ಸೋಯಾ ಹಾಲು ಅಥವಾ ಬಾದಾಮಿ ಹಾಲು: ಆರೋಗ್ಯಕ್ಕೆ ಯಾವುದು ಬೆಸ್ಟ್..?

First Published Feb 4, 2021, 4:28 PM IST

ಜನರು ಹಸುವಿನ ಹಾಲಿನ ಬದಲಿಗೆ ಬಾದಾಮಿ ಮತ್ತು ಸೋಯಾಗಳಂತಹ ಉತ್ತಮ ಪರ್ಯಾಯವಾಗಿ ಬಳಸಲು ಪ್ರಾರಂಭಿಸಿದ್ದಾರೆ. ಭಾರತೀಯ ಮನೆಯಲ್ಲಿ ಬಳಸುವ ಹಸುವಿನ ಹಾಲು ಅತ್ಯಂತ ಜನಪ್ರಿಯವಾದ ಹಾಲುಗಳಲ್ಲಿ ಒಂದಾಗಿದೆ. ಆದರೆ ಪ್ರತಿಯೊಬ್ಬರೂ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವು ಜನರು ಲ್ಯಾಕ್ಟೋಸ್ ಅಸಹಿಷ್ಣುತೆ ಅಥವಾ ಅಲರ್ಜಿ ಹೊಂದಿರುತ್ತಾರೆ. ಇತರರು ಸಸ್ಯಾಹಾರಿ ಆಹಾರ ಅಥವಾ ಜೀವನಶೈಲಿಯನ್ನು ಆರಿಸಿಕೊಳ್ಳಲು ಬಯಸುತ್ತಾರೆ. ಆದುದರಿಂದ ಹಸುವಿನ ಹಾಲು ಸೇವಿಸುವುದಿಲ್ಲ.