ಕಾಶಿಯಲ್ಲಿ ಗೋಲ್ಗಪ್ಪ ತಿನ್ನುತ್ತಿರುವ ಕೇಂದ್ರ ಸಚಿವೆಯ ಫೋಟೋ ವೈರಲ್‌!

First Published Mar 2, 2021, 4:02 PM IST

ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾರಣಾಸಿಗೆ ಭೇಟಿ ನೀಡಿದ್ದರು. ಬಿಜೆಪಿ ಸಭೆ ನಂತರ ಅವರು ತಮ್ಮ ನೆಚ್ಚಿನ ಚಾಟ್ ಅಂಗಡಿಗೆ ಭೇಟಿ ಕೊಟ್ಟು ಗೋಲ್ಗಪ್ಪಾ ತಿಂದರು. ಅವರನ್ನು ನೋಡಲು ಜನರ ಗುಂಪೇ ಸೇರಿತ್ತು. ಈ ಸಂದರ್ಭದಲ್ಲಿ ಅನೇಕರು ಸಚಿವೆ ಸ್ಮೃತಿ ಇರಾನಿ ಅವರೊಂದಿಗೆ ಸೆಲ್ಫಿ ಸಹ ತೆಗೆದುಕೊಂಡರು. ತಮ್ಮ ಒಂದು ದಿನದ ಭೇಟಿಯ ಸಂದರ್ಭದಲ್ಲಿ ಅವರು  ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು. ಸ್ಮೃತಿ ಇರಾನಿ ಅವರ ಈ ಫೋಟೋಗಳು ವೈರಲ್‌ ಆಗಿವೆ.