MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • Gadgets
  • ಎಐ ಇದ್ಯಲ್ಲ ನೋ ಟೆನ್ಷನ್ ಅಂತಿದ್ರೆ ಈಗ್ಲೇ ಅಲರ್ಟ್ ಆಗಿ, ಸದ್ದಿಲ್ದೆ ಬೀಳ್ತಿದೆ ನಿಮ್ಮ ಬುದ್ಧಿವಂತಿಕೆ ಮೇಲೆ ಹೊಡೆತ

ಎಐ ಇದ್ಯಲ್ಲ ನೋ ಟೆನ್ಷನ್ ಅಂತಿದ್ರೆ ಈಗ್ಲೇ ಅಲರ್ಟ್ ಆಗಿ, ಸದ್ದಿಲ್ದೆ ಬೀಳ್ತಿದೆ ನಿಮ್ಮ ಬುದ್ಧಿವಂತಿಕೆ ಮೇಲೆ ಹೊಡೆತ

ಎಐ ಬಂದ್ಮೇಲೆ ಎಲ್ಲ ಸುಲಭವಾಗಿದೆ. ತಕ್ಷಣ ಸಮಸ್ಯೆಗೆ ಪರಿಹಾರ ನೀಡುವ ಎಐ ನನ್ನ ಬೆಸ್ಟ್ ಫ್ರೆಂಡ್ ಅನ್ನೋರು ನೀವಾ? ಹಾಗಿದ್ರೆ ತಪ್ಪದೆ ಇದನ್ನು ಓದಿ. ಎಐ ನಿಮ್ಮನ್ನು ಬುದ್ಧಿವಂತರನ್ನಾಗಿ ಮಾಡ್ತಿದ್ಯಾ, ದಡ್ಡರನ್ನಾಗಿ ಮಾಡ್ತಿದ್ಯಾ ಗೊತ್ತಾಗುತ್ತೆ 

2 Min read
Author : Roopa Hegde
Published : Apr 18 2026, 01:27 PM IST
Share this Photo Gallery
  • FB
  • TW
  • Linkdin
  • Whatsapp
15
 ಎಐ ಬಳಕೆ
Image Credit : Asianet News

ಎಐ ಬಳಕೆ

ನಮ್ಮ ಪ್ರತಿಯೊಂದು ಕೆಲ್ಸವನ್ನು ಎಐ ಸರಳಗೊಳಿಸಿದೆ. ಎಐ ನಮ್ಮ ಜೀವನದ ಒಂದು ಭಾಗವಾಗಿದೆ. ಪ್ರತಿ ದಿನ ಅನೇಕ ಕೆಲಸಕ್ಕೆ ಎಐ ಸಹಾಯವನ್ನು ನಾವು ಪಡೆಯುತ್ತೇವೆ. ಇಮೇಲ್ ನಿಂದ ಹಿಡಿದು ಆರೋಗ್ಯ ಸಮಸ್ಯೆಯವರೆಗೆ ಎಲ್ಲಕ್ಕೂ ಎಐ ಬಳಿ ಪರಿಹಾರ ಇದೆ. ಅನೇಕರು ಎಐಯನ್ನು ಫ್ರೆಂಡ್ಸ್ ಅಂತೆ ಟ್ರೀಟ್ ಮಾಡಲು ಶುರು ಮಾಡಿದ್ದಾರೆ. ಯಾವುದೇ ಸಮಸ್ಯೆ ಬಂದ್ರೂ ಎಐ ಮೊರೆ ಹೋಗ್ತಿದ್ದಾರೆ. ಆದ್ರೆ ಎಐ ಬಗ್ಗೆ ಈಗ ಆಘಾತಕಾರಿ ಸಂಗತಿ ಹೊರ ಬಿದ್ದಿದೆ.

25
ನೀವೂ ಎಐ ಅತಿ ಹೆಚ್ಚು ಬಳಸ್ತೀರಾ?
Image Credit : Asianet News

ನೀವೂ ಎಐ ಅತಿ ಹೆಚ್ಚು ಬಳಸ್ತೀರಾ?

ಎಐ ಬಗ್ಗೆ ಹೊಸ ಅಧ್ಯಯನ ನಡೆದಿದೆ. ಅದ್ರಲ್ಲಿ ಆಘಾತಕಾರಿ ವಿಷ್ಯ ಹೊರ ಬಿದ್ದಿದೆ. . ಎಐ ಬಳಸುವ ಜನರಿಗೆ ಎಐ ಪರಿಕರಗಳು ಲಭ್ಯವಿಲ್ಲದಿದ್ದಾಗ, ಅವರ ಕಾರ್ಯಕ್ಷಮತೆ ಕುಸಿಯುತ್ತದೆ ಎಂದು ಅಧ್ಯಯನ ಹೇಳಿದೆ. ಅಂದ್ರೆ ಎಐ ಜನರ ಆಲೋಚನಾ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುತ್ತಿದೆ. ಎಐಯನ್ನು ದೀರ್ಘಕಾಲದವರೆಗೆ ಬಳಸಿದ ನಂತರ, ಜನರು ಸ್ವತಂತ್ರವಾಗಿ ಯೋಚಿಸಲು ಸಾಧ್ಯವಾಗೋದಿಲ್ಲ.

Related Articles

Related image1
ಕಿವಿಯೊಳಗೇ ಸಿಡಿದ ಜೆಬಿಎಲ್ ಇಯರ್ ಬಡ್: ಎಂಬಿಬಿಎಸ್ ವಿದ್ಯಾರ್ಥಿನಿಗೆ ಗಂಭೀರ ಗಾಯ
Related image2
ಯೂಟ್ಯೂಬ್ ನಂತೆ WhatsApp ನಲ್ಲೂ ಸಾವಿರಾರು ರೂ. ಅರ್ನ್ ಮಾಡಲು ಬರ್ತಿದೆ ಹೊಸ ಫೀಚರ್‌
35
ಕೆಲ್ಸ ಮಾಡುವ ವಿಧಾನ ಬದಲಿಸಿದ ಎಐ
Image Credit : Asianet News

ಕೆಲ್ಸ ಮಾಡುವ ವಿಧಾನ ಬದಲಿಸಿದ ಎಐ

ಎಐಗಿಂತ ಮೊದಲು ಜನರು ಒಂದು ವಿಷ್ಯದ ಬಗ್ಗೆ ಹೆಚ್ಚಿನ ಜ್ಞಾನ ಪಡೆಯಲು ಗೂಗಲ್ ಮೊರೆ ಹೋಗ್ತಿದ್ದರು. ಇಲ್ಲ ಯೂಟ್ಯೂಬ್ ಮೂಲಕ ಮಾಹಿತಿ ಪಡೆಯುತ್ತಿದ್ದರು. ಆದ್ರೀಗ ಎಐನಲ್ಲಿಯೇ ಎಲ್ಲವೂ ಲಭ್ಯ. ಎಐ ಅರೆ ಕ್ಷಣದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ನೀಡುತ್ತದೆ. ಇದು ಜನರ ಸಮಯ ಉಳಿಸ್ತಿದೆ. ಆದ್ರೆ ಜನರ ತಾಳ್ಮೆ ಮೇಲೆ ಅಡ್ಡಪರಿಣಾಮ ಬೀರ್ತಿದೆ. ಎಐ ಇಲ್ಲ ಅಂದ್ರೆ ಜನರ ಕೈಕಾಲು ಆಡೋದಿಲ್ಲ. ಎಐ ಇಲ್ಲದೆ ಅನೇಕರ ಕೆಲ್ಸ ಮುಂದೆ ಸಾಗೋದಿಲ್ಲ.

45
ಅಧ್ಯಯನದಲ್ಲಿ ತಿಳಿದಿದ್ದೇನು?
Image Credit : Asianet News

ಅಧ್ಯಯನದಲ್ಲಿ ತಿಳಿದಿದ್ದೇನು?

ಅಧ್ಯಯನದಲ್ಲಿ ಎಐ ಬಳಸುವಾಗ ಹಾಗೂ ಎಐ ಬಳಸದಾಗ ಅವರ ಕಾರ್ಯಕ್ಷಮತೆಯನ್ನು ಚೆಕ್ ಮಾಡಲಾಗಿದೆ. ಎಐ ಬಳಸುವಾಗ ಜನರು ಅತಿ ಬೇಗದಲ್ಲಿ ಕೆಲ್ಸ ಮುಗಿಸಿದ್ದಾರೆ. ಹಾಗೆಯೇ ಅವರ ಕೆಲಸ ಉತ್ತಮವಾಗಿತ್ತು. ಅದೇ ಎಐ ಬಳಸದಿದ್ದಾಗ ಜನರು ಸಾಕಷ್ಟು ತಪ್ಪು ಮಾಡಿದ್ದಾರೆ. ಎಐ ಇಲ್ದೆ ಕೆಲ್ಸವನ್ನು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡಿದ್ದಾರೆ. ಎಐ ಇಲ್ದೆ ಹೆಚ್ಚು ಪ್ರಯತ್ನ ಮಾಡಲು ಜನರು ಮುಂದಾಗ್ತಿಲ್ಲ ಎಂಬುದು ಈ ಅಧ್ಯಯನದಿಂದ ಸ್ಪಷ್ಟವಾಗಿದೆ.

55
ಎಚ್ಚರಿಕೆ ಗಂಟೆ
Image Credit : Asianet News

ಎಚ್ಚರಿಕೆ ಗಂಟೆ

ಎಐಯನ್ನು ಅತಿ ಹೆಚ್ಚು ನಂಬಿರುವ ಜನರಿಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಎಐ ಕೆಲ್ಸವನ್ನು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ನಿಜ. ಆದ್ರೆ ಎಐ ನಿಮ್ಮ ಆತ್ಮವಿಶ್ವಾಸ ಹಾಗೂ ಆಲೋಚನೆ ಮಾಡುವ ಶಕ್ತಿಯನ್ನು ಕಸಿದುಕೊಳ್ಳುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಎಲ್ಲ ಸಮಸ್ಯೆಗೆ ಎಐನಿಂದ ಪರಿಹಾರ ಕಂಡುಕೊಳ್ಳುವ ಜನರಿಗೆ ಅದು ದೊಡ್ಡ ಅಭ್ಯಾಸವಾಗಿದೆ. ಅದಿಲ್ಲದೆ ಅವರು ಸಮಸ್ಯೆ ಬಗೆಹರಿಸಲು ಸಾಧ್ಯವಾಗ್ತಿಲ್ಲ. ಜನರ ಸಾಮಾರ್ಥ್ಯದ ಮೇಲೆ ಎಐ ನಕಾರಾತ್ಮಕ ಪರಿಣಾಮ ಬೀರ್ತಿದೆ. ಅಗತ್ಯಕ್ಕಿಂತ ಹೆಚ್ಚು ಎಐ ಬಳಕೆ ಮಾಡ್ಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಅತೀ ಅನಿವಾರ್ಯವಾದಾಗ ಮಾತ್ರ ಎಐ ಬಳಕೆ ಮಾಡುವುದು ಸೂಕ್ತ ಎಂಬುದು ತಜ್ಞರ ಸಲಹೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಗ್ಯಾಜೆಟ್‌ಗಳು

Latest Videos
Recommended Stories
Recommended image1
ಕಿವಿಯೊಳಗೇ ಸಿಡಿದ ಜೆಬಿಎಲ್ ಇಯರ್ ಬಡ್: ಎಂಬಿಬಿಎಸ್ ವಿದ್ಯಾರ್ಥಿನಿಗೆ ಗಂಭೀರ ಗಾಯ
Recommended image2
ಯೂಟ್ಯೂಬ್ ನಂತೆ WhatsApp ನಲ್ಲೂ ಸಾವಿರಾರು ರೂ. ಅರ್ನ್ ಮಾಡಲು ಬರ್ತಿದೆ ಹೊಸ ಫೀಚರ್‌
Recommended image3
ಹಳೆಯ ಸ್ಮಾರ್ಟ್ ಟಿವಿಗಳಲ್ಲಿ ನೆಟ್‌ಫ್ಲಿಕ್ಸ್ ಇನ್ಮುಂದೆ ಬರಲ್ಲ; ಯಾವುದೇ ಮುನ್ಸೂಚನೆ ಇಲ್ಲದೆ ಶಾಕ್ ನೀಡಿದ ಸ್ಟ್ರೀಮಿಂಗ್ ದೈತ್ಯ!
Related Stories
Recommended image1
ಕಿವಿಯೊಳಗೇ ಸಿಡಿದ ಜೆಬಿಎಲ್ ಇಯರ್ ಬಡ್: ಎಂಬಿಬಿಎಸ್ ವಿದ್ಯಾರ್ಥಿನಿಗೆ ಗಂಭೀರ ಗಾಯ
Recommended image2
ಯೂಟ್ಯೂಬ್ ನಂತೆ WhatsApp ನಲ್ಲೂ ಸಾವಿರಾರು ರೂ. ಅರ್ನ್ ಮಾಡಲು ಬರ್ತಿದೆ ಹೊಸ ಫೀಚರ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved