ಯಾವತ್ತಾದ್ರೂ ಹಳದಿ ಕಲ್ಲಂಗಡಿ ಹಣ್ಣು ತಿಂದು ನೋಡಿದ್ರಾ?
ಬೇಸಿಗೆಯ ದಿನಗಳಲ್ಲಿ ಕಲ್ಲಂಗಡಿ (watermelon) ರಾಶಿ, ರಾಶಿಯಾಗಿ ಮಾರಾಟ ಮಾಡ್ತಾರೆ. ಸುಡು ಬೇಸಿಗೆಯಲ್ಲಿ ಹೆಚ್ಚಿನ ಜನ ಇದನ್ನು ತಿನ್ನೋದನ್ನು ಸಹ ಇಷ್ಟಪಡ್ತಾರೆ. ಈ ಕಲ್ಲಂಗಡಿ ಹಣ್ಣು ಸುಮಾರು 90% ನೀರಿನಿಂದ ಸಮೃದ್ಧವಾಗಿದ್ದು, ನಮಗೆ ಶಾಖದಲ್ಲಿ ಹೈಡ್ರೇಟ್ ಆಗಿರುವುದರ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಕಲ್ಲಂಗಡಿ ಎಂದ ಕೂಡ್ಲೇ ನೆನಪಾಗೋದು ಕೆಂಪು ಬಣ್ಣದ ಹಣ್ಣು, ಆದರೆ ನೀವು ಎಂದಾದರೂ ಕೆಂಪು ಜೊತೆಗೆ ಹಳದಿ ಕಲ್ಲಂಗಡಿಯನ್ನು ತಿಂದಿದ್ದೀರಾ?
ಹಳದಿ ಕಲ್ಲಂಗಡಿ ಹಣ್ಣಿನ ಬೇಡಿಕೆಯು ಕೆಲವು ಸಮಯದಿಂದ ತುಂಬಾ ಹೆಚ್ಚಾಗಿದೆ ಅನ್ನೋದು ನಿಮಗೆ ಗೊತ್ತಾ?. ಹಳದಿ ಕಲ್ಲಂಗಡಿ (yellow water melon) ಹಣ್ಣು ರುಚಿಯ ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿದೆ ಮತ್ತು ರೈತರು ಇದರಿಂದ ಹೆಚ್ಚಿನ ಲಾಭವನ್ನು ಸಹ ಪಡೆಯುತ್ತಾರೆ. ಆದ್ದರಿಂದ ಹಳದಿ ಕಲ್ಲಂಗಡಿಯ ಬಗ್ಗೆ ಮತ್ತು ಅದು ಕೆಂಪು ಕಲ್ಲಂಗಡಿಗಿಂತ ಹೇಗೆ ಭಿನ್ನವಾಗಿದೆ ಎಂಬುದರ ಬಗ್ಗೆ ಇಂದು ನಿಮಗೆ ಹೇಳ್ತೀವಿ ಕೇಳಿ…
ಹಳದಿ ಕಲ್ಲಂಗಡಿಯನ್ನು ಎಲ್ಲಿ ಕಂಡು ಹಿಡಿಯಲಾಯಿತು?
ಸಾವಿರಾರು ವರ್ಷಗಳ ಹಿಂದೆ ಹಳದಿ ಕಲ್ಲಂಗಡಿಯನ್ನು ಮೊದಲ ಬಾರಿಗೆ ಆಫ್ರಿಕಾದಲ್ಲಿ ಬೆಳೆಯಲಾಗುತ್ತಿತ್ತು, ಮತ್ತು ಈ ಹಣ್ಣನ್ನು ನ್ಯಾಚುರಲ್ ಕ್ರಾಸ್ ಬ್ರೀಡಿಂಗ್ (natural cross breeding) ಮೂಲಕ ಬೆಳೆಯಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಆದರೆ, ಇದನ್ನು ಈಗ ಅನೇಕ ಸ್ಥಳಗಳಲ್ಲಿ ಬೆಳೆಯಲಾಗುತ್ತಿದೆ. ಭಾರತದಲ್ಲೂ ಸಹ, ಇದನ್ನು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಕೆಲವು ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ವೈಜ್ಞಾನಿಕವಾಗಿ, ಹಳದಿ ಕಲ್ಲಂಗಡಿಯನ್ನು ಸಿಟ್ರುಲಸ್ ಲಾನಾಟಸ್ ಎಂದು ಕರೆಯಲಾಗುತ್ತದೆ ಮತ್ತು ಇದು ಕುಕುರ್ಬಿಟೇಸಿ ಕುಟುಂಬಕ್ಕೆ ಸೇರಿದೆ, ಇದು ಸೋರೆಕಾಯಿ ಮತ್ತು ಕುಂಬಳಕಾಯಿ ಮತ್ತು ಸ್ಕ್ವಾಷ್ ನಂತಹ ತರಕಾರಿಗಳು ಮತ್ತು ಹಣ್ಣುಗಳ ರೂಪವನ್ನು ಒಳಗೊಂಡಿದೆ.
ಹಳದಿ ಕಲ್ಲಂಗಡಿ ಬೆಲೆ
ಹಳದಿ ಕಲ್ಲಂಗಡಿ ಕೆಂಪು ಕಲ್ಲಂಗಡಿಗಿಂತ ಮೂರು ಪಟ್ಟು ಹೆಚ್ಚು ದುಬಾರಿಯಾಗಿದೆ. ಸಾಮಾನ್ಯವಾಗಿ ಕೆಂಪು ಕಲ್ಲಂಗಡಿ ಹಣ್ಣಿನ ಬೆಲೆ ಕೆ.ಜಿ.ಗೆ 15-20 ರೂಪಾಯಿ. ಅದೇ ಸಮಯದಲ್ಲಿ, ಹಳದಿ ಕಲ್ಲಂಗಡಿ ಹಣ್ಣಿನ ಬೆಲೆ ಕೆ.ಜಿ.ಗೆ 45-50 ರೂಪಾಯಿಗಳು. ಅಂದರೆ ಇದು ತುಂಬಾನೆ ದುಬಾರಿಯಾಗಿದೆ.
ಕೆಂಪು ಮತ್ತು ಹಳದಿ ಕಲ್ಲಂಗಡಿ ಹಣ್ಣಿನ ನಡುವಿನ ವ್ಯತ್ಯಾಸ
ಬಣ್ಣದ ವ್ಯತ್ಯಾಸದ ಜೊತೆಗೆ, ಹಳದಿ ಮತ್ತು ಕೆಂಪು ಕಲ್ಲಂಗಡಿ ಹಣ್ಣಿನ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಹಳದಿ ಕಲ್ಲಂಗಡಿ ಹಣ್ಣಿನ ರುಚಿಯು ಸಾಮಾನ್ಯವಾಗಿ ಕೆಂಪು ಕಲ್ಲಂಗಡಿಗಿಂತ ಸ್ವಲ್ಪ ಸಿಹಿಯಾಗಿರುತ್ತದೆ.ಹಳದಿ ಕಲ್ಲಂಗಡಿ ಹಣ್ಣು ಬಾಯಿ ಚಪ್ಪರಿಸಿ ತಿನ್ನೋವಷ್ಟು ಇಷ್ಟವಾಗುತ್ತೆ.
ಹಳದಿ ಕಲ್ಲಂಗಡಿ ಹಣ್ಣಿನ ಪ್ರಯೋಜನಗಳು
ಹಳದಿ ಬಣ್ಣದ ಕಲ್ಲಂಗಡಿಯಲ್ಲಿ ಪೊಟ್ಯಾಸಿಯಮ್ ಸೇರಿದಂತೆ ಕೆಲವು ಖನಿಜಗಳಿವೆ, ಇದು ದೇಹದಲ್ಲಿನ ಲಿಕ್ವಿಡ್ ಲೆವೆಲ್ ನ್ನು (liquid level) ನಿಯಂತ್ರಿಸಲು ಸಹಾಯ ಮಾಡುತ್ತೆ ಮತ್ತು ದೇಹದಲ್ಲಿ ಮೆಗ್ನೀಸಿಯಮ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತೆ, ಅಷ್ಟೇ ಅಲ್ಲ ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ.
ಪೋಷಕಾಂಶಗಳಲ್ಲಿನ ವ್ಯತ್ಯಾಸಗಳು
ಪೌಷ್ಠಿಕಾಂಶದ ಪ್ರಕಾರ, ಎರಡೂ ಕಲ್ಲಂಗಡಿಗಳು ಹೆಚ್ಚಿನ ಪ್ರಮಾಣದ ವಿಟಮಿನ್ ಎ (vitamin A) ಮತ್ತು ಸಿಯನ್ನು ಹೊಂದಿರುವುದು ಕಂಡುಬಂದಿದೆ. ಹಳದಿ ಕಲ್ಲಂಗಡಿಗಳಲ್ಲಿ ಲೈಕೋಪೀನ್ ಕೊರತೆಯಿದ್ದರೂ, ಅವು ಬೀಟಾ-ಕ್ಯಾರೋಟಿನ್ ನಿಂದ ಸಮೃದ್ಧವಾಗಿವೆ. ಇದು ಶಕ್ತಿಯುತ ಆಂಟಿ ಆಕ್ಸಿಡೆಂಟ್ ನ್ನು ಹೊಂದಿದ್ದು, ನಿಮ್ಮನ್ನು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.
ತೂಕ ಇಳಿಸಿಕೊಳ್ಳಲು ಸಹಾಯಕ
ಹಳದಿ ಕಲ್ಲಂಗಡಿಯು ತೂಕ ಇಳಿಸಿಕೊಳ್ಳಲು (weight loss) ಸಹಾಯ ಮಾಡುತ್ತದೆ, ಏಕೆಂದರೆ ಇದು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತದೆ, ಇದು ತೂಕ ಸುಲಭವಾಗಿ ಇಳಿಯಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಕಡಿಮೆ ಕ್ಯಾಲರಿಯನ್ನು ಸಹ ಹೊಂದಿರೋದ್ರಿಂದ ಸೇವಿಸಿದ್ರೆ ದಪ್ಪ ಆಗೋ ಚಿಂತೆ ಸಹ ಇರೋದಿಲ್ಲ.
ಜೀರ್ಣಕ್ರಿಯೆಗೆ ಪ್ರಯೋಜನಕಾರಿ
ಹಳದಿ ಕಲ್ಲಂಗಡಿ ಗ್ಯಾಸ್, ಅಜೀರ್ಣ, ವಾಂತಿ, ಹೊಟ್ಟೆ ನೋವು ಮತ್ತು ಅಸಿಡಿಟಿಯಂತಹ (Acidity) ಸಮಸ್ಯೆಗಳನ್ನು ಶೀಘ್ರವೇ ತೆಗೆದು ಹಾಕಿ, ಉತ್ತಮ ಆರೋಗ್ಯ ನೀಡಲು ಸಹಕಾರಿಯಾಗಿದೆ. ಇದನ್ನು ತಿನ್ನೋದ್ರಿಂದ ಹೊಟ್ಟೆಯ ಹೀಟ್ ಶಾಂತಗೊಳಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಗುಣಪಡಿಸುತ್ತದೆ.