ತೂಕ ಹೆಚ್ಚೋ ಭಯ ಬೇಡ... ಕಡಿಮೆ ಕ್ಯಾಲರಿ ಇರೋ ಈ ಸ್ವೀಟ್ಸ್ ಟ್ರೈ ಮಾಡಿ ನೋಡಿ..
ಅನೇಕರು ಯಾವಾಗಲೂ ಸಿಹಿ ತಿನ್ನಲು ಇಷ್ಟಪಡುತ್ತಾರೆ. ಅವರು ಖಂಡಿತವಾಗಿಯೂ ದಿನಕ್ಕೆ ಒಮ್ಮೆ ಸಿಹಿ ಭಕ್ಷ್ಯವನ್ನು ತಿಂದೇ ತಿನ್ನುತ್ತಾರೆ. ಸಿಹಿ ಪ್ರಿಯರು ದಿನವಿಡೀ ತುಂಬಾ ಸಿಹಿತಿಂಡಿಗಳನ್ನು ತಿನ್ನುತ್ತಾರೆ, ಅದು ಅವರ ಆರೋಗ್ಯದ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಅವರಿಗೇ ಗೊತ್ತೇ ಆಗುವುದಿಲ್ಲ. ಅನೇಕರು ಆಗಾಗ್ಗೆ ಸಿಹಿತಿಂಡಿಗಳ ಹಂಬಲವನ್ನು ಹೇಳುತ್ತಿರುತ್ತಾರೆ. ಹೆಚ್ಚು ಸಿಹಿ ತಿನ್ನುವುದರಿಂದ ದೇಹದಲ್ಲಿ ಕ್ಯಾಲೊರಿ ಹೆಚ್ಚಾಗುತ್ತದೆ. ಹಾಗಂತ ಸಿಹಿಯನ್ನು ಹೇಗೆ ಕಡಿಮೆ ಮಾಡೋದು ಎಂಬ ಆಲೋಚನೆಯಲ್ಲಿದ್ದೀರಾ? ಹಾಗಿದ್ದರೆ ನಿಮಗಾಗಿಯೇ ಈ ಸುದ್ದಿ...

ಸಿಹಿ ತಿಂಡಿ ಇಲ್ಲದೆ ಇರೋದೇ ಅಸಾಧ್ಯ ಎಂದೆನಿಸಿದರೆ, ಜೊತೆಗೆ ತೂಕ ಹೆಚ್ಚಾಗಬಾರದು ಎಂದು ಬಯಸಿದರೆ ಕಡಿಮೆ ಕ್ಯಾಲೊರಿ ಇರುವ ಕೆಲವು ಸಿಹಿತಿಂಡಿಗಳನ್ನು ಸೇವಿಸಬಹುದು. ಸಿಹಿತಿಂಡಿಗಳ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು ಮತ್ತು ಅದರ ಬಯಕೆಗಳನ್ನು ನಿಯಂತ್ರಿಸಲು ಕಡಿಮೆ ಕ್ಯಾಲರಿ ಸಿಹಿ ತಿಂಡಿ ತಿನ್ನಿ. ಅವನ್ನು ತಿನ್ನುವುದರಿಂದ ದೇಹಕ್ಕೆ ಹಾನಿಯಾಗುವುದಿಲ್ಲ.

ಬೇಯಿಸಿದ ರಸಗುಲ್ಲಾ
ರಸಗುಲ್ಲಾದಲ್ಲಿ ಸಾಕಷ್ಟು ಕ್ಯಾಲೋರಿಗಳಿವೆ, ಆದರೆ ಬೇಯಿಸಿದ ರಸಗುಲ್ಲಾ ಕ್ಯಾಲೋರಿಗಳ ವಿಷಯದಲ್ಲಿ ತುಂಬಾ ಫ್ರೆಂಡ್ಲಿ. ಬೇಯಿಸಿದ ರಸಗುಲ್ಲಾ ತಯಾರಿಸುವುದು ಸುಲಭ. ಮೊದಲು ರಸಗುಲ್ಲಾವನ್ನು ನೀರಿನಲ್ಲಿ ಹಾಕಿ ಒಂದು ನಿಮಿಷ ಇರಿಸಿ ನಂತರ ನೀರನ್ನು ಎಸೆಯಿರಿ. ಹೀಗೆ ಮಾಡುವುದರಿಂದ ರಸಗುಲ್ಲಾದಲ್ಲಿರುವ ಸಕ್ಕರೆ ಪಾಕವನ್ನು ತೆಗೆಯಲಾಗುತ್ತದೆ.

ಪನ್ನೀರ್, ಹಾಲು, ಸಿಹಿ ರಹಿತ ಸಕ್ಕರೆ, ಕೇಸರಿಯನ್ನು ಮಿಕ್ಸಿಯಲ್ಲಿ ತೆಗೆದುಕೊಂಡು ಅವುಗಳ ಪೇಸ್ಟ್ ತಯಾರಿಸಿ ರಸಗುಲ್ಲಾವನ್ನು ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ಈ ಪೇಸ್ಟ್ ಸೇರಿಸಿ. ಈಗ ಅದನ್ನು ಓವನ್ ನಲ್ಲಿ ಸುಮಾರು 5 ನಿಮಿಷಗಳ ಕಾಲ 150 ಡಿಗ್ರಿಯಲ್ಲಿ ಇರಿಸಿ, ನಂತರ ಬೇಯಿಸಿದ ರಸಗುಲ್ಲಾಗಳನ್ನು ಎಂಜಾಯ್ ಮಾಡಿ. ಇದು ಆರೋಗ್ಯಕ್ಕೆ ಯಾವುದೇ ಹಾನಿ ಮಾಡುವುದಿಲ್ಲ.

ಗೋಧಿ ನುಚ್ಚಿನ ಖೀರ್
ಖೀರ್ ತಿನ್ನಬೇಕೆಂದು ಅನಿಸಿದರೆ ಮತ್ತು ಹೆಚ್ಚು ಕ್ಯಾಲೊರಿಗಳನ್ನು ಸೇವಿಸಲು ಬಯಸದಿದ್ದರೆ, ನೀವು ಗೋಧಿ ನುಚ್ಚಿನ ಖೀರ್ ತಿನ್ನಬಹುದು. ಗೋಧಿ ನುಚ್ಚಿನ ಖೀರ್ ಅನ್ನು ಅಕ್ಕಿ ಖೀರ್‌ನಂತೆಯೇ ತಯಾರಿಸಿ ಬಾಯಿ ಚಪ್ಪರಿಸುವಂತೆ ಸೇವಿಸಬಹುದು.

ಅಕ್ಕಿ, ಗೋಧಿ ನುಚ್ಚು ಮತ್ತು ಸಕ್ಕರೆಯ ಬದಲಿಗೆ ಸಕ್ಕರೆ ಲೆಸ್ ಅಥವಾ ಜೇನುತುಪ್ಪವನ್ನು ಬಳಸಬಹುದು. ಕಡಿಮೆ ಕ್ಯಾಲೊರಿಗಳೊಂದಿಗೆ ಈ ರುಚಿಕರವಾದ ಸಿಹಿತಿಂಡಿಯನ್ನು ಆನಂದಿಸಿ.

ಸೋರೆಕಾಯಿ ಹಲ್ವಾ
ಸೋರೆಕಾಯಿಯಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ಮಾಡಿ ಸೇವಿಸಬಹುದು. ಇದು ಆರೋಗ್ಯಕ್ಕೆ ಉತ್ತಮ ತರಕಾರಿ. ನಿಮಗೆ ಹಲ್ವಾ ತಿನ್ನಲು ಮನಸಾಗಿದ್ದರೆ, ಬೇರೆ ಎಲ್ಲಾ ಬಗೆಯ ಸಿಹಿಗಳನ್ನು ದೂರ ಮಾಡಿ ಸೋರೆಕಾಯಿ ಹಲ್ವಾ ಮಾಡಿ ಸವಿಯಿರಿ.

ಸೋರೆಕಾಯಿಯಲ್ಲಿ ಕ್ಯಾಲರಿ ತುಂಬಾ ಕಡಿಮೆ. ಈ ಸಂದರ್ಭದಲ್ಲಿ, ಶುಗರ್‌ಲೆಸ್ ಸಿರಪ್‌ನಿಂದ ತಯಾರಿಸಿದ ಸೋರೆಕಾಯಿ ಹಲ್ವಾ ಪ್ರಯತ್ನಿಸಬಹುದು. ಇದು ಇತರ ಸಿಹಿ ತಿನಿಸುಗಳಿಗಿಂತ ಕ್ಯಾಲೊರಿಗಳಲ್ಲಿ ತುಂಬಾ ಕಡಿಮೆ, ಆದರೆ ರುಚಿಯ ದೃಷ್ಟಿಯಿಂದ ಚೆನ್ನಾಗಿರುತ್ತದೆ, ಹಾಗಂತ ಹೆಚ್ಚು ಸಕ್ಕರೆ ಬಳಸಬೇಡಿ.

ಪನ್ನೀರ್ ಖೀರ್
ಪನ್ನೀರ್ ನಿಂದ ಏನಿಲ್ಲಾ ತಿಂಡಿ ಮಾಡಿದ್ದೀರಿ? ಪನೀರ್ ಮಸಾಲ, ಕಬಾಬ್, ಗ್ರೇವಿ... ಇತ್ಯಾದಿ.. ಇತ್ಯಾದಿ.. ಈ ಬಾರಿ ಪನ್ನೀರ್ ಖೀರ್ ಮಾಡಿ. ಇದರಿಂದ ಸುಲಭವಾಗಿ ತೂಕ ಇಳಿಯಲು ಸಹಾಯವಾಗುತ್ತೆ.

ಪನ್ನೀರ್ ಖೀರ್ ಅನ್ನು ಮಧುಮೇಹಿಗಳೂ ತಿನ್ನಬಹುದು. ಸಕ್ಕರೆ ಬದಲಿಗೆ ಜೇನು ಅಥವಾ ಬೆಲ್ಲವನ್ನು ಬಳಸಬಹುದು. ಇದು ಅದ್ಭುತ ಕಡಿಮೆ ಕ್ಯಾಲೊರಿ ಸಿಹಿತಿಂಡಿಯಾಗಬಹುದು. ಈ ಭಕ್ಷ್ಯವು ಸಿಹಿತಿಂಡಿಗಳ ಬಯಕೆಯನ್ನು ತೆಗೆದುಹಾಕುತ್ತದೆ ಮತ್ತು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ.

ಚೀಸ್ ಅಥವಾ ಚೆನಾದಿಂದ ಮಾಡಿದ ಸಿಹಿತಿಂಡಿಗಳು
ಚೀಸ್‌ನಿಂದ ಮಾಡಿದ ಕಡಿಮೆ ಕ್ಯಾಲೊರಿಗಳ ಅತ್ಯುತ್ತಮ ಸಿಹಿತಿಂಡಿ. ಇದು ಯಾವುದೇ ರೀತಿಯ ಹಾಲಿನ ಅಥವಾ ಮಾವಾ ಸಿಹಿತಿಂಡಿಗಳ ಸಿಹಿಗಳಿಗಿಂತ ಉತ್ತಮ. ಸಕ್ಕರೆ ಅಂಶವನ್ನು ಕಡಿಮೆ ಇರಿಸಿದರೆ ಮತ್ತು ಯಾವುದೇ ವಯಸ್ಸಿನ ಜನರು ಸೇವಿಸಬಹುದು ಉತ್ತಮ ಆಯ್ಕೆಯೂ ಆಗಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.