MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಕಡಿಮೆ ಖರ್ಚಿನಲ್ಲಿ ಕೆಲವೇ ನಿಮಿಷದಲ್ಲಿ ತಯಾರಿಸಿ ಆರೋಗ್ಯಕರ ಕಸ್ಟರ್ಡ್‌ ಪೌಡರ್

ಕಡಿಮೆ ಖರ್ಚಿನಲ್ಲಿ ಕೆಲವೇ ನಿಮಿಷದಲ್ಲಿ ತಯಾರಿಸಿ ಆರೋಗ್ಯಕರ ಕಸ್ಟರ್ಡ್‌ ಪೌಡರ್

Custard powder recipe : ಫ್ರೂಟ್ ಕಸ್ಟರ್ಡ್, ಪುಡಿಂಗ್, ಐಸ್ಕ್ರೀಮ್ ಅಥವಾ ಕೇಕ್ ತಯಾರಿಸೋಕೆ ಕಸ್ಟರ್ಡ್ ಪೌಡರ್ ಬೇಕೇ ಬೇಕು. ಆದ್ರೆ ಇದನ್ನು ಪ್ರತಿಸಾರಿ ಅಂಗಡಿಯಿಂದಲೇ ಖರೀದಿಸುವ ಅಗತ್ಯವಿಲ್ಲ. ಕೆಲವೇ ಕೆಲವು ಪದಾರ್ಥ ಬಳಸಿ ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸ್ಬಹುದು.

1 Min read
Author : Roopa Hegde
Published : Jul 30 2026, 12:49 PM IST
Share this Photo Gallery
  • FB
  • TW
  • Linkdin
  • Whatsapp
15
ಕಸ್ಟರ್ಡ್‌ ಪೌಡರ್‌ ಗೆ ಬೇಕಾಗುವ ಪದಾರ್ಥಗಳು
Image Credit : Asianet News

ಕಸ್ಟರ್ಡ್‌ ಪೌಡರ್‌ ಗೆ ಬೇಕಾಗುವ ಪದಾರ್ಥಗಳು

ಇದಕ್ಕೆ ಹೆಚ್ಚಿನ ಪದಾರ್ಥ ಅಗತ್ಯವಿಲ್ಲ. ಹಾಗೆಯೇ ಮನೆಯಲ್ಲಿರುವ ಪದಾರ್ಥ ಬಳಸಿಕೊಂಡೇ ನೀವು ಇದನ್ನು ತಯಾರಿಸಬಹುದು. ಒಂದು ಕಪ್ ಕಾರ್ನ್ಫ್ಲೋರ್, ಅರ್ಧ ಕಪ್ ಮಿಲ್ಕ್ ಪೌಡರ್, ಅರ್ಧ ಕಪ್ ಸಕ್ಕರೆ ಪುಡಿ, ಒಂದು ಟೀ ಚಮಚ ವೆನಿಲ್ಲಾ ಎಸೆನ್ಸ್ ಹಾಗೂ ಬೇಕಿದ್ದರೆ ಎರಡು ಅಥವಾ ಮೂರು ಹನಿ ಹಳದಿ ಫುಡ್ ಕಲರ್ ಬಳಸಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ತಯಾರಿಸುವ ವಿಧಾನ
Image Credit : Asianet News

ತಯಾರಿಸುವ ವಿಧಾನ

ಒಣಗಿರುವ ಮಿಕ್ಸಿ ಜಾರ್ ತೆಗೆದುಕೊಳ್ಳಿ. ಅದಕ್ಕೆ ಕಾರ್ನ್ಫ್ಲೋರ್, ಮಿಲ್ಕ್ ಪೌಡರ್ ಮತ್ತು ಸಕ್ಕರೆ ಪುಡಿಯನ್ನು ಹಾಕಿ. ವೆನಿಲ್ಲಾ ಎಸೆನ್ಸ್ ಹಾಗೂ ಬೇಕಿದ್ದರೆ ಹಳದಿ ಫುಡ್ ಕಲರ್ ಸೇರಿಸಿ. ಈಗ ಸುಮಾರು 30 ರಿಂದ 40 ಸೆಕೆಂಡುಗಳ ಕಾಲ ಪಲ್ಸ್ ಮೋಡ್ನಲ್ಲಿ ರುಬ್ಬಿ. ನಂತರ ಈ ಮಿಶ್ರಣವನ್ನು ಸಣ್ಣ ಜರಡಿಯ ಮೂಲಕ ಜರಡಿ ಹಿಡಿದ್ರೆ ಕಸ್ಟರ್ಡ್ ಪೌಡರ್ ರೆಡಿ.

Related Articles

Related image1
ಕೈಗಳಿಗೆ ಜಿಡ್ಡು ಅಂಟಲ್ಲ, ಎಣ್ಣೆಯನ್ನೂ ಹೀರಿಕೊಳ್ಳಲ್ಲ.. ಸ್ಟ್ರೀಟ್ ಸ್ಟೈಲ್ ಟೊಮೆಟೊ ಬೋಂಡಾ ಈಗ ಮನೆಯಲ್ಲೇ ಮಾಡಿ
Related image2
Curd Water Benefits: ತೂಕ ಇಳಿಸ್ಬೇಕು, ಆರೋಗ್ಯ ಸುಧಾರಿಸ್ಬೇಕು ಅಂದ್ರೆ ಮೊಸರಿಗೆ ಇದೊಂದು ಹಾಕಿ ಕುಡಿರಿ
35
ಹೀಗೆ ಸಂಗ್ರಹಿಸಿ
Image Credit : Asianet News

ಹೀಗೆ ಸಂಗ್ರಹಿಸಿ

ತಯಾರಾದ ಕಸ್ಟರ್ಡ್ ಪೌಡರ್ ಅನ್ನು ಸಂಪೂರ್ಣ ಒಣಗಿದ ಗಾಜಿನ ಏರ್ಟೈಟ್ ಡಬ್ಬಿಯಲ್ಲಿ ಇಡಬೇಕು. ಬಳಸುವಾಗ ಯಾವಾಗಲೂ ಒಣ ಚಮಚವನ್ನೇ ಬಳಸಿ. ತೇವಾಂಶ ತಾಗದಂತೆ ನೋಡಿಕೊಂಡರೆ ಈ ಪೌಡರ್ ಸುಮಾರು ಆರು ತಿಂಗಳವರೆಗೆ ಬಳಕೆಗೆ ಯೋಗ್ಯವಾಗಿರುತ್ತದೆ.

45
ಮನೆಯಲ್ಲೇ ಮಾಡಿದ್ರೆ ಪ್ರಯೋಜನ ?
Image Credit : Asianet News

ಮನೆಯಲ್ಲೇ ಮಾಡಿದ್ರೆ ಪ್ರಯೋಜನ ?

ಮನೆಯಲ್ಲೇ ತಯಾರಿಸಿದ ಕಸ್ಟರ್ಡ್ ಪೌಡರ್ನಲ್ಲಿ ಅನಗತ್ಯ ರಾಸಾಯನಿಕಗಳು ಅಥವಾ ಹೆಚ್ಚುವರಿ ಪ್ರಿಸರ್ವೇಟಿವ್ಗಳಿರುವುದಿಲ್ಲ. ಸಕ್ಕರೆಯ ಪ್ರಮಾಣವನ್ನೂ ನಿಮ್ಮ ಇಷ್ಟಕ್ಕೆ ತಕ್ಕಂತೆ ಕಡಿಮೆ ಅಥವಾ ಹೆಚ್ಚು ಮಾಡಬಹುದು. ಮಕ್ಕಳಿಗೆ ಸಿಹಿ ತಿನಿಸುಗಳನ್ನು ತಯಾರಿಸುವಾಗ ಇದು ಉತ್ತಮ ಆಯ್ಕೆಯಾಗುತ್ತದೆ.

55
ಯಾವ ಯಾವ ತಿನಿಸುಗಳಿಗೆ ಬಳಸಬಹುದು?
Image Credit : Asianet News

ಯಾವ ಯಾವ ತಿನಿಸುಗಳಿಗೆ ಬಳಸಬಹುದು?

ಈ ಕಸ್ಟರ್ಡ್ ಪೌಡರ್ನಿಂದ ಫ್ರೂಟ್ ಕಸ್ಟರ್ಡ್, ಕಸ್ಟರ್ಡ್ ಪುಡಿಂಗ್, ಟ್ರೈಫಲ್, ಐಸ್ಕ್ರೀಮ್, ಕೇಕ್, ಪೇಸ್ಟ್ರಿ ಹಾಗೂ ಹಲವು ರೀತಿಯ ಸಿಹಿ ತಿನಿಸುಗಳನ್ನು ಸುಲಭವಾಗಿ ತಯಾರಿಸಬಹುದು. ನೀವೂ ಒಮ್ಮೆ ಮನೆಯಲ್ಲೇ ಆರೋಗ್ಯಕರ, ರುಚಿಕರ ಮತ್ತು ಕಡಿಮೆ ಖರ್ಚಿನಲ್ಲಿ ಕಸ್ಟರ್ಡ್‌ ಪೌಡರ್ ತಯಾರಿಸಿ ನೋಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ರೆಸಿಪಿ
ಆಹಾರ
ಜೀವನಶೈಲಿ
Latest Videos
Recommended Stories
Recommended image1
Curd Water Benefits: ತೂಕ ಇಳಿಸ್ಬೇಕು, ಆರೋಗ್ಯ ಸುಧಾರಿಸ್ಬೇಕು ಅಂದ್ರೆ ಮೊಸರಿಗೆ ಇದೊಂದು ಹಾಕಿ ಕುಡಿರಿ
Recommended image2
ಕೈಗಳಿಗೆ ಜಿಡ್ಡು ಅಂಟಲ್ಲ, ಎಣ್ಣೆಯನ್ನೂ ಹೀರಿಕೊಳ್ಳಲ್ಲ.. ಸ್ಟ್ರೀಟ್ ಸ್ಟೈಲ್ ಟೊಮೆಟೊ ಬೋಂಡಾ ಈಗ ಮನೆಯಲ್ಲೇ ಮಾಡಿ
Recommended image3
ಇಡ್ಲಿ-ದೋಸೆಗೆ ಪರ್ಫೆಕ್ಟ್ ಕಾಂಬಿನೇಶನ್.. ಅಪ್ಪಟ ಉಡುಪಿ ಶೈಲಿಯ ತೆಂಗಿನಕಾಯಿ ಚಟ್ನಿ ಮಾಡಲು ಇಲ್ಲಿದೆ ಸೀಕ್ರೆಟ್ ಟಿಪ್ಸ್
Related Stories
Recommended image1
ಕೈಗಳಿಗೆ ಜಿಡ್ಡು ಅಂಟಲ್ಲ, ಎಣ್ಣೆಯನ್ನೂ ಹೀರಿಕೊಳ್ಳಲ್ಲ.. ಸ್ಟ್ರೀಟ್ ಸ್ಟೈಲ್ ಟೊಮೆಟೊ ಬೋಂಡಾ ಈಗ ಮನೆಯಲ್ಲೇ ಮಾಡಿ
Recommended image2
Curd Water Benefits: ತೂಕ ಇಳಿಸ್ಬೇಕು, ಆರೋಗ್ಯ ಸುಧಾರಿಸ್ಬೇಕು ಅಂದ್ರೆ ಮೊಸರಿಗೆ ಇದೊಂದು ಹಾಕಿ ಕುಡಿರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved