ನೋಡ್ರಿ ನೋಡ್ರಿ..ದುಡ್ಡು ಉಳಿಸೋಕೆ ನಿಮ್ಮ ಮನೆ ಬಾಲ್ಕಾನಿಯಲ್ಲಿ ಈ ತರಕಾರಿ ಬೆಳೆಯಬಹುದು!
ಮನೆಯಲ್ಲಿ ಸುಲಭವಾಗಿ ಬೆಳೆಯಬಹುದು ಈ ತರಕಾರಿಗಳನ್ನು...ದುಡ್ಡು ಉಳಿತಾಯ ಮಾರ್ಗ ಸುಲಭ.....

ದಿನದಿಂದ ದಿನಕ್ಕೆ ತರಕಾರಿ ಬೆಲೆ ಗಗನ ಮುಟ್ಟುತ್ತಿದೆ ಹೀಗಾಗಿ ಯಾರಪ್ಪಾ ಖರೀದಿ ಮಾಡುವುದು ಕಡಿಮೆ ಬೆಲೆ ಇರೋದನ್ನೇ ಮಾಡೋಣ ಅನ್ನೋ ಮನಸ್ಥಿತಿಯಲ್ಲಿದ್ದಾರೆ ಹಲವರು. ಹೀಗಾಗಿ ಮನೆಯಲ್ಲಿ ಸುಲಭವಾಗಿ ಈ ತರಕಾರಿಗಳನ್ನು ಬೆಳೆಯಬಹುದು.
ದೊಣ್ಣೆ ಮೆಣಸಿನ ಕಾಯಿ
ದೊಡ್ಣೆ ಮೆಣಸಿಕನ ಕಾಯಿ (ಕ್ಯಾಪ್ಸಿಕಮ್) ಕಟ್ ಮಾಡಿದಾಗ ಬೀಜಗಳನ್ನು ಎತ್ತಿ ಸ್ವಲ್ಪ ಒಣಗಿಸಿ ಆನಂತರ ಪಾಟ್‌ಗೆ ಹಾಕಬೇಕು. ಇಲ್ಲಿ ಚಿಗುರೊಡೆದಾಗ ಮಿತವಾಗಿ ನೀರು ಹಾಕಬೇಕು ಇಲ್ಲವಾದರೆ ಹಾಳಾಗುತ್ತದೆ.
ಮೂಲಂಗಿ
ಮೂಲಂಗಿ ಬೆಳೆಸುವ ಪಾಟ್‌ಗೆ ಸ್ವಲ್ಪ ಸ್ವಲ್ಪವೇ ನೀರು ಹಾಕಬೇಕು. ಮೂಲಂಗಿ ಬೆಳೆಸುವುದಕ್ಕೆ 10 ಇಂಚು ಅಥವಾ 6 ಇಂಚು ಆಲ ಇರುವ ಪಾಟ್ ತೆಗೆದುಕೊಳ್ಳಬೇಕು. ಇದಕ್ಕೆ ಒಳ್ಳೆಯ ಗೊಬ್ಬರ ಮಿಶ್ರಣ ಹಾಕಬೇಕು.
ಬಟಾಣಿ
ಬಟಾಣಿ ಬೆಲೆ ಹೆಚ್ಚಾಗುತ್ತಿದ್ದಂತೆ ಅದರ ಸೈಜ್ ಚಿಕ್ಕದಾಗುತ್ತಿದೆ. ಬಟಾಣಿ ಗಿಡಕ್ಕೆ ಖಡ್ಡಾವಗಿ 10 ಇಂಚು ಆಳವಾದ ಪಾಟ್ ಬೇಕೇ ಬೇಕು. ಬಟಾಣಿ ಗಿಡಕ್ಕೆ ಕೇವಲ 4 ರಿಂದ 5 ಗಂಟೆ ಬಿಸಿಲು ಇದ್ದರೆ ಸಾಕು.
ಸ್ಪ್ರಿಂಗ್ ಅನಿಯನ್
ಅಡುಗೆ ರುಚಿ ಹೆಚ್ಚಾಗಬೇಕು ಅಂದ್ರೆ ಸ್ಪ್ರಿಂಗ್ ಆನಿಯನ್ ಇರಲೇ ಬೇಕು. ಲುಕ್ ಮತ್ತು ರುಚಿ ಎರಡೂ ನೀಡುತ್ತದೆ. ಇದನ್ನು ಬೀಜ ಅಥವಾ ಗೆಡ್ಡೆಗಳ ಮೂಲಕ ಬೆಳೆಯಬಹುದು ಎನ್ನಲಾಗಿದೆ. ಆದರೆ ಪ್ರತಿ ದಿನ 6 ಗಂಟೆ ಆದರೂ ಸೂರ್ಯ ಬೆಳಕು ಬೇಕು.
ಬೆಂಡೆಕಾಯಿ
ಮನೆಯ ಬಾಲ್ಕಾನಿಯಲ್ಲಿ ಒಂದು ಪಾಟ್ ಇಟ್ಟು ಅದಕ್ಕೆ 3 ಇಂಚುಗಳಷ್ಟು ಕೆಳಗೆ ಬೀಜಗಳನ್ನು ಹಾಕಿ. ಅನಂತರ ನೀರು ಹಾಕಿ ಸ್ವಲ್ಪ ಬಿಸಿಲಿನಲ್ಲಿ ಇಡಬೇಕು. ಆದರೆ ಬೆಂಡೆಕಾಯಿ ಸಸ್ಯವು ಒಣಗದಂತೆ ನೋಡಿಕೊಳ್ಳಬೇಕು.