ಶೇ. 99 ಜನ ಮೊಟ್ಟೆ ಒಡೆಯುವಾಗ ಈ ದೊಡ್ಡ ತಪ್ಪನ್ನ ಮಾಡ್ತಾರೆ
ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎಂಬ ಮಾತೆ ಇದೆ. ಈ ಮೊಟ್ಟೆಯಿಂದ ಹಲವು ಆರೋಗ್ಯಕರ ಪ್ರಯೋಜನಗಳಿವೆ. ಮೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋ ಇರುತ್ತದೆ. ತೂಕ ಇಳಿಕೆ ಮಾಡಲು ಸಹ ಮೊಟ್ಟೆ ಸಹಕಾರಿಯಾಗಿ. ಮೊಟ್ಟೆಯನ್ನು ಬೇಯಿಸಿ, ಆಮ್ಲೆಟ್ ಮಾಡಿ ಅಥವಾ ಮಸಾಲಾ ಏನೇ ಮಾಡಬೇಕಾದರೂ ಅದನ್ನು ಒಡೆಯಲೇಬೇಕು. ಮೊಟ್ಟೆ ಒಡೆಯುವುದು ಒಂದು ಕಲೆ. ಆದರೆ ಮೊಟ್ಟೆ ಒಡೆಯುವಾಗ ಜನ ತಪ್ಪು ಮಾಡುತ್ತಾರೆ. ಇದರಿಂದ ಮೊಟ್ಟೆಯ ಸಿಪ್ಪೆ ಸಹ ಮಿಕ್ಸ್ ಆಗುವ ಸಾಧ್ಯತೆ ಇದೆ. ಹಾಗಿದ್ರೆ ಮೊಟ್ಟೆಯನ್ನು ಒಡೆಯುವುದು ಹೇಗೆ ?
ನಿಮಗೆ ಮೊಟ್ಟೆ ತುಂಬಾನೇ ಇಷ್ಟವಿರಬಹುದು. ಈ ಪ್ರೊಟೀನ್ ರಿಚ್ ಆಹಾರವನ್ನು ತಯಾರಿಸುವುದು ತುಂಬಾನೇ ಸುಲಭ. ಜೊತೆಗೆ ಇದರಿಂದ ತುಂಬಾ ಬಗೆಯ ಆಹಾರ ತಯಾರಿಸಬಹುದು.
ಮೊಟ್ಟೆಯನ್ನು ಬೇಯಿಸಿ, ಆಮ್ಲೆಟ್ ಮಾಡಿ ಅಥವಾ ಮಸಾಲಾ, ಮೊಟ್ಟೆ ಬುರ್ಜಿ ಹೀಗೆ ಹಲವಾರು ಬಗೆಯ ಆಹಾರ ತಯಾರಿಸಿ ಸೇವಿಸಬಹುದು.
ಸೋಷಿಯಲ್ ಮೀಡಿಯಾಗಳಲ್ಲಿ ಮೊಟ್ಟೆಯ ಉಪಯೋಗ ಮತ್ತು ಅದನ್ನು ಯಾವ ರೀತಿ ಸರಿಯಾದ ರೀತಿಯ ಬೇಯಿಸಬೇಕು ಎಂಬುದರ ಬಗ್ಗೆ ಹಲವು ಮಾಹಿತಿಗಳನ್ನು ನಾವು ಪ್ರತಿ ನಿತ್ಯ ಓದಿರುತ್ತೇವೆ.
ಜನಪ್ರಿಯ ಶೆಫ್ ಗಾರ್ಡೋನ್ ರಾಮ್ಸ್ ಹಲವು ಜನರಿಗೆ ಇಂದಿಗೂ ಸಹ ಸರಿಯಾದ ರೀತಿಯಲ್ಲಿ ಮೊಟ್ಟೆ ಒಡೆಯಲು ಬರುವುದಿಲ್ಲ ಎಂದು ಹೇಳಿದ್ದಾರೆ. ಜನ ಮೊಟ್ಟೆಯನ್ನು ಚಮಚದ ಸಹಾಯದಿಂದ ಒಡೆಯುತ್ತಾರೆ. ಇದು ತಪ್ಪು ಎನ್ನುತ್ತಾರೆ ಅವರು.
ಅಷ್ಟೇ ಅಲ್ಲ ಇನ್ನೂ ಕೆಲವು ಜನ ಪಾತ್ರೆಯ ಅಂಚಿಗೆ ಮೊಟ್ಟೆಯನ್ನು ಒಡೆದು ತುಂಡು ಮಾಡುತ್ತಾರೆ. ಆದರೆ ಇದೆಲ್ಲಾ ತಪ್ಪಾದ ಕ್ರಮ ಎಂದು ಗಾರ್ಡೋನ್ ರಾಮ್ಸ್ ಹೇಳಿದ್ದಾರೆ.
ಈ ರೀತಿಯಾಗಿ ಮೊಟ್ಟೆಯನ್ನು ಒಡೆಯುವುದರಿಂದ ಸಿಪ್ಪೆ ಸಹ ಮಿಕ್ಸ್ ಆಗುವ ಸಾಧ್ಯತೆ ಇದೆ.ಇದರಿಂದ ಮೊಟ್ಟೆ ಸೇವನೆ ಮಾಡುವಾಗ ಸಿಪ್ಪೆ ಬಾಯಿಗೆ ಬಂದರೆ ಆಹಾರದ ಸ್ವಾಧ ಕೂಡ ಕೆಡುತ್ತದೆ.
ಮೊಟ್ಟೆಯನ್ನು ಒಡೆಯುವ ಸರಿಯಾದ ಕ್ರಮ ಎಂದರೆ ಅದನ್ನು ಫ್ಲಾಟ್ ಸರ್ಫೆಸ್ ಅಂದರೆ ಸಮತಟ್ಟಾದ ಅಂಚಿನ ಮೇಲೆ ನಿಧಾನವಾಗಿ ಒಡೆಯಿರಿ.
ಇದರಿಂದ ಮೊಟ್ಟೆ ಸರಿಯಾಗಿ ಅರ್ಧ ಭಾಗದಿಂದ ತುಂಡಾಗುತ್ತದೆ. ಇದರಿಂದ ಮೊಟ್ಟೆಯ ಸಿಪ್ಪೆ ಸಹ ಮಿಕ್ಸ್ ಆಗುವುದಿಲ್ಲ. ಎಲ್ಲಾರೂ ಹೀಗೆ ಮೊಟ್ಟೆಯನ್ನು ಒಡೆಯಬೇಕು ಎಂದು ಗಾರ್ಡೋನ್ ಹೇಳುತ್ತಾರೆ. ಯಾಕೆಂದರೆ ಇದೆ ಸರಿಯಾದ ವಿಧಾನವಂತೆ.