ಫಸ್ಟ್ ನೈಟಿಗೆಂದೇ ಇರೋ ಪಾನ್ ಬೆಲೆ ₹1100; ಏನಪ್ಪಾ ಇದರ ವಿಶೇಷ?
133 ವರ್ಷ ಹಳೆಯ 'ಸುಹಾಗ್ರತ್ ಸ್ಪೆಷಲ್ ಪಾನ್' ತಯಾರಿಸೋ ಒಂದು ಅಂಗಡಿ ಉತ್ತರ ಪ್ರದೇಶದ ಬನಾರಸ್‌ನಲ್ಲಿದೆ., ಶ್ರೀಗಂಧದ ಕೇಸರಿ-ಸ್ವೀಟ್ ಕ್ರೀಮ್ ಪಾನ್‌ಗೂ ಭಾರಿ ಬೇಡಿಕೆ. ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ.

ಬನಾರಸ್ ಪಾನ್ ಅಂಗಡಿಗಳಲ್ಲಿ ನೇತಾಜಿ ಪಾನ್ ಭಂಡಾರ್ (Netaji Pan Bhandar) ಅತ್ಯಂತ ಜನಪ್ರಿಯ ಪಾನ್ ಬ್ರಾಂಡ್. ಇದರ ಮಾಲೀಕ ವಿಕಾಸ್ ಚೌರಾಸಿಯಾ ಹೇಳುವಂತೆ, ಇವರ ಅಂಗಡಿಯಲ್ಲಿ ಅನೇಕ ರೀತಿಯ ಪಾನ್‌ಗಳಿವೆ, ಆದರೆ ಮದುವೆ ಸೀಸನ್‌ನಲ್ಲಿ ವಿಶೇಷ ಸುಹಾಗ್ರತ್ ಜೋಡಿ ಪಾನ್‌ಗೆ ಬೇಡಿಕೆ ಹೆಚ್ಚುತ್ತಂತೆ.
ಬನಾರಸ್ (Banaras) ಹೆಸರು ಬಂದ ತಕ್ಷಣ ಬನಾರಸಿ ಪಾನ್ ನೆನಪಾಗುತ್ತದೆ. ಇಲ್ಲಿನ ಪಾನ್ ಬಗ್ಗೆ ಚರ್ಚೆ ರಾಜಮನೆತನದಿಂದ ಬಾಲಿವುಡ್‌ವರೆಗೂ ಹಬ್ಬಿದೆ. ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಅನುಷ್ಕಾ ಶರ್ಮಾ ಸೇರಿ ಅನೇಕ ಬಾಲಿವುಡ್ ತಾರೆಯರೂ ಈ ಪಾನ್ ಸವಿದಿದ್ದಾರೆ.
ಬನಾರಸ್‌ನ 133 ವರ್ಷ ಹಳೆ ಪಾನ್ ಅಂಗಡಿಯಾಗಿರುವ ಇಲ್ಲಿ ಮದುವೆಯ ಸೀಸನ್‌ನಲ್ಲಿ (wedding season) ಬನಾರಸಿ ಪಾನ್‌ನೊಂದಿಗೆ ವಿಶೇಷ 'ಸುಹಾಗ್ ರಾತ್ ಕಪಲ್ ಪಾನ್' ಸಹ ತಯಾರಿಸುತ್ತಾರಂತೆ. ಇದರ ವಿಶೇಷತೆ ಏನು?
ಹೊಸದಾಗಿ ಮದುವೆಯಾದ ದಂಪತಿಗೆ. ಈ ಪಾನ್ ಅನ್ನು ವಿಶೇಷ ಕ್ರಮದಲ್ಲಿ ತಯಾರಿಸಲಾಗುತ್ತದೆಯಂತೆ. ಈ ಪಾನ್ ನ ಬೆಲೆ 1100 ರೂ., ಇದರಲ್ಲಿ ಗಂಡ ಮತ್ತು ಹೆಂಡತಿಗೆ ಎರಡು ಪಾನ್‌ಗಳಿರುತ್ತವೆ. ಮೊದಲ ರಾತ್ರಿಯ ಈ ಪಾನ್ ತಿಂದ್ರೆ ಮೂಡ್ ಬರುತ್ತಾ? ಏನು ಹೇಳ್ತಾರೆ ಪಾನ್ ಶಾಪ್ ಮಾಲೀಕ.
40 ಮಸಾಲೆ: ಈ ಪಾನ್ ಗುಣಮಟ್ಟದ ಬಗ್ಗೆ ಮಾತನಾಡುವುದಾದರೆ, ಇದನ್ನು ಕಟ್ಟಾ, ನಿಂಬೆ ಮತ್ತು 40ಕ್ಕೂ ಹೆಚ್ಚು ರೀತಿಯ ಸಿಹಿ ಮಸಾಲೆಗಳೊಂದಿಗೆ ಮಗಹಿ ವೀಳ್ಯದೆಲೆಗೆ ಸೇರಿಸಲಾಗುತ್ತದೆ. ವಿವಿಧ ಚೆರ್ರಿಗಳು, ಗುಲ್ಕಂಡ್, ಕೇಸರಿ ಜೊತೆಗೆ, ಈ ಮಸಾಲೆಗಳಿಗೆ ಅನೇಕ ವಿಶೇಷ ವಸ್ತುಗಳನ್ನು ಸೇರಿಸಲಾಗುತ್ತದೆ. ಇದಲ್ಲದೆ, ಬೆಳ್ಳಿ ಮತ್ತು ಚಿನ್ನದ ಬಣ್ಣದ ಪದರವನ್ನು ಸಹ ಅದರ ಮೇಲೆ ಹಚ್ಚುತ್ತಾರೆ. ಅದಕ್ಕಾಗಿಯೇ ಇದು ದುಬಾರಿ. ಬೇಡಿಕೆಗೇನೂ ಕಡಿಮೆ ಇಲ್ಲ ಬಿಡಿ.
ವೈವಿಧ್ಯತೆ: ವಿಶೇಷ ಸುಹಾಗ್ ರಾತ್ ಪಾನ್ ಹೊರತಾಗಿ, ಗಿರೌಲಿ ಕೇಸರಿ, ಪೈನ್ ಸೇಬು, ಶ್ರೀಗಂಧ, ಸ್ವೀಟ್ ಕ್ರೀಮ್, ಕಸ್ತೂರಿ ಸೇರಿದಂತೆ ಅನೇಕ ರೀತಿಯ ಪಾನ್ ಈ ಅಂಗಡೀಲಿ ಲಭ್ಯ. ಇವೆಲ್ಲವೂ ಭಾರಿ ಬೇಡಿಕೆಯ ಪಾನ್ ಇವು.
133 ವರ್ಷಗಳಷ್ಟು ಹಳೆಯದಾದ ಈ ಅಂಗಡಿಯನ್ನು ವಿಕಾಸ್ ಚೌರಾಸಿಯಾ ಅವರ ಅಜ್ಜ 1890 ರಲ್ಲಿ ಪ್ರಾರಂಭಿಸಿದರು. ಇಂದು, ಅವರ ನಾಲ್ಕನೇ ತಲೆಮಾರಿನವರು ಈ ಅಂಗಡಿಯನ್ನು ನಡೆಸುತ್ತಿದ್ದಾರೆ. ಜನರು ಅವರ ಅಜ್ಜನನ್ನು ನೇತಾಜಿ ಎಂದು ಕರೆಯುತ್ತಿದ್ದರು, ಆದ್ದರಿಂದ ಅಂಗಡಿಯ ಹೆಸರನ್ನು 'ನೇತಾಜಿ ಪಾನ್ ಭಂಡಾರ್' ಎಂದು ಇಡಲಾಯಿತು..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.