ಮಸಾಲೆ ದೋಸೆ ಬ್ರೇಕ್ ಫಾಸ್ಟ್ ಗೆ ಬೆಸ್ಟ್ ಅಲ್ವಂತೆ ! ಏನ್ ಅಂತಿದ್ದಾರೆ ಇವ್ರು?
masala dosa an incomplete breakfast : ಬ್ರೇಕ್ ಫಾಸ್ಟ್ ಗೆ ಮಸಾಲೆ ದೋಸೆ ಬೆಸ್ಟ್ ಅಲ್ಲ ಎನ್ನುವ ಚರ್ಚೆಯೊಂದು ನಡೆಯುತ್ತಿದೆ. ಮಸಾಲೆ ದೋಸೆ ನಿಮ್ಮ ಶಕ್ತಿ ಹೆಚ್ಚಿಸಬೇಕು, ಆರೋಗ್ಯಕರವಾಗಿರಬೇಕು ಅಂದ್ರೆ ಹೀಗೆ ಮಾಡಿ.

ಮಸಾಲೆ ದೋಸೆ ಒಳ್ಳೆಯದಲ್ವಾ?
ದೋಸೆ, ಇಡ್ಲಿ ಸಾಂಬಾರ್ ಸೇರಿದಂತೆ ಉಪ್ಪಿಟ್ಟು, ಅವಲಕ್ಕಿ ದಕ್ಷಿಣ ಭಾರತೀಯರ ಅತ್ಯಂತ ಪ್ರಿಯ ಉಪಹಾರವಾಗಿದೆ. ಪ್ರತಿ ದಿನ ಈ ಪಟ್ಟಿಯಲ್ಲೇ ಒಂದಲ್ಲ ಒಂದು ಆಹಾರವನ್ನು ತಾವು ಸೇವಿಸ್ತೇವೆ. ಈ ಆಹಾರ ಹಗುರವಾಗಿರುತ್ತೆ, ಜೀರ್ಣವಾಗೋದು ಸುಲಭ ಅಂತ ಜನ ಭಾವಿಸ್ತಾರೆ. ಆದ್ರೆ ಈ ಪಟ್ಟಿಯಲ್ಲಿ ಮಸಾಲೆ ದೋಸೆ ಸೇರಲ್ಲ ಎನ್ನುವ ಮಾತಿದೆ. ಮಸಾಲೆ ದೋಸೆ ಪ್ರೇಮಿಗಳಿಗೆ ಇದು ಬೇಸರದ ಸುದ್ದಿ ಆಗ್ಬಹುದು. ದೋಸೆಯಲ್ಲಿ ದೋಷವಿಲ್ಲ. ಅದು ಆರೋಗ್ಯಕ್ಕೆ ಕೆಟ್ಟದ್ದೂ ಅಲ್ಲ. ಆದ್ರೆ ಅದ್ರಲ್ಲಿ ಅಗತ್ಯವಿರುವ ಪೋಷಕಾಂಶವೊಂದು ಮಿಸ್ ಆಗಿದೆ.
ವೈರಲ್ ವಿಡಿಯೋ
ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರ ಸಿದ್ಧಾರ್ಥ ಸಿಂಗ್, ಇತ್ತೀಚಿನ ಇನ್ಸ್ಟಾಗ್ರಾಮ್ ವೀಡಿಯೊದಲ್ಲಿ, ಮಸಾಲೆ ದೋಸೆ, ಬ್ರೇಕ್ ಫಾಸ್ಟ್ ಗೆ ಯೋಗ್ಯವಲ್ಲ ಎಂದಿದ್ದಾರೆ. ವೇಟ್ ಲಾಸ್ ಮಾಡ್ಕೊಳ್ಳೋಕೆ ಬಯಸೋರು ಬ್ರೇಕ್ ಫಾಸ್ಟ್ ನಲ್ಲಿ ಮಸಾಲೆ ದೋಸೆ ತಿನ್ಬೇಡಿ ಎಂದಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.
ಅನಾರೋಗ್ಯವಲ್ಲ ಅಪೂರ್ಣ
ಸಿದ್ಧಾರ್ಥ್ ಸಿಂಗ್ ಪ್ರಕಾರ, ಮಸಾಲೆ ದೋಸೆ ನಿಮ್ಮ ಆರೋಗ್ಯ ಹಾಳು ಮಾಡೋದಿಲ್ಲ. ಅಕ್ಕಿ, ಉದ್ದು, ಕರಿಬೇವು ಸೇರಿದಂತೆ ಎಲ್ಲ ಆರೋಗ್ಯಕ ಆಹಾರವನ್ನು ಇದಕ್ಕೆ ಬಳಸಲಾಗಿದೆ. ಬೇಳೆಯಿಂದ ಸಾಂಬಾರ್ ತಯಾರಿಸೋದ್ರಿಂದ ಇದು ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯ ಹಾಳ್ಮಾಡೋದಿಲ್ಲ. ಆದ್ರೆ ಹಸಿವು ಹೆಚ್ಚು ಮಾಡುತ್ತೆ.
ಬೇಗ ಹಸಿವಾಗುತ್ತೆ
ಅಕ್ಕಿ ಮತ್ತು ಬೇಳೆಗಳಿಂದ ತಯಾರಿಸಿದ ಈ ಮಸಾಲೆ ದೋಸೆಯನ್ನು ಜೀರ್ಣಿಸಿಕೊಳ್ಳೋದು ಬಹಳ ಸುಲಭ. ತಿಂತಿದ್ದಂತೆ ಹೊಟ್ಟೆ ತುಂಬಿದ ಅನುಭವ ಆಗುತ್ತೆ. ಆದ್ರೆ ಕೆಲವೇ ಗಂಟೆಯಲ್ಲಿ ಮತ್ತೆ ಹಸಿವಾಗುತ್ತೆ. ಇದ್ರಿಂದ ನೀವು ಮತ್ತೆ ಬೇರೆ ಆಹಾರ ತಿನ್ನುತ್ತೀರಿ. ಇದು ನಿಮ್ಮ ಕ್ಯಾಲೋರಿ ಹೆಚ್ಚಿಸುತ್ತೆ. ತಜ್ಞರ ಪ್ರಕಾರ ದೋಸೆಯಿಂದ ತೂಕ ಹೆಚ್ಚಾಗೋದಿಲ್ಲ. ದೋಸೆ ಸೇವನೆ ನಂತ್ರ ಆಗುವ ಪ್ರಕ್ರಿಯೆಯಿಂದ ಹಸಿವು ಹೆಚ್ಚಾಗುತ್ತೆ. ಇದನ್ನು ಗ್ಲೈಸೆಮಿಕ್ ಪ್ರತಿಕ್ರಿಯೆ ಎಂದು ಕರೆಯುತ್ತಾರೆ. ನಿಮ್ಮ ರಕ್ತದಲ್ಲಿನ ಸಕ್ಕರೆ ತ್ವರಿತವಾಗಿ ಏರುತ್ತದೆ, ಅಷ್ಟೇ ವೇಗವಾಗಿ ಇಳಿಯುತ್ತೆ. ಮತ್ತೆ ಬೇಗ ಹಸಿವಾಗುತ್ತದೆ.
ದೋಸೆ ತಿನ್ನೋದನ್ನು ನಿಲ್ಲಿಸಬೇಕೇ?
ಸಿಂಗ್ ಪ್ರಕಾರ ನೀವು ಮಸಾಲೆ ದೋಸೆ ತಿನ್ನೋದನ್ನು ನಿಲ್ಲಿಸ್ಬೇಕಾಗಿಲ್ಲ. ದೋಸೆ ತಿನ್ನುವ ಆಸೆ ಈಡೇರಬೇಕು, ಅದು ಆರೋಗ್ಯಕ್ಕೂ ಒಳ್ಳೆಯದಾಗಿರ್ಬೇಕು ಅಂದ್ರೆ ದೋಸೆ ತಯಾರಿಸೋ ಟ್ರಿಕ್ಸ್ ಬದಲಿಸಿ. ಅಪೂರ್ಣವಾಗಿರುವ ದೋಸೆ ಬ್ಯಾಟರನ್ನು ಪೂರ್ಣಗೊಳಿಸಿ. ಮಸಾಲೆ ದೋಸೆಗೆ ಪನ್ನೀರ್ ಮಿಕ್ಸ್ ಮಾಡಿ. ಮಸಾಲೆ ದೋಸೆ ತಯಾರಿಸಿದ ಮೇಲೆ ಅದ್ರ ಒಳಗೆ ಹಾಕುವ ಪಲ್ಯಕ್ಕೆ ಪನೀರ್ ಸೇರಿಸಿ. ಪ್ರೋಟೀನ್ ಸೇರಿಸಿದ್ರೆ ನೀವು ಬ್ಯಾಲೆನ್ಸ್ ಆಹಾರ ಸೇವನೆ ಮಾಡಿದಂತಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹೆಚ್ಚು ಸಮಯ ನಿಮಗೆ ಹೊಟ್ಟೆ ತುಂಬಿದ ಅನುಭವ ಆಗುತ್ತೆ.
ಪನೀರ್ ಬೇಡ ಅಂದ್ರೆ ಹೀಗೆ ಮಾಡಿ
ಪನೀರ್, ಮಸಾಲೆ ದೋಸೆ ರುಚಿ ಬದಲಿಸುತ್ತೆ ಅಂತನ್ನಿಸಿದ್ರೆ ಟೆನ್ಷನ್ ಬೇಡ. ಪನೀರ್ ಬದಲು ನೀವು ಪ್ರೋಟೀನ್ ಭರಿತ ಪದಾರ್ಥವನ್ನು ಇದಕ್ಕೆ ಸೇರಿಸಿ ತಿನ್ಬಹುದು. ಇಲ್ಲ ಮಸಾಲೆ ದೋಸೆ ಜೊತೆ ಬೇಯಿಸಿದ ಮೊಟ್ಟೆ ತಿನ್ನಿ. ಕಡಲೆಕಾಯಿ ಅಥವಾ ತೆಂಗಿನಕಾಯಿ ಚಟ್ನಿ ಜೊತೆ ನೀವು ಮಸಾಲೆ ದೋಸೆ ತಿನ್ಬಹುದು. ಪನೀರ್ ಭರ್ಜಿ ಕೂಡ ತಿನ್ಬಹುದು. ಮಸಾಲೆ ದೋಸೆ ಇಲ್ಲ ಖಳನಾಯಕನಲ್ಲ. ಸಮತೋಲಿತ ಆಹಾರ ಸೇವನೆ ಮಾಡ್ಬೇಕು ಅಂದ್ರೆ ನೀವು ಸ್ವಲ್ಪ ಬದಲಾವಣೆ ಮಾಡ್ಕೊಳ್ಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

