ಈ ಸಸ್ಯಾಹಾರಗಳಲ್ಲಿ ಮೊಟ್ಟೆಗಿಂತ ಹೆಚ್ಚಿನ ಪ್ರೋಟೀನ್ ಇದೆ!!
ದೇಹಕ್ಕೆ ಪ್ರೋಟೀನ್ನಿಂದ ಶಕ್ತಿ ಸಿಗುತ್ತದೆ. ಪ್ರೋಟೀನ್ ಎಂಬುದು ಆಮ್ಲಜನಕ, ಜಲಜನಕ ಮತ್ತು ಸಾರಜನಕದಿಂದ ತಯಾರಿಸಲ್ಪಿರುವ ಒಂದು ಧಾತು, ಇದು ದೇಹವನ್ನು ರೋಗಗಳಿಂದ ರಕ್ಷಿಸುವ ಕೆಲಸ ಮಾಡುತ್ತದೆ. ಪ್ರೋಟೀನ್ ದೇಹವನ್ನು ಒಳಗಿನಿಂದ, ಹೊರಗಿನಿಂದ ಬಲಗೊಳಿಸುತ್ತದೆ. ಪ್ರೊಟೀನ್ ದೇಹದ ಬೆಳವಣಿಗೆಗೆ ಸಹಕಾರಿ. ಅದೇ ಸಮಯದಲ್ಲಿ, ದೇಹದ ಮಾಂಸವನ್ನು ತಯಾರಿಸಲು ಪ್ರೋಟೀನ್‌ಗಳು ಬಹಳ ಮುಖ್ಯ.
ಮೊಟ್ಟೆಗಳು ತುಂಬಾ ಆರೋಗ್ಯಕಾರಿ ಎಂದು ಎಲ್ಲರಿಗೂ ಗೊತ್ತು. ಅಷ್ಟೇ ಅಲ್ಲ- ಇವು ಉತ್ತಮ ಗುಣಮಟ್ಟದ ಪ್ರೋಟೀನ್‌ನ ಒಂದು ದೊಡ್ಡ ಮೂಲವೂ ಹೌದು. ಮೂಳೆಗಳು ಮತ್ತು ಸ್ನಾಯುಗಳನ್ನು ಬೆಳೆಸಲು ಸಾಕಷ್ಟು ಪ್ರೋಟೀನ್ ಅನ್ನು ಪಡೆಯುವುದು ತುಂಬಾ ಮುಖ್ಯ, ಜೊತೆಗೆ ಒಟ್ಟಾರೆ ಆರೋಗ್ಯವನ್ನು ಉತ್ತಮವಾಗಿ ರಚಿಸುತ್ತದೆ.
ಮೊಟ್ಟೆಯಲ್ಲಿ ಎಷ್ಟು ಪ್ರೊಟೀನ್ ಇದೆ ನೋಡಿ...
ಸಣ್ಣ ಮೊಟ್ಟೆ (38 ಗ್ರಾಂ): 4.9 ಗ್ರಾಂ ಪ್ರೋಟೀನ್
ಮಧ್ಯಮ ಮೊಟ್ಟೆ (44 ಗ್ರಾಂ): 5.7 ಗ್ರಾಂ ಪ್ರೋಟೀನ್
ದೊಡ್ಡ ಮೊಟ್ಟೆ (50 ಗ್ರಾಂ): 6.5 ಗ್ರಾಂ ಪ್ರೋಟೀನ್
ಹೆಚ್ಚುವರಿ-ದೊಡ್ಡ ಮೊಟ್ಟೆ (56 ಗ್ರಾಂ): 7.3 ಗ್ರಾಂ ಪ್ರೋಟೀನ್
ಜಂಬೋ ಮೊಟ್ಟೆ (63 ಗ್ರಾಂ): 8.2 ಗ್ರಾಂ ಪ್ರೋಟೀನ್
ಆದರೆ ಇಷ್ಟೇ ಪ್ರೊಟೀನ್ ಸಸ್ಯಹಾರದಿಂದಲೂ ಪಡೆಯಬಹುದು. ಅದಕ್ಕಾಗಿ ಯಾವೆಲ್ಲಾ ಆಹಾರ ಸೇವಿಸಬೇಕು ನೋಡೋಣ..
ಪೀನಟ್ ಬಟರ್
ಪೀನಟ್ ಬಟರ್‌ನಲ್ಲಿ ಹೆಚ್ಚಿನ ಪ್ರೋಟೀನ್ ಅಂಶವಿದೆ. ಪೀನಟ್ ಬಟರ್‌ನಲ್ಲಿ ವಿಟಮಿನ್ ಬಿ-6, ಪೊಟಾಶಿಯಂ, ಫೈಬರ್, ಮೆಗ್ನೀಶಿಯಂ ಹೇರಳವಾಗಿದೆ.
ಪೀನಟ್ ಬಟರ್ ಯಾವುದೇ ರೀತಿಯಲ್ಲಿ ಹಾನಿ ಮಾಡುವುದಿಲ್ಲ. ಇದನ್ನು ನಿಯಮಿತವಾಗಿ ಸೇವಿಸಿದರೆ ದೇಹವು ಪ್ರೋಟೀನ್ ಮತ್ತು ಇನ್ನೂ ಹೆಚ್ಚಿನ ಪೋಷಕಾಂಶಗಳ ಕೊರತೆಯನ್ನು ಪೂರೈಸುತ್ತದೆ.
ಕುಂಬಳಕಾಯಿ ಬೀಜಗಳು
ಕುಂಬಳಕಾಯಿ ಬೀಜಗಳು ಇದು ಸುಲಭವಾಗಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇಲ್ಲವಾದರೆ ಮನೆಯಲ್ಲಿಯೇ ಇದನ್ನು ಪಡೆಯಬಹುದು.
ಕುಂಬಳಕಾಯಿ ಬೀಜಗಳಲ್ಲಿ ಕಬ್ಬಿಣ, ಸತು, ತಾಮ್ರ, ಪೊಟ್ಯಾಶಿಯಂ, ಸೆಲೆನಿಯಂ ಮತ್ತು ಮೆಗ್ನೀಶಿಯಂ ಇದೆ. ಇದು ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ.
ಬಿಳಿ ಕಡಲೆ
ಒಂದು ಮೊಟ್ಟೆಯಲ್ಲಿ ಸುಮಾರು 6 ಗ್ರಾಂ ಪ್ರೋಟೀನ್ ಇರುತ್ತದೆ. ಅದೇ ರೀತಿ ಬಿಳಿ ಕಡಲೆಯಲ್ಲಿಯೂ ಪ್ರೋಟೀನ್ ಉತ್ತಮ ಪ್ರಮಾಣದಲ್ಲಿದೆ. ಇದನ್ನು ಚೋಲೆ ಎಂದು ಕೂಡ ಕರೆಯುತ್ತೇವೆ.
ಅರ್ಧ ಕಪ್ ಬಿಳಿ ಕಡಲೆಯಲ್ಲಿ ಸುಮಾರು 8 ಗ್ರಾಂ ಪ್ರೋಟೀನ್ ಇದೆ. ಸಲಾಡ್ ಗಳನ್ನು ತಯಾರಿಸುವುದು ಅಥವಾ ಬೇರೆ ಏನಾದರೂ ಮಾಡುವ ಮೂಲಕ ರುಚಿಯನ್ನು ಹೆಚ್ಚಿಸಲು ಬಯಸುವುದಾದರೆ ಬಿಳಿ ಕಡಲೆ ಬಳಕೆ ಮಾಡಿ.