Exercise Tips: ಈ ಪ್ರಿ ವರ್ಕೌಟ್ ಡ್ರಿಂಕ್ಸ್ ಕುಡಿದ್ರೆ 6 ಗಂಟೆ ಎನರ್ಜಿ ಡೌನ್ ಆಗೋದೆ ಇಲ್ಲ
ವ್ಯಾಯಾಮ ಮಾಡುವಾಗ ಆಯಾಸ ಮತ್ತು ದೌರ್ಬಲ್ಯ ಅಗೋದು ಸಾಮಾನ್ಯ, ಆದರೆ ಪ್ರಿ ವರ್ಕೌಟ್ ಡ್ರಿಂಕ್ಸ್ ಕುಡಿಯುವ ಮೂಲಕ ಇದನ್ನು ನಿವಾರಿಸಬಹುದು. ನೀವು ಮನೆಯಲ್ಲಿಯೇ ಕಾಫಿಯಿಂದ ತಯಾರಿಸಿದ ಟೇಸ್ಟಿಯಾದ ಪ್ರಿ -ವರ್ಕೌಟ್ ಡ್ರಿಂಕ್ಸ್ ತಯಾರಿಸಬಹುದು.
ವರ್ಕೌಟ್ ಮಾಡಲು ಶಕ್ತಿ ಮತ್ತು ಸಾಮರ್ಥ್ಯ ಎರಡೂ ಬೇಕು. ಶಕ್ತಿಯ ಕೊರತೆಯಿಂದಾಗಿ, ನಿಶ್ಶಕ್ತಿ ಉಂಟಾಗುತ್ತೆ ಮತ್ತು ಯಾವುದೇ ಕೆಲಸವನ್ನು ಮಾಡಲು ಧೈರ್ಯವಿರೋದಿಲ್ಲ. ಆದ್ದರಿಂದ, ಕಾರ್ಯಕ್ಷಮತೆಯನ್ನು (performance) ಹೆಚ್ಚಿಸಲು ವ್ಯಾಯಾಮಗಳಿಗೆ ಮೊದಲು ಎನರ್ಜಿ ಡ್ರಿಂಕ್ಸ್ ಅನ್ನು ಸೇವಿಸಲಾಗುತ್ತದೆ. ಅನೇಕ ದುಬಾರಿ ಪ್ರಿ ವರ್ಕೌಟ್ ಡ್ರಿಂಕ್ಸ್ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಅವುಗಳ ಸೇವನೆಯು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ನೀವು ಮನೆಯಲ್ಲಿ ಅಡುಗೆಮನೆಯಲ್ಲಿರುವ ವಸ್ತುಗಳಿಂದ ಅದ್ಭುತ ಪ್ರಿ ವರ್ಕೌಟ್ ಡ್ರಿಂಕ್ಸ್ (pre workout drink) ತಯಾರಿಸಬಹುದು, ಇದು ವ್ಯಾಯಾಮಕ್ಕೆ ಮೊದಲು ಪರ್ಫಾರ್ಮೆನ್ಸ್ ಹೆಚ್ಚಿಸಲು ಸಹಾಯ ಮಾಡುತ್ತೆ.
ಪ್ರಿ ವರ್ಕೌಟ್ ಡ್ರಿಂಕ್ಸ್ ನಲ್ಲಿ ಕಾಫಿಯನ್ನು ಸೇವಿಸಬಹುದು. ಕಾಫಿ ಒಂದು ಉತ್ತಮ ಪ್ರಿ ವರ್ಕೌಟ್ ಡ್ರಿಂಕ್ಸ್ ಆಗಿದೆ. ಇದನ್ನು ನೀವು ಮನೆಯಲ್ಲಿಯೇ ತಯಾರಿಸಬಹುದು. ಆದರೆ ತಾಲೀಮಿಗೆ ಮೊದಲು ಕಾಫಿ ಕುಡಿಯೋದನ್ನು ನೀವು ಪ್ಲಾನ್ ಮಾಡಬೇಕು. ಇಲ್ಲವಾದರೆ ಕುಡಿದ ತಕ್ಷಣ ವರ್ಕೌಟ್ ಮಾಡಿದ್ರೆ ಆರೋಗ್ಯದ ಮೇಲೆ ಸಮಸ್ಯೆ (health problem) ಉಂಟಾಗುತ್ತೆ.
45 ನಿಮಿಷ ಮುಂಚಿತವಾಗಿ ಕಾಫಿ ಕುಡಿಯಿರಿ
ಕಾಫಿಯಲ್ಲಿರುವ ಕೆಫೀನ್ ರಕ್ತದಲ್ಲಿ ಸಂಪೂರ್ಣವಾಗಿ ಕರಗಲು ಕನಿಷ್ಠ 45 ನಿಮಿಷಗಳು ಬೇಕಾಗುತ್ತವೆ. ಹಾಗಾಗಿ ವರ್ಕೌಟ್‌ಗೆ (workout) 45 ನಿಮಿಷಗಳು ಅಥವಾ 1 ಗಂಟೆ ಮೊದಲು ಕಾಫಿಯನ್ನು ಸೇವಿಸುವುದು ಉತ್ತಮ. ಕಡಿಮೆ ಅವಧಿಯಲ್ಲಿ ಕಾಫಿಯನ್ನು ಸೇವಿಸುವುದರಿಂದ ಗ್ಯಾಸ್ ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು.
6 ಗಂಟೆಗಳ ಕಾಲ ಹೆಚ್ಚುವರಿ ಸಾಮರ್ಥ್ಯ ಇರುತ್ತದೆ
ಇಂಟರ್ನ್ಯಾಷನಲ್ ಸೊಸೈಟಿ ಆಫ್ ಸ್ಪೋರ್ಟ್ಸ್ ನ್ಯೂಟ್ರಿಷನ್ ಕಾಫಿಯಲ್ಲಿರುವ ಕೆಫೀನ್ ಒಂದು ಎರ್ಗೋಜೆನಿಕ್ ಆಮ್ಲವಾಗಿದೆ ಎಂದು ಹೇಳುತ್ತದೆ. ಕೆಫೀನ್ ಅನ್ನು ಪ್ರತಿ ಕೆಜಿಗೆ 2-6 ಮಿಗ್ರಾಂ (ದೇಹದ ತೂಕ) ತೆಗೆದುಕೊಳ್ಳುವುದರಿಂದ ಹೆಚ್ಚುವರಿ ಶಕ್ತಿಯನ್ನು (extra energy) ಒದಗಿಸುತ್ತದೆ. ಇದರಿಂದ ಸುಮಾರು ಆರು ಗಂಟೆಗಳವರೆಗೆ ಸಾಮರ್ಥ್ಯ, ಶಕ್ತಿ ಉಳಿಯುತ್ತೆ.
ಪ್ರಿ ವರ್ಕೌಟ್ ಡ್ರಿಂಕ್ಸ್ (pre workout drink) ತಯಾರಿಸುವುದು ಹೇಗೆ ?
2 ರೂಪಾಯಿ ಮೌಲ್ಯದ ಕಾಫಿಯ ಪ್ಯಾಕೆಟ್ ತೆಗೆದುಕೊಳ್ಳಿ. ಇದನ್ನು ಒಂದು ಲೋಟದಲ್ಲಿ 1 ಟೀಸ್ಪೂನ್ ನೀರಿನೊಂದಿಗೆ ಕರಗಿಸಿ. ಕಾಫಿ ಚೆನ್ನಾಗಿ ಕರಗಿ ಪೇಸ್ಟ್ ಆದಾಗ, ಅದಕ್ಕೆ 1 ಲೋಟ ಉಗುರುಬೆಚ್ಚಗಿನ ನೀರನ್ನು ಸೇರಿಸಿ. ನಿಮ್ಮ ಪ್ರಿ ವರ್ಕೌಟ್ ಡ್ರಿಂಕ್ಸ್ ಸಿದ್ಧವಾಗಿದೆ ಮತ್ತು ಅದನ್ನು ಉಗುರುಬೆಚ್ಚಗೆ ಕುಡಿಯಿರಿ.
ಬಾಳೆಹಣ್ಣು ಮತ್ತು ಸೇಬು ಪ್ರಿ ವರ್ಕೌಟ್ ಡ್ರಿಂಕ್ಸ್
ಬಾಳೆಹಣ್ಣು ಮತ್ತು ಸೇಬುಗಳನ್ನು ತುಂಡುಗಳಾಗಿ ಕತ್ತರಿಸಿ. ಅವುಗಳನ್ನು 1 ಲೋಟ ಹಾಲಿನೊಂದಿಗೆ ಬ್ಲೆಂಡರ್ ನಲ್ಲಿ ಹಾಕಿ. 1 ಟೀಸ್ಪೂನ್ ಜೇನುತುಪ್ಪವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ವ್ಯಾಯಾಮಕ್ಕೆ 45 ನಿಮಿಷಗಳ ಮೊದಲು ಇದನ್ನು ಒಂದು ಲೋಟದಲ್ಲಿ ಕುಡಿಯಿರಿ.
ದಾಳಿಂಬೆ ಮತ್ತು ಕೃಷ್ಣಕಮಲ್ ಹಣ್ಣಿನ ಪಾನೀಯ
ದಾಳಿಂಬೆ ಬೀಜಗಳು, ಕೃಷ್ಣಕಮಲ್ ತಿರುಳು ಮತ್ತು ಜೇನುತುಪ್ಪವನ್ನು ತೆಗೆದುಕೊಳ್ಳಿ. ಎಲ್ಲಾ ವಸ್ತುಗಳನ್ನು ಬ್ಲೆಂಡರ್ ನಲ್ಲಿ ಇರಿಸಿ ಮತ್ತು ಮಿಶ್ರಣ ಮಾಡಿ. ಚೆನ್ನಾಗಿ ಮಿಶ್ರಣವಾದ ನಂತರ, ಅದನ್ನು ಒಂದು ಲೋಟಕ್ಕೆ ಹಾಕಿ.
ತಾಲೀಮಿಗೆ ಕನಿಷ್ಠ 30 ನಿಮಿಷಗಳ ಮೊದಲು ಈ ಪಾನೀಯ ತೆಗೆದುಕೊಳ್ಳಿ. ಇದು ಹೆಚ್ಚಿನ ಶಕ್ತಿಯನ್ನು ಒದಗಿಸುತ್ತೆ.