ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದು, ರಾಜ್ಯದ ಈ ಸ್ಪೆಷಲ್ ತಿನಿಸುಗಳನ್ನು ತಿನ್ನದಿದ್ದರೆ ಹೇಗೆ?
ಕರ್ನಾಟಕವು ವಿವಿಧ ಸಂಪ್ರದಾಯಗಳ, ವೈವಿಧ್ಯತೆಗಳ ತವರೂರು. ಇಲ್ಲಿ ನೀವು ಒಂದೊಂದು ಪ್ರದೇಶಗಳಲ್ಲಿ ಒಂದೊಂದು ರೀತಿಯ ವಿಶೇಷ ಸವಿರುಚಿ ಸವಿಯಬಹುದು. ನೀವು ಟ್ರೈ ಮಾಡಲೇಬೇಕಾದ ರಾಜ್ಯದ ಸ್ಥಳೀಯ ಆಹಾರಗಳ ಬಗ್ಗೆ ತಿಳಿಯೋಣ.
ಕರ್ನಾಟಕವು ವೈವಿಧ್ಯತೆಗೆ ಹೆಸರಾದ ತಾಣ. ಇಲ್ಲಿನ ಬೇರೆ ಸಂಸ್ಕೃತಿಗಳಿವೆ, ಆಚರಣೆಗಳಿವೆ, ವಿವಿಧ ಆಹಾರ ಪದ್ಧತಿಗಳೂ ಇವೆ. ಒಂದೊಂದು ಊರಲ್ಲಿ ಒಂದೊಂದು ರೀತಿಯ ಆಹಾರ ಫೇಮಸ್. ಇಲ್ಲಿ ನೀವು ಸವಿಯಲೇ ಬೇಕಾದ ಕರ್ನಾಟಕದ ಸ್ಥಳೀಯ ಆಹಾರಗಳು ಯಾವುವು ಅನ್ನೋದನ್ನು ನೋಡೋಣ.
ಮಸಾಲೆ ದೋಸೆ (masala dosa)
ಇದು ಕರ್ನಾಟಕ ಆಹಾರಗಳಲ್ಲಿ ಫೇಮಸ್ ತಿಂಡಿ. ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಿದ ದೋಸೆಯನ್ನು ಮಸಾಲೆಯುಕ್ತ ಆಲೂಗಡ್ಡೆ ಮಸಾಲಾದಿಂದ ತುಂಬಿಸಿ, ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್ ನೊಂದಿಗೆ ಬಡಿಸಲಾಗುತ್ತದೆ.
ಬಿಸಿ ಬೇಳೆ ಬಾತ್ (Bisi bele bath)
ಇದು ಕರ್ನಾಟಕದ ಸಾಂಪ್ರದಾಯಿಕ ಖಾದ್ಯವಾಗಿದ್ದು (Traditional Food), ಬೇಳೆಕಾಳುಗಳು, ವಿವಿಧ ತರಕಾರಿಗಳು, ಹುಣಸೆಹಣ್ಣು ಮತ್ತು ವಿಶೇಷ ಮಸಾಲೆ ಮಿಶ್ರಣದೊಂದಿಗೆ ಬೇಯಿಸಿದ ಅನ್ನವಿದು. ಇದನ್ನು ಹೆಚ್ಚಾಗಿ ತುಪ್ಪದ ಮತ್ತು ಬೂಂದಿ ಅಥವಾ ಹಪ್ಪಳದಂತಹ ಕುರುಕಲು ಹುರಿದ ತಿಂಡಿಗಳೊಂದಿಗೆ ಬಡಿಸಲಾಗುತ್ತದೆ.
ರಾಗಿ ಮುದ್ದೆ (Ragi Mudde)
ರಾಗಿ ಮುದ್ದೆ ಕರ್ನಾಟಕದ ಅನೇಕ ಭಾಗಗಳಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ತಿನ್ನುವಂತಹ ಪ್ರಧಾನ ಆಹಾರ. ಇದು ರಾಗಿ ಹಿಟ್ಟು ಮತ್ತು ನೀರಿನಿಂದ ತಯಾರಿಸಿದ ಪೌಷ್ಟಿಕ ಖಾದ್ಯವಾಗಿದ್ದು, ಇದನ್ನು ಬಸ್ಸಾರು, ಚಿಕನ್ ಸಾರಿನ ಜೊತೆ ಸರ್ವ್ ಮಾಡಲಾಗುತ್ತೆ.
ನೀರ್ ದೋಸೆ (Neer Dosa)
ನೀರ್ ದೋಸೆ ಕೇವಲ ಅಕ್ಕಿಯನ್ನು ಗ್ರೈಂಡ್ ಮಾಡಿ ಮಾಡಿದಂತಹ ಮೃದುವಾದ, ತೆಳುವಾದ ದೋಸೆಯಾಗಿದೆ. ಇದು ತುಂಬಾನೆ ಹಗುರ ಮತ್ತು ಸೂಕ್ಷ್ಮ ವಿನ್ಯಾಸವನ್ನು ಹೊಂದಿದೆ. ಇದನ್ನು ಸಾಮಾನ್ಯವಾಗಿ ತೆಂಗಿನಕಾಯಿ ಚಟ್ನಿ ಅಥವಾ ಮಸಾಲೆಯುಕ್ತ ಪಲ್ಯದೊಂದಿಗೆ ಬಡಿಸಲಾಗುತ್ತದೆ.
ಮಂಗಳೂರಿನ ಮೀನು ಸಾರು (Mangalore Fish Curry)
ಇದು ತೆಂಗಿನ ಹಾಲು, ಹುಣಸೆಹಣ್ಣು ಮತ್ತು ಸುವಾಸನೆಯುಕ್ತ ಮಸಾಲೆಗಳ ಮಿಶ್ರಣದಿಂದ ತಯಾರಿಸಿದ ಮಸಾಲೆಯುಕ್ತ ಸಾರು ಆಗಿರುತ್ತೆ, ಇದನ್ನು ಹೆಚ್ಚಾಗಿ ಅನ್ನ ಅಥವಾ ನೀರ್ ದೋಸೆಯೊಂದಿಗೆ ಸರ್ವ್ ಮಾಡಲಾಗುತ್ತೆ.
ಬೋಂಡಾ ಸೂಪ್ (Bonda Soup)
ಬೋಂಡಾ ಸೂಪ್ ಒಂದು ಟೇಸ್ಟಿಯಾದ ಸೂಪ್ ಆಗಿದ್ದು, ಇದು ಗರಿಗರಿಯಾದ ಡೀಪ್-ಫ್ರೈಡ್ ವಡೆಯನ್ನು ರುಚಿಕರವಾದ ಬೇಳೆ ಸಾರಿನ ಜೊತೆ ಡಿಪ್ ಮಾಡಿ ಸರ್ವ್ ಮಾಡುವಂತಹ ತಿನಿಸು ಆಗಿದೆ.
ಕೂರ್ಗ್ ಪಂದಿ ಕರಿ (Coorg Pandi curry)
ಇದು ಕರ್ನಾಟಕದ ಕೂರ್ಗ್ ನ ಜನಪ್ರಿಯ ತಿನಿಸು ಮತ್ತು ಕೂರ್ಗಿ ಮಸಾಲೆಗಳಾದ ಕಾಚಂಪುಲಿ (ಒಂದು ರೀತಿಯ ವಿನೆಗರ್) ಮತ್ತು ಹುರಿದ ಮಸಾಲೆಗಳೊಂದಿಗೆ ತಯಾರಿಸಿದ ಸುವಾಸನೆಯುಕ್ತ ಹಂದಿಮಾಂಸ ಪಲ್ಯ. ಇದನ್ನು ಸಾಮಾನ್ಯವಾಗಿ ಅನ್ನ ಅಥವಾ ಅಕ್ಕಿ ರೊಟ್ಟಿ, ಪುಂಡಿ ಜೊತೆ ಸರ್ವ್ ಮಾಡಲಾಗುತ್ತೆ.
ಕೋರಿ ರೊಟ್ಟಿ (Kori Rotti)
ಕೋರಿ ರೊಟ್ಟಿ ಕರ್ನಾಟಕದ ಮಂಗಳೂರಿನ ಸಾಂಪ್ರದಾಯಿಕ ಚಿಕನ್ ಕರಿ, ತೆಂಗಿನಕಾಯಿ, ಮಸಾಲೆ ಮತ್ತು ಹುಣಸೆಹಣ್ಣಿನಿಂದ ತಯಾರಿಸಿದ ರಿಚ್ ಮತ್ತು ಸುವಾಸನೆಯುಕ್ತ ಗ್ರೇವಿ ಜೊತೆಗೆ ಖಡಕ್ ಆಗಿರುವ ಅಕ್ಕಿ ರೊಟ್ಟಿಯನ್ನು ಸರ್ವ್ ಮಾಡಲಾಗುತ್ತೆ. ಇದು ಮಂಗಳೂರಿಗರ ಫೇವರಿಟ್ ಡಿಶ್ ಆಗಿದೆ.