ವರ್ಕೌಟ್ ಇಲ್ಲದೆ ಇದನ್ನು ತಿಂದು 15 ಕೆಜಿ ತೂಕ ಇಳಿಸಿದ ಬಿಲಿಯನೇರ್ ಮುಖೇಶ್ ಅಂಬಾನಿ
ಕೇವಲ ದುಡ್ಡು ದಂಡಿಯಾಗಿದ್ರೆ ಸಾಲೋಲ್ಲ. ಅದನ್ನು ಅನುಭವಿಸಲು ಆರೋಗ್ಯವೂ ಇರಬೇಕು. 67 ವಯಸ್ಸಿನ ಮುಖೇಶ್ ಅಂಬಾನಿ ಯಾವುದೇ ವರ್ಕೌಟ್ ಮಾಡದೇ ಕೇವಲ ಡಯಟ್‌ನಿಂದ 15 ಕೆಜಿ ಕಳೆದುಕೊಂಡಿದ್ದಾರೆ. ಅವರ ಡಯಟ್ ಡಿಟೇಲ್ಸ್ ಇಲ್ಲಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಅವರ 67ರಲ್ಲೂ ಆರೋಗ್ಯವಂತರಾಗಿ ಮತ್ತು ಫಿಟ್ ಆಗಿರಲು ಮುಖ್ಯವಾಗಿ ಅವರ ಡಯಟ್ ಕಾರಣ.
ಒಮ್ಮೆ ತುಂಬಾ ದಪ್ಪಗಾಗಿದ್ದ ಮುಖೇಶ್, ಕೇವಲ ಆಹಾರದಿಂದಲೇ 15 ಕೆಜಿ ತೂಕ ಕಳೆದುಕೊಂಡರು. ಬೆಳಗಿನ ಉಪಾಹಾರದಿಂದ ರಾತ್ರಿ ಊಟದವರೆಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ತೂಕ ಇಳಿಸೋಕೆ ಅನುಸರಿಸಿದ್ದೇನು ಎಂಬ ವಿವರ ಇಲ್ಲಿದೆ.
ರಿಲಯನ್ಸ್ ನಲ್ಲಿ ನಿರ್ಣಾಯಕ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಮುಖೇಶ್ ಅಂಬಾನಿ ತಮ್ಮ ಕುಟುಂಬದ ಜವಾಬ್ದಾರಿಗಳನ್ನು ಸಹ ಪೂರೈಸುತ್ತಾರೆ. ಪತ್ನಿ, ಮಕ್ಕಳು, ಮೊಮ್ಮಕ್ಕಳಿಗೂ ಸಮಯ ನೀಡುತ್ತಾರೆ.
ಏಪ್ರಿಲ್ 19, 2024 ರಂದು 67 ನೇ ವರ್ಷಕ್ಕೆ ಕಾಲಿಟ್ಟ ಅವರು ತಮ್ಮ ಆರೋಗ್ಯವನ್ನು ಆಹಾರದಿಂದಲೇ ಕಾಪಾಡಿಕೊಂಡು ಬಂದಿದ್ದಾರೆ. ತೂಕ ಏರಿಕೆಯಾದಾಗ ಕಟ್ಟುನಿಟ್ಟಿನ ಆಹಾರಕ್ರಮದಿಂದಾಗಿ ಅವರು ಅದ್ಭುತ ಫಲಿತಾಂಶವನ್ನು ಸಾಧಿಸಿದ್ದಾರೆ.
ಯೋಗ ಮತ್ತು ಧ್ಯಾನ
ವಿಶ್ವದ ಯಾವುದೇ ಯಶಸ್ವಿ ವ್ಯಕ್ತಿಯಂತೆ, ಮುಖೇಶ್ ಅಂಬಾನಿ ದಿನವಿಡೀ ಕಟ್ಟುನಿಟ್ಟಾದ ದಿನಚರಿಯನ್ನು ಅನುಸರಿಸುತ್ತಾರೆ. ಉದ್ಯಮಿ ಯೋಗ ಮತ್ತು ಧ್ಯಾನದಿಂದ ತನ್ನ ದಿನವನ್ನು ಪ್ರಾರಂಭಿಸುತ್ತಾರೆ. ಸೂರ್ಯ ನಮಸ್ಕಾರ ಮಾಡುವುದರಿಂದ ಹಿಡಿದು ವೇಗದ ನಡಿಗೆ, ಧ್ಯಾನ ಮುಕೇಶ್ ಅಂಬಾನಿಯ ಬೆಳಗಿನ ಆರಂಭವಾಗಿದೆ.
ಲಘು ಉಪಹಾರ
ದಿನದ ಮೊದಲ ಊಟದ ವಿಷಯಕ್ಕೆ ಬಂದಾಗ, ಮುಖೇಶ್ ಅಂಬಾನಿ ಅದನ್ನು ಹಗುರವಾಗಿರಿಸಲು ಆದ್ಯತೆ ನೀಡುತ್ತಾರೆ. ತಾಜಾ ಹಣ್ಣುಗಳು, ಜ್ಯೂಸ್ ಮತ್ತು ಇಡ್ಲಿ-ಸಾಂಬಾರ್ ಸೇವಿಸುತ್ತಾರೆ.
ಮಧ್ಯಾಹ್ನ, ರಾತ್ರಿಯ ಊಟ
ಮುಖೇಶ್ ಅಂಬಾನಿಯವರ ಊಟವು ಸಾಂಪ್ರದಾಯಿಕ ಭಾರತೀಯ ಆಹಾರವನ್ನು ಒಳಗೊಂಡಿರುತ್ತದೆ. ಅವರು ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಗುಜರಾತಿ ಶೈಲಿಯಲ್ಲಿ ದಾಲ್, ಸಬ್ಜಿ, ಅನ್ನ, ಸೂಪ್‌ಗಳು ಮತ್ತು ಸಲಾಡ್‌ಗಳನ್ನು ಇಷ್ಟಪಡುತ್ತಾರೆ. ಮನೆಯಲ್ಲಿಯೇ ಬೇಯಿಸಿದ ಊಟವನ್ನು ಮಾತ್ರ ಸೇವಿಸುತ್ತಾರೆ. ಮತ್ತು ಸಸ್ಯಾಹಾರ ಮಾತ್ರ ಸೇವಿಸುತ್ತಾರೆ.
ಝೀರೋ ಜಂಕ್ ಫುಡ್
ಮುಕೇಶ್ ಅಂಬಾನಿ ಅವರ ಆಹಾರದಲ್ಲಿ ಒಂದು ದೊಡ್ಡ ವಿಷಯವೆಂದರೆ ಜಂಕ್ ಫುಡ್ ಸೇವಿಸದೆ ಇರುವುದು. ಎಷ್ಟೆಲ್ಲಾ ಪಾರ್ಟಿ, ಸಮಾರಂಭಗಳಲ್ಲಿ ಭಾಗವಹಿಸಿದರೂ ಕಿಂಚಿತ್ತೂ ಜಂಕ್ ಫುಡ್ ಸೇವಿಸದ ಶಿಸ್ತನ್ನು ಅವರು ಅಳವಡಿಸಿಕೊಂಡಿದ್ದಾರೆ.
ಮದ್ಯ ಸೇವಿಸೋಲ್ಲ
ಮುಖೇಶ್ ಅಂಬಾನಿ ತಮ್ಮ ಜೀವನಶೈಲಿಯಲ್ಲಿ ಅನುಸರಿಸುವ ಮತ್ತೊಂದು ಪ್ರಮುಖ ನಿಯಮವೆಂದರೆ ಮದ್ಯಪಾನದಿಂದ ದೂರವಿರುವುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.