ಕೊರೋನಾಕ್ಕೆ ಆಯುಷ್ ಮಿನಿಸ್ಟ್ರಿ ಸಜೆಸ್ಟ್ ಮಾಡಿರುವ ಕೊರೊನಿಲ್‌ಗಿಂತ ಖಡಕ್ ಕಷಾಯ
ಪ್ರಪಂಚದಲ್ಲಿ ಕೊರೋನಾ ವೈರಸ್ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಜನರು ವ್ಯಾಕ್ಸಿನೇಶನ್‌ಗಾಗಿ ಕಾಯುತ್ತಿದ್ದಾರೆ.. ರಷ್ಯಾ ಇತ್ತೀಚೆಗೆ ಚುಚ್ಚುಮದ್ದನ್ನು ತಯಾರಿಸುವಲ್ಲಿ ಯಶಸ್ಸಿಯಾಗಿದೆ ಎಂದು ಘೋಷಿಸಿತು.ಆದರೆ ವಿಷಯ ಎಷ್ಟು ನಿಜ, ಅದು ಮುಂಬರುವ ದಿನಗಳಲ್ಲಿ ತಿಳಿಯಬೇಕಷ್ಟೇ. ಭಾರತದಲ್ಲಿಯೂ, ಕೆಲವು ದಿನಗಳ ಹಿಂದೆ, ಪತಂಜಲಿ ಕರೋನಿಲ್ ತಯಾರಿಸಿ, ಕೊರೋನಕ್ಕೆ ರಾಮಬಾಣ ಚಿಕಿತ್ಸೆ ಎಂದು ಹೇಳಿಕೊಂಡಿತ್ತು. ಆದರೆ, ಸ್ವಲ್ಪ ಸಮಯದ ನಂತರ ಇದನ್ನು ಆಯುಷ್ ಆಯುಷ್ ಮಿನಿಸ್ಟ್ರಿ ನಿಷೇಧಿಸಿತು. ಆಯುಷ್ ಸಚಿವಾಲಯವು ಹೊರಡಿಸಿದ ಕಷಾಯದ ರೆಸಿಪಿ ಇಲ್ಲಿದೆ. ಈ ಕಷಾಯವನ್ನು ನಿರಂತರವಾಗಿ ಸೇವಿಸುವುದರಿಂದ ಕರೋನಾವನ್ನು ತಪ್ಪಿಸಬಹುದು ಎಂದು ಹೇಳಲಾಗುತ್ತಿದೆ. ಕಷಾಯ ಮಾಡಲು ಬೇಕಾಗುವ ಸಾಮಾಗ್ರಿಗಳು.
ಬೇಕಾಗುವ ಸಾಮಾಗ್ರಿಗಳು
1 + 1/2 ಕಪ್ ನೀರು
10-15 ತುಳಸಿ ಎಲೆಗಳು
1 ದಾಲ್ಚಿನಿ ಎಲೆ
5-6 ಕರಿಮೆಣಸು
4-5 ದ್ರಾಕ್ಷಿಗಳು
2-3 ಲವಂಗ
2 ಹಸಿರು ಏಲಕ್ಕಿ
1 ದಾಲ್ಚಿನ್ನಿ ಸಣ್ಣ ತುಂಡು
1/2 ಇಂಚು ಶುಂಠಿಯ ಪುಡಿ
1 ಟೀಸ್ಪೂನ್ ಬೆಲ್ಲ
1/2 ಅರಿಶಿನ ಪುಡಿ
ಈ ಕಷಾಯ ತಯಾರಿಸಲು, ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ. ನಂತರ ನೀರಿಗೆ ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ.
ಈಗ ದಾಲ್ಚಿನಿ ಎಲೆ, ಏಲಕ್ಕಿ, ಲವಂಗ, ಕರಿಮೆಣಸು ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಐದರಿಂದ ಏಳು ನಿಮಿಷಗಳವರೆಗೆ ಕುದಿಯಲು ಬಿಡಿ.
ಚೆನ್ನಾಗಿ ಕುದಿಯುವಾಗ ಅರಿಶಿನ ಪುಡಿಯನ್ನು ಸೇರಿಸಿ.
ಬೆಲ್ಲ ಸೇರಿಸಿದ ನಂತರ 5 ನಿಮಿಷ ಬಿಡಿ.
ಮಿಶ್ರಣವು ಅರ್ಧ ಪ್ರಮಾಣಕ್ಕೆ ಬರುವವರೆಗೆ ಚೆನ್ನಾಗಿ ಕುದಿಸಿದರೆ ಕಷಾಯ ರೆಡಿ.
ನಂತರ ಕಷಾಯವನ್ನು ಫಿಲ್ಟರ್ ಮಾಡಿ ಬಿಸಿಯಾಗಿ ಸೇವಿಸಿ. ಆಯುಷ್ ಮಿನಿಸ್ಟ್ರಿ ಹೇಳಿದೆ.