ಕೆಮ್ಮು ಶೀತದ ರಾಮಬಾಣ ಅರಿಶಿನದ ಹಾಲು ಮಾಡುವ ಪರ್ಫೆಕ್ಟ್ ವಿಧಾನ
ಭಾರತದಲ್ಲಿ ಪ್ರತಿಯೊಂದು ರೋಗಕ್ಕೂ ಮನೆಮದ್ದು ಇದೆ. ಹಳೆಯ ಕಾಲದಲ್ಲಿ ಜನರು ವೈದ್ಯರ ಬಳಿಗೆ ಹೋಗುವ ಬದಲು ಈ ಪರಿಹಾರಗಳನ್ನು ಬಳಸುತ್ತಿದ್ದರು. ಬಹಳ ಪರಿಣಾಮಕಾರಿ ಎಂದು ಹೇಳಿದರೆ ತಪ್ಪಾಗಲಾರದು. ಶೀತ ಅಥವಾ ಕೆಮ್ಮಿಗೆ ಅರಿಶಿನ ಹಾಲು ಬೆಸ್ಟ್. ಅದನ್ನು ಸರಿಯಾಗಿ ಮಾಡದಿದ್ದರೆ, ಹಾಲು ಕುಡಿದ ನಂತರವೂ ಯಾವುದೇ ಅರಿಶಿನ ಹಾಲನ್ನು ತಯಾರಿಸುವ ಸರಿಯಾದ ವಿಧಾನ ಇಲ್ಲಿದೆ.
2 ಲೋಟ ಹಾಲು
1/2 ಟೀಸ್ಪೂನ್ ಒಣ ಶುಂಠಿ ಪುಡಿ
1 ಟೀಸ್ಪೂನ್ ಅರಿಶಿನ
2-3 ಟೀಸ್ಪೂನ್ ಬೆಲ್ಲ
ಹಲವು ಉಪಯೋಗಗಳನ್ನು ಹೊಂದಿರುವ ಅರಿಶಿನದ ಹಾಲು ರಾತ್ರಿ ಮಲುಗುವ ಮುನ್ನ ಕುಡಿದರೆ ಬೆಸ್ಟ್.
ಮೊದಲು ಹಸಿ ಹಾಲಿಗೆ ಅರಿಶಿನ ಸೇರಿಸಿ. ನಂತರ ಒಣ ಶುಂಠಿ ಪುಡಿಯನ್ನು ಸೇರಿಸಿ.
ಈಗ ಸಕ್ಕರೆಯ ಬದಲು ಬೆಲ್ಲ ಸೇರಿಸಿ. ಇದು ರುಚಿಯ ಜೊತೆ. ಅದರ ಔಷಧೀಯ ಗುಣಗಳ ಮೌಲ್ಯವನ್ನು ಹೆಚ್ಚಿಸುತ್ತವೆ.
ಈಗ ಈ ಹಾಲನ್ನು ಗ್ಯಾಸ್ ಮೇಲೆ ಇಟ್ಟು, ಕುದಿಯುವಾಗ ಉರಿ ಕಡಿಮೆ ಮಾಡಿ.
ಚೆನ್ನಾಗಿ ಚಮಚದ ಸಹಾಯದಿಂದ ಮಿಕ್ಸ್ ಮಾಡಿ ಅದನ್ನು ಚೆನ್ನಾಗಿ ಕುದಿಸಿ ಮತ್ತು ಐದು ನಿಮಿಷಗಳ ನಂತರ ಆಫ್ ಮಾಡಿ.
ಬಿಸಿ ಬಿಸಿಯಾಗಿ ಈ ಹಾಲನ್ನು ಕುಡಿಯಲು ನೀಡಿ. ರಾತ್ರಿಯಲ್ಲಿ ಇದನ್ನು ಕುಡಿಯುವುದರಿಂದ ಮರುದಿನಕ್ಕೆ ಶೀತ-ಕೆಮ್ಮು ಗುಣವಾಗುತ್ತದೆ.
ನಿದ್ರಾಹೀನತೆಯಿಂದ ಬಳಲುತ್ತಿರುವರಿಗೂ ಈ ಹಾಲು ಉತ್ತಮ.
ಆಂಟಿ ಏಜಿಂಗ್ ಗುಣವಿದೆ ಇದಕ್ಕೆ.
ಗಾಯ, ನೋವುಗಳು ಬೇಗ ವಾಸಿಯಾಗಲು ಹೆಲ್ಪ್ ಮಾಡುತ್ತದೆ. ಚರ್ಮದ ಸೋಂಕುಗಳು, ಅಸ್ವಸ್ಥತೆ ಮತ್ತು ಅಲರ್ಜಿ ಮುಕ್ತರಾಗಲು ಸಹ ಸಹಾಯ ಮಾಡುತ್ತದೆ.
ಅರಿಶಿನ ಆಂಟಿ ಸೆಪ್ಟಿಕ್, ಆಂಟಿ ಇನ್‌ಫ್ಲೆಮೆಟರಿ, ಆಂಟಿ ಮೈಕ್ರೊಬಿಯಲ್ ಹಾಗೂ ಆಂಟಿ ಆಲರ್ಜಿಕ್ ಗುಣಗಳನ್ನು ಹೊಂದಿದೆ.