MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • Recipe: ಪಾನಿ+ಪುರಿಯಲ್ಲಿ ಹಾಕಿ ಕೊಡುವ ಮಸಾಲೆ ಆಲೂಗಡ್ಡೆ ಮಿಕ್ಸ್ ಮಾಡೋದು ಹೇಗೆ ಗೊತ್ತಾ?

Recipe: ಪಾನಿ+ಪುರಿಯಲ್ಲಿ ಹಾಕಿ ಕೊಡುವ ಮಸಾಲೆ ಆಲೂಗಡ್ಡೆ ಮಿಕ್ಸ್ ಮಾಡೋದು ಹೇಗೆ ಗೊತ್ತಾ?

ಪಾನಿಪುರಿ ಎಲ್ಲರಿಗೂ ಇಷ್ಟವಾಗುವ ತಿಂಡಿಯಾಗಿದ್ದು, ಅದರ ರುಚಿಗೆ ಮುಖ್ಯ ಕಾರಣ ಆಲೂಗಡ್ಡೆ ಮಿಕ್ಸ್. ಈ ಲೇಖನದಲ್ಲಿ, ಪಾನಿಪುರಿಯ ಆತ್ಮದಂತಿರುವ ರುಚಿಕರವಾದ ಆಲೂಗಡ್ಡೆ ಮಸಾಲೆ ಮಿಕ್ಸ್ ಅನ್ನು ಮನೆಯಲ್ಲೇ ತಯಾರಿಸುವ ಸುಲಭ ವಿಧಾನವನ್ನು ಹಂತ-ಹಂತವಾಗಿ ವಿವರಿಸಲಾಗಿದೆ.

1 Min read
Author : Mahmad Rafik
Published : Mar 09 2026, 09:33 AM IST
Share this Photo Gallery
  • FB
  • TW
  • Linkdin
  • Whatsapp
15
ಪಾನಿಪುರಿ
Image Credit : our own

ಪಾನಿಪುರಿ

ಪಾನಿಪುರಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಅಂತೇಳಿ. ಯಾರೇ ಆದ್ರೂ ಪಾನಿಪುರಿ ಅಂದ್ರೆ ಓಕೆ ಅಂತಾ ಹೇಳ್ತಾರೆ. ಅತ್ಯಂತ ಕಡಿಮೆ ಬೆಲೆಗೆ ಸಿಗುವ ಆಹಾರಗಳಲ್ಲಿ ಪಾನಿಪುರಿ ಸಹ ಒಂದಾಗಿದೆ. ಸಂಜೆ ಆಗ್ತಿದ್ದಂತೆ ಏನಾದ್ರೂ ತಿನ್ನೋಣ ಅಂದ್ರೆ ಕಣ್ಮುಂದೆ ಪಾನಿಪುರಿ ಬರುತ್ತದೆ. ಪುರಿಯಲ್ಲಿ ಅಲೂಗಡ್ಡೆಯ ಮಿಕ್ಸ್ ಹಾಕಿ, ಅದರೊಳಗೆ ಹುಳಿಯಾಗಿರೋ ನೀರು ಸೇರಿಸಿ ತಿನ್ನೋದೇ ಪಾನಿಪುರಿ. ಈ ಲೇಖನದಲ್ಲಿ ಪಾನಿಪುರಿಯ ಆತ್ಮದಂತಿರೋ ಆಲೂಗಡ್ಡೆ ಮಿಕ್ಸ್ ಮಾಡೋದು ಹೇಗೆ ಎಂದು ನೋಡೋಣ ಬನ್ನಿ.

25
ಮಸಾಲೆ ಆಲೂಗಡ್ಡೆ ಮಿಕ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು
Image Credit : Istock

ಮಸಾಲೆ ಆಲೂಗಡ್ಡೆ ಮಿಕ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು

ಆಲೂಗಡ್ಡೆ: 2, ಹಸಿಮೆಣಸಿನಕಾಯಿ: 2, ಹಸಿಬಟಾಣಿ: 2 ಟೀ ಸ್ಪೂನ್, ಪೆಪ್ಪರ್ ಪೌಡರ್; 1/2 ಟೀ ಸ್ಪೂನ್, ಚಿಕ್ಕ ಈರುಳ್ಳಿ: 1, ಕೋತಂಬರಿ ಸೊಪ್ಪು, ಉಪ್ಪು ರುಚಿಗೆ ತಕ್ಕಷ್ಟು (ಹಸಿಮೆಣಸಿನಕಾಯಿ ಬದಲು ಬೇಕಿದ್ರೆ ಅಚ್ಚ ಖಾರದ ಪುಡಿ ಅಥವಾ ರೆಡ್ ಚಿಲ್ಲಿ ಸೀಡ್ಸ್ ಬಳಸಬಹುದು

Related Articles

Related image1
ಆಲೂಗಡ್ಡೆ ಸಿಪ್ಪೆ ತೆಗೆಯಲು ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್; ಸಲಹೆ ಕೇಳಿ ಗೃಹಿಣಿಯರು ಖುಷಿ
Related image2
ಬೆಣ್ಣೆಯಂತೆ ಹದವಾಗಿ ಮಟನ್ ಬೇಯಿಸೋದು ಹೇಗೆ? ಟೇಸ್ಟಿ ಅಡುಗೆಗೆ ಈ ಸ್ಟೆಪ್‌ಗಳೆಲ್ಲಾ ಅನಿವಾರ್ಯ
35
ಮಸಾಲೆ ಆಲೂಗಡ್ಡೆ ಮಿಕ್ಸ್ ತಯಾರಿಸುವ ವಿಧಾನ
Image Credit : Istock

ಮಸಾಲೆ ಆಲೂಗಡ್ಡೆ ಮಿಕ್ಸ್ ತಯಾರಿಸುವ ವಿಧಾನ

ಮೊದಲಿಗೆ ಆಲೂಗಡ್ಡೆಯನ್ನು ಕುಕ್ಕರ್‌ನಲ್ಲಿ ಮೂರರಿಂದ ನಾಲ್ಕು ವಿಷಲ್ ಕೂಗಿಸಿಕೊಳ್ಳಿ. ನಂತರ ತಣ್ಣಗಾದ ಮೇಲೆ ಅಲೂಗಡ್ಡೆ ಸಿಪ್ಪೆ ಬಿಡಿಸಿಕೊಂಡು ಅಗಲವಾದ ಬೌಲ್‌ಗೆ ಹಾಕಿಕೊಂಡು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಿ. ಚಪಾತಿ ಹಿಟ್ಟಿನ ಹದಕ್ಕೆ ಆಲೂಗಡ್ಡೆ ಸಾಫ್ಟ್ ಆಗಿರಬೇಕು.

45
ಸಿದ್ದತೆ
Image Credit : our own

ಸಿದ್ದತೆ

ತದನಂತರ ಹಸಿಮೆಣಸಿನಕಾಯಿಯನ್ನು ತರಿತರಿಯಾಗಿ ಜಜ್ಜಿಕೊಳ್ಳಿ. ಹಾಗೆಯೇ ಹಸಿಬಟಾಣಿಯನ್ನು ಒಂದರಲ್ಲಿ ಎರಡು ಪೀಸ್ ಆಗುವಂತೆ ಜಜ್ಜಿಕೊಳ್ಳಿ. ಇದಾದ ಬಳಿಕ ಈರುಳ್ಳಿ ಮತ್ತು ಕೋತಂಬರಿ ಸೊಪ್ಪನ್ನು ಅತ್ಯಂತ ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಈಗ ಜಜ್ಜಿಕೊಂಡಿರುವ ಹಸಿಮೆಣಸಿನಕಾಯಿ, ಹಸಿಬಟಾಣಿ ಮತ್ತು ಕತ್ತರಿಸಿಕೊಂಡು ಈರುಳ್ಳಿ, ಕೋತಂಬರಿಯನ್ನು ಆಲೂಗಡ್ಡೆಯ ಬೌಲ್‌ಗೆ ಸೇರಿಸಿಕೊಳ್ಳಿ.

ಇದನ್ನೂ ಓದಿ: ಬನಾರಸಿ, ರೇಷ್ಮೆಯಂಥ ಹೆವಿ ಸೀರೆಗಳನ್ನು ಡ್ರೈ ಕ್ಲೀನ್‌ಗೆ ಕೊಡದೇ ಮನೆಯಲ್ಲೇ ತೊಳೆಯುವ ವಿಧಾನ

55
ಸ್ವರ್ಗಕ್ಕೆ ಮೂರೇ ಗೇಣು
Image Credit : our own

ಸ್ವರ್ಗಕ್ಕೆ ಮೂರೇ ಗೇಣು

ನಂತರ ಇದೇ ಬೌಲ್‌ಗೆ ಪೆಪ್ಪರ್ ಪೌಡರ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಂಡ್ರೆ ರುಚಿಯಾದ ಆಲೂಗಡ್ಡೆ ಮಿಕ್ಸ್ ರೆಡಿಯಾಗುತ್ತದೆ. ಪುರಿಯೊಳಗೆ ಆಲೂಗಡ್ಡೆ ಮಿಕ್ಸ್ ಹಾಕಿ, ಅದರ ಮೇಲೊಂದಿಷ್ಟು ಸೇವ್ ಹಾಕಿಕೊಂಡು ಪಾನಿಯೊಳಗೆ ಅದ್ದಿ ತಿಂದ್ರೆ ಸ್ವರ್ಗಕ್ಕೆ ಮೂರೇ ಗೇಣು

ಇದನ್ನೂ  ಓದಿ: ಪಲ್ಯ, ಸಾಂಬರ್‌ ಹೆಚ್ಚು ಖಾರವಾಯ್ತಾ? ಚಿಂತೆ ಮಾಡದೇ ಅಮ್ಮನ ಐದು ಟಿಪ್ಸ್ ಫಾಲೋ ಮಾಡಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ರೆಸಿಪಿ
ಆಹಾರ
ಅಡುಗೆಮನೆ ಸಲಹೆಗಳು

Latest Videos
Recommended Stories
Recommended image1
Kidney Health: ಈ 5 ಹಣ್ಣುಗಳಲ್ಲಿದೆ ನೀವು ಹುಡುಕುತ್ತಿರುವ ಆರೋಗ್ಯದ ರಹಸ್ಯ!
Recommended image2
ಮಟನ್ ಸಾರಿನಲ್ಲಿ ಎಣ್ಣೆ ಜಾಸ್ತಿ ಆಗಿದೆಯೇ? ಈ ಒಂದು ಟ್ರಿಕ್ ಬಳಸಿ
Recommended image3
ಬಟರ್ ಚಿಕನ್ ಐಸ್‌ಕ್ರೀಂಗೆ ದಂಗಾದ ಜನ, ರೆಸಿಪಿ ಹಂಚಿಕೊಂಡ ಯುವತಿಗೆ ನೆಟ್ಟಿಗರ ಪ್ರಶ್ನೆ
Related Stories
Recommended image1
ಆಲೂಗಡ್ಡೆ ಸಿಪ್ಪೆ ತೆಗೆಯಲು ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್; ಸಲಹೆ ಕೇಳಿ ಗೃಹಿಣಿಯರು ಖುಷಿ
Recommended image2
ಬೆಣ್ಣೆಯಂತೆ ಹದವಾಗಿ ಮಟನ್ ಬೇಯಿಸೋದು ಹೇಗೆ? ಟೇಸ್ಟಿ ಅಡುಗೆಗೆ ಈ ಸ್ಟೆಪ್‌ಗಳೆಲ್ಲಾ ಅನಿವಾರ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved