತು ₹39,999 ಆಗಿದೆ. ಗ್ಯಾಲಕ್ಸಿ ವಾಚ್8 ಕ್ಲಾಸಿಕ್ 47ಎಂಎಂ ಬಿಟಿ ಮಾದರಿಯ ಬೆಲೆ ₹46,999, ಎಲ್ ಟಿ ಇ ಆವೃತ್ತಿಯ ಬೆಲೆ ₹50,999 ಆಗಿದೆ.
ಜುಲೈ 9 ರಿಂದ ಜುಲೈ 24ರವರೆಗೆ ಗ್ಯಾಲಕ್ಸಿ ವಾಚ್8 ಸರಣಿಯನ್ನು ಪ್ರೀ-ಆರ್ಡರ್ ಮಾಡುವ ಗ್ರಾಹಕರು ₹12,000 ವರೆಗಿನ ಬಹು- ಬ್ಯಾಂಕ್ ಕ್ಯಾಶ್‌ಬ್ಯಾಕ್ ಅಥವಾ ಅಪ್‌ಗ್ರೇಡ್ ಬೋನಸ್, ಹೊಸ ಗ್ಯಾಲಕ್ಸಿ ಎಸ್ ಮತ್ತು ಝಡ್ ಸರಣಿಯ ಮೇಲೆ ₹15,000 ವರೆಗಿನ ಬಹು-ಖರೀದಿ ಆಫರ್ ಗಳನ್ನು ಪಡೆಯಬಹುದು. ಜೊತೆಗೆ, ಪ್ರಮುಖ ಬ್ಯಾಂಕ್ ಗಳು ಮತ್ತು ಎನ್ ಬಿ ಎಫ್ ಸಿಗಳಲ್ಲಿ 18 ತಿಂಗಳವರೆಗಿನ ನೋ ಕಾಸ್ಟ್ ಇಎಂಐ ಆಯ್ಕೆಗಳು ಲಭ್ಯವಿದೆ.
ಸಂಪೂರ್ಣ ಆರೋಗ್ಯ ಪರಿಶೀಲನೆಗಾಗಿ ಮರುವಿನ್ಯಾಸ
ಗ್ಯಾಲಕ್ಸಿ ವಾಚ್8 ಸರಣಿಯಲ್ಲಿ ರೂಪ ಮತ್ತು ಕಾರ್ಯ ಎರಡನ್ನೂ ಮರುವಿನ್ಯಾಸಗೊಳಿಸಲಾಗಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಜೊತೆಗೆ ಅತ್ಯಂತ ಆರಾಮವನ್ನು ಒದಗಿಸುತ್ತದೆ. ಅಲ್ಲದೇ ಇದು ದೈನಂದಿನ ಆರೋಗ್ಯ ನೋಡಿಕೊಳ್ಳಲು ಒಂದು ಸೂಕ್ತ ಸಂಗಾತಿಯಾಗಿ ಕಾರ್ಯ ನಿರ್ವಹಿಸುತ್ತದೆ. ಗ್ಯಾಲಕ್ಸಿ ವಾಚ್ ಆಲ್ಟ್ರಾದಲ್ಲಿ ಪರಿಚಯಿಸಲಾದ ವಿಶಿಷ್ಟ ಕುಶನ್ ಡಿಸೈನ್ ಈಗ ಇಡೀ ಗ್ಯಾಲಕ್ಸಿ ವಾಚ್ ಶ್ರೇಣಿಯನ್ನು ಮರುವಿನ್ಯಾಸಗೊಳಿಸುತ್ತಿದೆ. ಇದುವರೆಗಿನ ಅತ್ಯಂತ ತೆಳುವಾದ ವಾಚ್ ಡಿಸೈನ್ ಒದಗಿಸುವ ಸಲುವಾಗಿ ಗ್ಯಾಲಕ್ಸಿ ವಾಚ್8ನ ಆಂತರಿಕ ರಚನೆಯನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ ಮತ್ತು ಘಟಕಗಳ ಮೌಂಟಿಂಗ್ ಸಾಮರ್ಥ್ಯವನ್ನು ಶೇ.30ರಷ್ಟು ಸುಧಾರಿಸಲಾಗಿದೆ, ಇದರಿಂದಾಗಿ ಶೇ.11ರಷ್ಟು ತೆಳುವಾದ ವಾಚ್ ಡಿಸೈನ್ ದೊರಕಿದೆ. ಲಗ್ ಸಿಸ್ಟಮ್ ಅನ್ನು ಈ ಡಿಸೈನ್ ಜೊತೆ ಒದಗಿಸಲಾಗಿದ್ದು, ಈ ವಿನ್ಯಾಸವು ಮಣಿಕಟ್ಟಿನ ಚಲನೆಗೆ ಪೂರಕವಾಗಿ ಚಲಿಸುತ್ತದೆ. ಆ ಮೂಲಕ ಉತ್ತಮ ಸೌಲಭ್ಯ ಒದಗಿಸುತ್ತದೆ ಮತ್ತು ಸುಲಭವಾಗಿ ಆರೋಗ್ಯ ಚೆಕ್ ಮಾಡಲು ಅನುವು ಮಾಡಿಕೊಡುತ್ತದೆ.
ತೀವ್ರ ಸೂರ್ಯನ ಬೆಳಕಿನಲ್ಲಿಯೂ ಡಿಸ್‌ಪ್ಲೇ ನೋಡಬಹುದಾಗಿದ್ದು, ಶೇ.50ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತದೆ. ಅಲ್ಲದೇ 3,000 ನಿಟ್ಸ್ ಬ್ರೈಟ್ ನೆಸ್ ಅನ್ನು ಹೊಂದಿದ್ದು, ಸುಲಭವಾಗಿ ನೋಡಲು ಸಾಧ್ಯವಾಗುತ್ತದೆ. ಅತ್ಯಾಧುನಿಕ ಬ್ಯಾಟರಿಯು ಈ ಕಾಲದ ಜೀವನಶೈಲಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತದೆ. ಡ್ಯುಯಲ್-ಫ್ರೀಕ್ವೆನ್ಸಿ ಜಿಪಿಎಸ್ ಹೆಚ್ಚು ವಿವರವಾಗಿ ಮತ್ತು ನಿಖರವಾಗಿ ಸ್ಥಳಗಳನ್ನು ತೋರಿಸುತ್ತದೆ. 3ಎನ್ಎಂ ಪ್ರೊಸೆಸರ್ ವೇಗವಾದ ಕಾರ್ಯಕ್ಷಮತೆ ಮತ್ತು ವಿದ್ಯುತ್ ದಕ್ಷತೆಯನ್ನು ಒದಗಿಸುತ್ತದೆ. ಗ್ರೌಂಡ್‌ಬ್ರೇಕಿಂಗ್ ಬಯೋಆಕ್ಟಿವ್ ಸೆನ್ಸರ್ ಉತ್ತಮವಾದ ಮತ್ತು ನಿಖರವಾದ ಆರೋಗ್ಯ ಒಳನೋಟಗಳನ್ನು ನೀಡುತ್ತದೆ. ನಿಮ್ಮ ಆರೋಗ್ಯದ ಸಂಪೂರ್ಣ ಚಿತ್ರಣವನ್ನು ಒದಗಿಸುತ್ತದೆ.
ಅತ್ಯುತ್ತಮ ನಿದ್ರೆ ಮತ್ತು ಹೆಲ್ತ್ ಟ್ರ್ಯಾಕಿಂಗ್
ಗ್ಯಾಲಕ್ಸಿ ವಾಚ್8 ಸರಣಿಯು ಆರೋಗ್ಯ ಕೇಂದ್ರಿತ ಸ್ಮಾರ್ಟ್‌ವಾಚ್‌ಗಳ ಸರಣಿಯಾಗಿದ್ದು, ಉತ್ತಮ ಡಿಸೈನ್ ಜೊತೆ ಉತ್ತಮ ಹೆಲ್ತ್ ಟ್ರ್ಯಾಕಿಂಗ್ ಗೆ ಅನುವು ಮಾಡಿಕೊಡುತ್ತದೆ. ಇದು ಸ್ಯಾಮ್‌ಸಂಗ್‌ನ ಇದುವರೆಗಿನ ಅತ್ಯಂತ ಆಧುನಿಕ ಹೆಲ್ತ್ ಮತ್ತು ವೆಲ್‌ನೆಸ್ ವೇರೇಬಲ್ ಸಾಧನ ಅನ್ನುವುದು ಗಮನಾರ್ಹ.
ಬಯೋಆಕ್ಟಿವ್ ಸೆನ್ಸರ್ ಜೊತೆಗೆ ಈ ಗ್ಯಾಲಕ್ಸಿ ವಾಚ್8 ಹೆಚ್ಚು ನಿಖರವಾದ ಮತ್ತು ವಿವರವಾದ ನಿದ್ರೆ ಮಾಹಿತಿಗಳನ್ನು ನೀಡುತ್ತದೆ. ಬೆಡ್‌ಟೈಮ್ ಗೈಡನ್ಸ್ ಫೀಚರ್ ನಿಮ್ಮ ಸರ್ಕಾಡಿಯನ್ ರಿದಮ್ ಅನ್ನು ಅಳೆಯುತ್ತದೆ ಮತ್ತು ಮರುದಿನ ತಾಜಾತನದಿಂದ ಎಚ್ಚರಗೊಳ್ಳಲು ಯಾವಾಗ ಮಲಗಬೇಕು ಎಂದು ಸಮಯವನ್ನು ಸೂಚಿಸುತ್ತದೆ. ವಾಸ್ಕುಲರ್ ಲೋಡ್ ಫೀಚರ್ ನಿದ್ರೆಯ ಸಮಯದಲ್ಲಿ ನಿಮ್ಮ ರಕ್ತನಾಳ ವ್ಯವಸ್ಥೆಯ ಮೇಲಿನ ಒತ್ತಡವನ್ನು ಮೇಲ್ವಿಚಾರಣೆ ಮಾಡುತ್ತದೆ. ಜೊತೆಗೆ ಇದು ಉತ್ತಮ ನಿದ್ರಾ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಸ್ಲೀಪ್ ಕೋಚಿಂಗ್ ಗೆ ಬೆಂಬಲ ನೀಡುತ್ತದೆ.
ಸ್ಲೀಪ್ ಟ್ರ್ಯಾಕಿಂಗ್ ಜೊತೆಗೆ, ಗ್ಯಾಲಕ್ಸಿ ವಾಚ್8 ಅತ್ಯಾಧುನಿಕ ರೀತಿಯಲ್ಲಿ ವೈಯಕ್ತಿಕ ಆರೋಗ್ಯ ನೋಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹೊಸ ಎಐ-ಚಾಲಿತ ಎನರ್ಜಿ ಸ್ಕೋರ್ ಫೀಚರ್ ನಿಮ್ಮ ದೈಹಿಕ ಮತ್ತು ಮಾನಸಿಕ ಶಕ್ತಿಯ ಮೆಟ್ರಿಕ್ ಗಳನ್ನು ಸಂಯೋಜಿಸಿ, ನಿಮ್ಮ ಶಕ್ತಿಯ ಮಟ್ಟದ ಕುರಿತು ಮಾಹಿತಿ ನೀಡುತ್ತದೆ. ಇದರಿಂದ ನೀವು ಪ್ರತಿದಿನ ಆರೋಗ್ಯಕರ ಜೀವನವನ್ನು ನಡೆಸಬಹುದು. ರನ್ನಿಂಗ್ ಕೋಚ್7 ನಿಮ್ಮ ಫಿಟ್‌ನೆಸ್ ಅನ್ನು 1 ರಿಂದ 10 ರವರೆಗಿನ ಸ್ಕೇಲ್ ನಲ್ಲಿ ಮೌಲ್ಯಮಾಪನ ಮಾಡುತ್ತದೆ ಮತ್ತು ಲೈವ್ ಮಾರ್ಗದರ್ಶನ ಮತ್ತು ಪ್ರೇರಣಾತ್ಮಕ ಸಲಹೆಗಳೊಂದಿಗೆ ವೈಯಕ್ತಿಕ ತರಬೇತಿ ಯೋಜನೆಯನ್ನು ರಚಿಸುತ್ತದೆ. ಅತ್ಯಾಧುನಿಕ ಟುಗೆದರ್ ಫೀಚರ್ ಈಗ ಓಟಕ್ಕೂ ಹೊಂದಿಕೊಳ್ಳುತ್ತದೆ ಮತ್ತು ಇದು ಈ ಫೀಚರ್ ಬಳಸಿಕೊಂಡು ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸ್ಪರ್ಧೆ ಮಾಡುವ ರೀತಿಯಲ್ಲಿ ನಿಮ್ಮ ಫಿಟ್ ನೆಸ್ ಪ್ರಯಾಣವನ್ನು ಮುನ್ನಡೆಸಬಹುದು.
ವಿಶ್ವದ ಮೊದಲ ಆಂಟಿಆಕ್ಸಿಡೆಂಟ್ ಇಂಡೆಕ್ಸ್ ಮತ್ತು ಗೂಗಲ್‌ನ ಜೆಮಿನಿ ಅಸಿಸ್ಟೆಂಟ್
ಗ್ಯಾಲಕ್ಸಿ ವಾಚ್8 ಸರಣಿಯು ಇದೇ ಮೊದಲ ಬಾರಿಗೆ ಸ್ಮಾರ್ಟ್‌ವಾಚ್‌ನಲ್ಲಿ ಆಂಟಿಆಕ್ಸಿಡೆಂಟ್ ಇಂಡೆಕ್ಸ್ ಅನ್ನು ಪರಿಚಯಿಸಿದ್ದು, ಇದು ಕೇವಲ ಐದು ಸೆಕೆಂಡುಗಳಲ್ಲಿ ಕ್ಯಾರೊಟಿನಾಯ್ಡ್ ಮಟ್ಟವನ್ನು ಅಳೆಯಲು ನೆರವಾಗುತ್ತದೆ. ವಿಶೇಷವಾಗಿ ಆರೋಗ್ಯಕರ ಜೀವನ ನಡೆಸಲು ತಿಳುವಳಿಕೆಯ ಆಯ್ಕೆಗಳನ್ನು ಮಾಡಲು ಸಹಾಯ ಮಾಡುತ್ತದೆ.
ಗೂಗಲ್ ಜೊತೆಗಿನ ಸಹಯೋಗದಲ್ಲಿ ರಚಿಸಲಾಗಿರುವ ಗ್ಯಾಲಕ್ಸಿ ವಾಚ್8 ಸರಣಿಯಲ್ಲಿ ಗೂಗಲ್‌ನ ಎಐ ಅಸಿಸ್ಟೆಂಟ್ ಜೆಮಿನಿಯನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ ಮತ್ತು ಇತ್ತೀಚಿನ ವೇರ್ ಓಎಸ್ 6 ನಲ್ಲಿ ಕಾರ್ಯನಿರ್ವಹಿಸುತ್ತದೆ. ಒನ್ ಯುಐ 8 ವಾಚ್ ಅನ್ನು ಪರಿಚಯಿಸಲಾಗಿದ್ದು, ಇಂಟರ್‌ಫೇಸ್ ಈಗ ವಾಚ್‌ನ ಆಯಾಮಗಳಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಹೊಸ ಮಲ್ಟಿ- ಇನ್ಫೋ ಟೈಲ್ಸ್ ಆರೋಗ್ಯ ಮಾಹಿತಿ, ಹವಾಮಾನ ಮತ್ತು ಮುಂಬರುವ ಕಾರ್ಯಕ್ರಮಗಳಂತಹ ಪ್ರಮುಖ ಮಾಹಿತಿಯ ವಿವರವನ್ನು ಒದಗಿಸುತ್ತದೆ. ಅಪ್ ಡೇಟ್ ಆಗಿರುವ ನೌ ಬಾರ್ ಮತ್ತು ಸರಳೀಕೃತ ನೋಟಿಫಿಕೇಷನ್ ಗಳು ನಿಮ್ಮ ಪ್ರಮುಖ ಚಟುವಟಿಕೆಗಳನ್ನು ಸುಲಭವಾಗಿ ಅರಿವಿಗೆ ಬರುವಂತೆ ಮಾಡುತ್ತದೆ.
ಇದರ ಜೊತೆಗೆ, ಗ್ಯಾಲಕ್ಸಿ ವಾಚ್8 ಸರಣಿಯು ಸ್ಯಾಮ್‌ಸಂಗ್ ಹೆಲ್ತ್ ಆಪ್ ನಲ್ಲಿ ಹೊಸ ವಿಶಿಷ್ಟ ಹೆಲ್ತ್ ಫೀಚರ್‌ಗಳನ್ನು ಒದಗಿಸುತ್ತದೆ. ಈ ಫೀಚರ್ ಗಳು ನಿದ್ರೆ, ಪೌಷ್ಟಿಕಾಂಶ ಮತ್ತು ವರ್ಕೌಟ್ ಕುರಿತಾದ ಪ್ರೇರಣಾತ್ಮಕ ಮಾಹಿತಿಗಳನ್ನು ನೀಡುವುದರ ಮೂಲಕ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ.