ಅರ್ಧ ಲೀಟರ್ ಹಾಲು ತುಸು ಗೋಧಿ ಹಿಟ್ಟಿನಿಂದ 20 ಸಾಫ್ಟ್ ಜಾಮೂನ್ ರೆಡಿ!
ಗುಲಾಬ್ ಜಾಮೂನ್ ಫೇಮಸ್ ಸ್ವೀಟ್ ಹಾಗೂ ಎಲ್ಲರಿಗೂ ಇಷ್ಟ. ಇದನ್ನು ತಯಾರಿಸಲು ರೇಡಿಮೇಡ್ ಪ್ಯಾಕ್‌ಗಳು ಸಹ ಮಾರುಕಟ್ಟೆಯಲ್ಲಿ ಲಭ್ಯ. ಆದರೆ ಇಂದು ನಾವು ಕೇವಲ ಅರ್ಧ ಲೀಟರ್ ಹಾಲು ಮತ್ತು ಸಣ್ಣ ಕಪ್ ಗೋಧಿ ಹಿಟ್ಟಿನಿಂದ ತಯಾರಿಸಬಹುದು. ಮನೆಯಲ್ಲೇ ಹೆಚ್ಚು ಹಣ ಖರ್ಚಿಲ್ಲದೇ, ಈಸಿಯಾಗಿ ಜಾಮೂನ್ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾನುಗಳು ಅರ್ಧ ಲೀಟರ್ ಹಾಲು ಮತ್ತು 2 ಚಮಚ ಹಿಟ್ಟು.
ಮೊದಲು, ಬಾಣಲೆಗೆ ಅರ್ಧ ಲೀಟರ್ ಹಾಲು ಹಾಕಿ, ಅದನ್ನು ಚೆನ್ನಾಗಿ ಕುದಿಸಬೇಕು.
ಕುದಿಯುವಾಗ ಹಾಲನ್ನು ನಿರಂತರವಾಗಿ ತಿರುಗಿಸಿ, ಬದಿಯಲ್ಲಿ ಅಂಟಿದ ಕೆನೆಯನ್ನು ಹಾಲಿಗೆ ಸೇರಿಸಿ ಕುದಿಸಿ.
ಹಾಲು ತುಂಬಾ ದಪ್ಪವಾದಾಗ ಒಲೆ ಉರಿ ಆಫ್ ಮಾಡಿ.
ಹಾಲು ತಣ್ಣಗಾದಾಗ ಅದಕ್ಕೆ ಎರಡು ಚಮಚ ಹಿಟ್ಟು ಸೇರಿಸಿ. ನಂತರ ಅರ್ಧ ಟೀ ಚಮಚ ಬೇಕಿಂಗ್ ಪೌಡರ್ ಮತ್ತು ಸೋಡಾ ಸೇರಿಸಿ.
ಈಗ ಅದನ್ನು ಲಘು ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ತುಪ್ಪ ಸೇರಿಸಿ ಕಲೆಸಿ.
ಈಗ ಹಿಟ್ಟಿನ ಸಣ್ಣ ಉಂಡೆಗಳನ್ನು ಮಾಡಿ.
ಎಣ್ಣೆಯನ್ನು ಬಿಸಿ ಮಾಡಿ ಹೊಂಬಣ್ಣ ಬರುವವರೆಗೆ ನಿಧಾನವಾಗಿ ಫ್ರೈ ಮಾಡಿ .
ಮತ್ತೊಂದು ಬಾಣಲೆಯಲ್ಲಿ ಸಕ್ಕರೆ ಮತ್ತು ನೀರನ್ನು ಸೇರಿಸುವ ಮೂಲಕ ಸಕ್ಕರೆ ಪಾಕವನ್ನು ತಯಾರಿಸಿ.
ಕರಿದ ಜಾಮೂನ್ ಉಂಡೆಗಳನ್ನು ಸಕ್ಕರೆ ಪಾಕದಲ್ಲಿ ಸುರಿಯಿರಿ.
ಮತ್ತು ಅದನ್ನು 15 ನಿಮಿಷಗಳ ಕಾಲ ಕುದಿಸಿ.
ಸ್ಟಾಟ್ ಜಾಮೂನ್ ರೆಡಿ. ಎಂಜಾಯ್ ಮಾಡಿ.