ಉಪ್ಪು ಜಾಸ್ತಿಯಾದ ಅಡುಗೆ ರುಚಿ ಹೆಚ್ಚಿಸುವ ಸೂತ್ರಗಳು
ಅಡುಗೆಯಲ್ಲಿ ಉಪ್ಪು ಜಾಸ್ತಿಯಾದರೆ ಈ ವಸ್ತುಗಳನ್ನು ಬಳಸಿ ಉಪ್ಪು ಕಡಿಮೆ ಮಾಡಬಹುದು. ಈ ಸಲಹೆಗಳು ಅಡುಗೆಯ ರುಚಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಅಡುಗೆ ರುಚಿಗೆ ಉಪ್ಪು ಮುಖ್ಯ. ಉಪ್ಪು ಕಡಿಮೆ ಆದ್ರೂ, ಜಾಸ್ತಿ ಆದ್ರೂ ಅಡುಗೆ ಹಾಳಾಗುತ್ತೆ. ಉಪ್ಪು ಜಾಸ್ತಿ ಆದ್ರೆ ಸರಿ ಮಾಡೋದು ಕಷ್ಟ. ಉಪ್ಪು ಜಾಸ್ತಿ ಆದ್ರೆ ಅಡುಗೆ ರುಚಿ ಇರಲ್ಲ. ಹಲವು ವಿಧಾನಗಳಲ್ಲಿ ಉಪ್ಪು ಕಡಿಮೆ ಮಾಡಬಹುದು. ಉಪ್ಪು ಕಡಿಮೆ ಮಾಡುವ ಟಿಪ್ಸ್ ಇಲ್ಲಿವೆ.
ಆಲೂಗಡ್ಡೆ
ಅಡುಗೆಲಿ ಉಪ್ಪು ಜಾಸ್ತಿ ಆದ್ರೆ, ಆಲೂಗಡ್ಡೆ ಹೋಳುಗಳನ್ನ ಹಾಕಿ. ಆಲೂಗಡ್ಡೆ ಉಪ್ಪನ್ನ ಹೀರಿಕೊಳ್ಳುತ್ತೆ. ಆಲೂಗಡ್ಡೆಯನ್ನ ಸಿಪ್ಪೆ ತೆಗೆದು ಅಡುಗೆಯಲ್ಲಿ ಸೇರಿಸಬೇಕು.
ಹಿಟ್ಟಿನ ಉಂಡೆಗಳು
ಅಡುಗೆಗೆ ತಕ್ಕಷ್ಟು ಹಿಟ್ಟಿನ ಉಂಡೆಗಳನ್ನ ಮಾಡಿ ಉಪ್ಪು ಜಾಸ್ತಿ ಇರೋ ಅಡುಗೆಗೆ ಹಾಕಿ. ಉಂಡೆಗಳು ಉಪ್ಪನ್ನ ಹೀರಿಕೊಳ್ಳುತ್ತವೆ. ಅಡುಗೆ ಸರ್ವ್ ಮಾಡುವ ಮುನ್ನ ಉಂಡೆಗಳನ್ನ ತೆಗೆದು ಹಾಕಿ. ಬೇಳೆ ಅಥವಾ ಪಲ್ಯದಲ್ಲಿ ಉಪ್ಪು ಜಾಸ್ತಿ ಆದ್ರೆ ಉಂಡೆಗಳನ್ನ ತಿನ್ನಬಹುದು.
ತಾಜಾ ಕ್ರೀಮ್
ಕ್ರೀಮ್ ಕೂಡ ಉಪ್ಪನ್ನ ಕಡಿಮೆ ಮಾಡುತ್ತೆ. ಕ್ರೀಮ್ ಅಡುಗೆಗೆ ರುಚಿ ಕೂಡ ಹೆಚ್ಚಿಸುತ್ತೆ. ಒಂದು ಚಮಚ ಮೊಸರು ಹಾಕಿ ಐದು ನಿಮಿಷ ಬೇಯಿಸಿದ್ರೂ ಉಪ್ಪು ಕಡಿಮೆ ಆಗುತ್ತದೆ.
ನಿಂಬೆ ರಸ
ಇಂಡಿಯನ್, ಮೊಘಲ್, ಚೈನೀಸ್ ಅಡುಗೆಗೆ ನಿಂಬೆ ರಸ ಹಾಕಿದ್ರೆ ಉಪ್ಪು ಕಡಿಮೆ ಆಗುತ್ತೆ. ಅನ್ನಕ್ಕೆ ನಿಂಬೆ ರಸ ಹಾಕಿದ್ರೆ ಉಪ್ಪು ಕಡಿಮೆ ಆಗುತ್ತೆದೆ .