- Home
- Life
- Food
- ಮಾರ್ಕೆಟ್‌ನಲ್ಲಿ ಫ್ರೆಶ್ ಮೀನು ಯಾವುದು, ಕೊಳೆತ ಮೀನು ಯಾವುದು ಗುರುತಿಸೋದು ಹೇಗೆ ಗೊತ್ತಾ? ಇಲ್ಲಿವೆ ಸಿಂಪಲ್ ಟಿಪ್ಸ್!
ಮಾರ್ಕೆಟ್‌ನಲ್ಲಿ ಫ್ರೆಶ್ ಮೀನು ಯಾವುದು, ಕೊಳೆತ ಮೀನು ಯಾವುದು ಗುರುತಿಸೋದು ಹೇಗೆ ಗೊತ್ತಾ? ಇಲ್ಲಿವೆ ಸಿಂಪಲ್ ಟಿಪ್ಸ್!
ಮಾರ್ಕೆಟ್‌ಗೆ ಹೋದಾಗ ಒಳ್ಳೆಯ ಮೀನನ್ನು ನೋಡಿ ಖರೀದಿಸುವುದಕ್ಕೆ ಏನೇನು ವಿಷಯಗಳನ್ನು ಗಮನಿಸಬೇಕು ಎಂಬುದನ್ನು ಇಲ್ಲಿ ನೋಡಬಹುದು.

ಕೆಟ್ಟ ಮೀನು ಹೀಗಿರುತ್ತೆ, ಒಳ್ಳೆ ಮೀನು ಗುರುತಿಸಲು 7 ಸಲಹೆಗ7ಳು!
ಮೀನುಗಳು ಆರೋಗ್ಯಕ್ಕೆ ಒಳ್ಳೆಯದು. ಪ್ರೋಟೀನ್‍ಗೆ ಹೆಸರುವಾಸಿ. ಮೀನು ತಿನ್ನುವುದು ಕಣ್ಣಿನಿಂದ ಹೃದಯದವರೆಗೆ ಹಲವು ಅಂಗಗಳಿಗೆ ಒಳ್ಳೆಯದು. ಆದರೆ ಈಗೀಗ ಮೀನುಗಳಲ್ಲಿ ರಾಸಾಯನಿಕ ಹಚ್ಚಿ ಮಾರುವುದು, ಹಲವು ದಿನಗಳ ಕಾಲ ಐಸ್‍ನಲ್ಲಿಟ್ಟು ಕೆಟ್ಟ ಮೀನನ್ನು ಮಾರುವುದು ಹೀಗೆ ವಂಚನೆಗಳು ನಡೆಯುತ್ತಿವೆ. ಒಳ್ಳೆಯ ಮೀನುಗಳು ಒಳ್ಳೆಯದನ್ನು ಮಾಡುವಂತೆಯೇ ಕೆಟ್ಟ ಮೀನುಗಳು, ರಾಸಾಯನಿಕ ಬೆರೆಸಿದ ಮೀನುಗಳು ದೇಹಕ್ಕೆ ಹಾನಿ ಮಾಡುತ್ತವೆ. ಈ ಪೋಸ್ಟ್‍ನಲ್ಲಿ ಕೆಟ್ಟ ಮೀನುಗಳನ್ನು ಗುರುತಿಸುವುದು ಹೇಗೆಂದು ನೋಡೋಣ.
ರಾಸಾಯನಿಕ ಬಳಿದ ಮೀನುಗಳು:
ಕೆಲವು ಕಡೆಗಳಲ್ಲಿ ಮೀನುಗಳು ಕೆಡದಂತೆ ತಾಜಾವಾಗಿ ಕಾಣಲು ಫಾರ್ಮಾಲಿನ್ ಎಂಬ ರಾಸಾಯನಿಕವನ್ನು ಹಚ್ಚುತ್ತಾರಂತೆ. 2020ರಲ್ಲಿ ನಡೆದ ಸಮೀಕ್ಷೆಯೊಂದರಲ್ಲಿ ಇಂತಹ ಮೀನುಗಳು ಪತ್ತೆಯಾಗಿವೆಯಂತೆ. ಈ ರಾಸಾಯನಿಕವನ್ನು ಶವಗಳನ್ನು ಕೆಡದಂತೆ ಇಡಲು ಶವಾಗಾರದಲ್ಲಿ ಬಳಸುತ್ತಾರೆ. ಈ ಮೀನುಗಳನ್ನು ತಿಂದರೆ ವಾಂತಿ, ಭೇದಿ, ತಲೆನೋವು ಮುಂತಾದ ಸಮಸ್ಯೆಗಳು ಬರಬಹುದು. ಮುಂದುವರೆದು ತಿನ್ನುತ್ತಿದ್ದರೆ ಕ್ಯಾನ್ಸರ್ ಕೂಡ ಬರಬಹುದು.
ಒಳ್ಳೆಯ ಮೀನು ಖರೀದಿ ಸಲಹೆಗಳು:
1). ಐಸ್‍ನಲ್ಲಿಟ್ಟ ಮೀನುಗಳು ಎರಡು ದಿನಕ್ಕಿಂತ ಹೆಚ್ಚು ಇಟ್ಟರೆ ಒಳ್ಳೆಯದಲ್ಲ. ಆ ಮೀನುಗಳನ್ನು ಗಮನಿಸಿ ಖರೀದಿಸಬೇಕು. ಅದಕ್ಕೆ ಮೀನಿನ ಕಿವಿರುಗಳನ್ನು ನೋಡಬೇಕು. ಮೀನು ಕೆಟ್ಟಿಲ್ಲದಿದ್ದರೆ ಅವು ಕೆಂಪಾಗಿರುತ್ತವೆ. ಕೆಟ್ಟ ಮೀನುಗಳಲ್ಲಿ ಬಣ್ಣ ಕಳೆದುಕೊಂಡಿರುತ್ತವೆ.
2). ಕಿವಿರುಗಳ ಬಣ್ಣ ಹೋಗದಂತೆ ಕೆಲವರು ರಾಸಾಯನಿಕ ಹಚ್ಚಬಹುದು. ಐಸ್‍ನಲ್ಲಿಡುವುದರಿಂದಲೂ ಕಿವಿರುಗಳ ಬಣ್ಣ ಹೋಗಬಹುದು. ಈ ಸಮಯದಲ್ಲಿ ಮೀನಿನ ದೇಹ ಗಟ್ಟಿಯಾಗಿದೆಯೇ ಎಂದು ಪರೀಕ್ಷಿಸಬೇಕು. ಮೀನಿನ ದೇಹ ತೊಳತೊಳದಂತೆ ಇಲ್ಲದೆ ಗಟ್ಟಿಯಾಗಿದ್ದರೆ ಖರೀದಿಸಬಹುದು.
3). ಕಿವಿರುಗಳನ್ನು ಬೇರ್ಪಡಿಸುವಾಗ ಅಲ್ಲಿ ಬೆರಳುಗಳನ್ನು ಇಟ್ಟು ಮುಟ್ಟಿದರೆ ಅಂಟಂಟಾಗಿ ಇರುತ್ತದೆ. ಕೈಗೆ ಅಂಟು ಅಂಟಿದರೆ ಅದು ತಾಜಾ ಮೀನು. ಸಂಶಯ ಬೇಡ.
4). ಮೀನಿನ ಕಣ್ಣುಗಳು ಚೈತನ್ಯದಿಂದ ಇರಬೇಕು. ಅಂದರೆ ಸ್ಪಷ್ಟವಾಗಿ ನಮ್ಮನ್ನು ನೋಡುವಂತೆ ಇದ್ದರೆ ಒಳ್ಳೆಯ ಮೀನು. ರಕ್ತದ ಬಣ್ಣ, ಉಬ್ಬಿದ ಕಣ್ಣುಗಳಿರುವ ಮೀನುಗಳು ಹಲವು ದಿನ ಐಸ್‍ನಲ್ಲಿಟ್ಟಿರುತ್ತವೆ.
5). ರಾಸಾಯನಿಕ ಹಚ್ಚಿದ ಮೀನುಗಳಿಂದ ಔಷಧದ ವಾಸನೆ ಬರುತ್ತದೆ. ಆದ್ದರಿಂದ ವಾಸನೆ ಗಮನಿಸಬಹುದು..
6). ಮೀನಿನ ತಲೆಯನ್ನು ಹಿಡಿದು ಎತ್ತಿದರೆ ಅದರ ಬಾಲ ಗಟ್ಟಿಯಾಗಿ ನಿಲ್ಲಬೇಕು. ಹಾಗಲ್ಲದೆ ಕೆಳಗೆ ತೊಳತೊಳದಂತೆ ತೂಗುತ್ತಿದ್ದರೆ ಕೆಟ್ಟ ಮೀನು ಎಂದರ್ಥ. ಒಳ್ಳೆಯ ಮೀನಿನ ತಲೆಯನ್ನು ಎತ್ತಿದರೆ ಗಟ್ಟಿಯಾಗಿರುತ್ತದೆ.
7). ಕೆಲವು ಮೀನುಗಳ ಕಿವಿರುಗಳು ಬಣ್ಣ ಕಳೆದುಕೊಂಡಿದ್ದರೂ ಅವು ಒಳ್ಳೆಯ ಮೀನಾಗಿರಬಹುದು. ಅವುಗಳನ್ನು ತಿಳಿಯಲು ದೇಹ, ಬಾಲ, ಕಣ್ಣುಗಳನ್ನು ನೋಡಬೇಕು.
ಮೀನು ಹೇಗೆ ಖರೀದಿಸಬೇಕು?
ಮೀನು ಖರೀದಿಸಲು ಹೋದರೆ ಮೀನಿನ ದೇಹವನ್ನು ಮುಟ್ಟಿ ನೋಡಬೇಕು. ಬೆರಳುಗಳಿಂದ ಒತ್ತಿದಾಗ ಮಾಂಸದ ಭಾಗ ಗಟ್ಟಿಯಾಗಿದ್ದರೆ ಒಳ್ಳೆಯ ಮೀನು. ಆದರೆ ಕೊಳೆತ ಟೊಮೆಟೊದಂತೆ ಬೆರಳುಗಳು ಮುಟ್ಟಿದ ತಕ್ಷಣ ಮೀನಿನ ದೇಹದಲ್ಲಿ ಗುಂಡಿ ಬಿದ್ದರೆ ಕೆಟ್ಟ ಮೀನು.
ಕೆರೆಯ ಮೀನು ಖರೀದಿ ಸಲಹೆ!
ನದಿ, ಕೆರೆ, ಮೀನು ಸಾಕಣೆ ಕೇಂದ್ರಗಳಲ್ಲಿ ಸಿಗುವ ಮೀನುಗಳನ್ನು ಐಸ್‍ನಲ್ಲಿಟ್ಟು ತಿನ್ನಬಾರದು. ಅವುಗಳನ್ನು ಜೀವಂತವಾಗಿ ಹಿಡಿದು ಅಡುಗೆ ಮಾಡುವುದು ಒಳ್ಳೆಯದು. ಅವುಗಳನ್ನು ಐಸ್‍ನಲ್ಲಿಟ್ಟು ಬಳಸಬಾರದು. ಅವು ಒಳ್ಳೆಯದಲ್ಲ.
ಮೀನು ಅಡುಗೆ ತಡವಾದರೆ!!
ಮೀನು ಅಡುಗೆ ಮಾಡಲು ತಡವಾದರೆ ಅದನ್ನು ತೊಳೆದು ಹುಣಸೆಹಣ್ಣಿನ ರಸದಲ್ಲಿ ಹಾಕಿಡಬಹುದು. ಇದನ್ನು ಮಾಡದಿದ್ದರೆ ನಿಂಬೆರಸ ಹಿಂಡಿ ನೀರಿನಲ್ಲಿ ನೆನೆಸಿಡಬಹುದು. ಇದರಿಂದ ಅಡುಗೆ ಮಾಡುವವರೆಗೂ ಮೀನು ತಾಜಾವಾಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.