ಫ್ರಿಡ್ಜಲ್ಲಿ ನಿಂಬೆ ಹಣ್ಣನ್ನು ಇಡಬಹುದಾ, ಡೌಟಿಗಿಲ್ಲಿದೆ ಉತ್ತರ
ಫ್ರಿಜ್ ದೀರ್ಘಕಾಲದವರೆಗೆ ಆಹಾರಗಳನ್ನು ಸಂಗ್ರಹಿಸಲು ಉತ್ತಮ ಮಾರ್ಗ. ಆದರೆ ಎಲ್ಲವನ್ನೂ ರೆಫ್ರಿಜರೇಟರ್ನಲ್ಲಿ ಇಡುತ್ತಾರೆ. ಅದನ್ನು ಹಲವು ದಿನಗಳವರೆಗೆ ತಾಜಾವಾಗಿಡಬಹುದೆಂದು ಕೊಳ್ಳುತ್ತಾರೆ. ರೆಫ್ರಿಜರೇಟರ್‌ನಲ್ಲಿ ಇಡಬಾರದ ವಸ್ತುಗಳನ್ನು ಸಹ ತಿಳಿದೋ, ತಿಳಿಯದೆಯೋ ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಡುತ್ತಾರೆ. ಆಗಾಗ್ಗೆ ಜನರು ನಿಂಬೆಯನ್ನು ಒಟ್ಟಿಗೆ ಖರೀದಿಸುತ್ತಾರೆ ಮತ್ತು ಅದನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ರೆಫ್ರಿಜರೇಟರ್‌ನಲ್ಲಿ ಇಡುತ್ತಾರೆ. ಆದರೆ ರೆಫ್ರಿಜರೇಟರ್‌ನಲ್ಲಿ ನಿಂಬೆಹಣ್ಣನ್ನು ಇಡಬಹುದಾ? ನಿಂಬೆಯನ್ನು ತಾಜಾವಾಗಿಡುವುದು ಹೇಗೆ?
ಮೊದಲಿಗೆ, ನಿಂಬೆಹಣ್ಣನ್ನು ಎಂದಿಗೂ ರೆಫ್ರಿಜರೇಟರ್ನಲ್ಲಿ ಇಡಬಾರದು. ಹೀಗೆ ಮಾಡುವುದರಿಂದ, ಅದು ಗಟ್ಟಿಯಾಗುತ್ತದೆ. ತಾಜಾ ನಿಂಬೆ ಹಣ್ಣು ಬೇಕೆಂದರೆ ಅದನ್ನು ಫ್ರಿಜ್ನಲ್ಲಿ ಇಡೋದನ್ನು ತಪ್ಪಿಸಿ.
ನಿಂಬೆ ಸೇರಿ ಸಿಟ್ರಿಕ್ ಆಮ್ಲವಿರುವ ಹಣ್ಣುಗಳು ಕಡಿಮೆ ತಾಪಮಾನಕ್ಕೆ ಹೊಂದಿಕೊಳ್ಳುವುದಿಲ್ಲ. ಅವುಗಳ ಸಿಪ್ಪೆಗಳು ಕಲೆಯಾಗಲು ಪ್ರಾರಂಭಿಸುತ್ತವೆ ಮತ್ತು ರುಚಿಯಿಲ್ಲದಂತಾಗುತ್ತದೆ. ಅದೇ ಸಮಯದಲ್ಲಿ, ಅವುಗಳ ರಸವು ಕಡಿಮೆಯಾಗುತ್ತದೆ.
ಇನ್ನು ಫ್ರಿಡ್ಜ್‌ನಲ್ಲಿ ನಿಂಬೆಯನ್ನು ಇಡಲು ಬಯಸಿದರೆ, ಅದನ್ನು ಪ್ಲಾಸ್ಟಿಕ್ ಚೀಲ ಅಥವಾ ಕಾಗದದ ಚೀಲದಲ್ಲಿ ಸಂಗ್ರಹಿಸಬಹುದು. ಬೆಸ್ಟ್ ಅಂದರೆ ಗಟ್ಟಿ ಮುಚ್ಚಲ ಇರುವೆ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿಡುವುದು.
ವರ್ಷವಿಡೀ ನಿಂಬೆಯನ್ನು ಸಂಗ್ರಹಿಸಲು, ನಿಂಬೆ ರಸವನ್ನು ಐಸ್ ಟ್ರೇನಲ್ಲಿ ಸಂಗ್ರಹಿಸಿ, ನಂತರ ಅದರ ಘನಾಕೃತಿಗಳನ್ನು ಫ್ರೀಜರ್ ನಲ್ಲಿ ಸಂಗ್ರಹಿಸಿ. ಈ ಮೂಲಕ ವರ್ಷವಿಡೀ ಇದನ್ನು ಬಳಸಬಹುದು.
ಬೇಸಿಗೆಯಲ್ಲಿ ಮತ್ತೆ ಮತ್ತೆ ನಿಂಬೆ ಪಾನಕ ಕುಡಿಯಬೇಕೆಂದು ಅನಿಸಿದರೆ ಮತ್ತು ತಯಾರಿಸಲು ಸೋಮಾರಿಯಾಗಿದ್ದರೆ, ಈ ರೆಸಿಪಿ ಟ್ರೈ ಮಾಡಬಹುದು.
1 ಕಪ್ ನಿಂಬೆ ರಸವನ್ನು 3 ಕಪ್ ಸಕ್ಕರೆಯೊಂದಿಗೆ ಸೇರಿಸಿ. ಮತ್ತು ಹಲವು ದಿನಗಳವರೆಗೆ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಬಹುದು ಮತ್ತು ನಿಮಗೆ ಅನಿಸಿದಾಗ ಈ ರಸ, ನೀರು ಮತ್ತು ಐಸ್ ಅನ್ನು 1-2 ಟೀ ಚಮಚ ಸೇರಿಸುವ ಮೂಲಕ ತಣ್ಣೀರಿನ ನೀರನ್ನು ಆನಂದಿಸಬಹುದು.
ನಿಂಬೆಹಣ್ಣನ್ನು ಸಂಗ್ರಹಿಸಲು, ಸ್ವಲ್ಪ ಸಾಸಿವೆ ಅಥವಾ ಸಂಸ್ಕರಿಸಿದ ಎಣ್ಣೆಯನ್ನು ಸೇರಿಸಿ ಮತ್ತು ಒಂದು ಪಾತ್ರೆಯಲ್ಲಿ ಹಾಕಿ, ಇದರಿಂದ ಅವು ಹಾಳಾಗುವುದಿಲ್ಲ.
ಲಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಅಂತೆಯೇ ತೂಕ ಇಳಿಸಲು ನೆರವಾಗುತ್ತದೆ.