ಸೊಪ್ಪು ತರಕಾರಿ ಹೆಚ್ಚು ಹೊತ್ತು ಫ್ರೆಶ್ ಆಗಿಡಲು ಈ ಟ್ರಿಕ್ಸ್ ಬಳಸಿ!
ವಿವಿಧ ರೀತಿಯ ಹಸಿರು ಸೊಪ್ಪು ತರಕಾರಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದು ರುಚಿಯಲ್ಲಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಆದರೆ ಈ ಹಸಿರು ತರಕಾರಿಗಳು ರೆಫ್ರಿಜರೇಟರ್‌ನಲ್ಲಿ ಇಟ್ಟುಕೊಂಡ ನಂತರವೂ ಅವು ಹಾಳಾಗುತ್ತವೆ. ಸೊಪ್ಪುಗಳನ್ನು ಸ್ಟೋರ್ ಮಾಡುವುದೇ ಒಂದು ಸಮಸ್ಯೆ. ಅದರ ಚಿಂತೆ ಬಿಡಿ. ಅವುಗಳನ್ನು ಹೇಗೆ ಫ್ರೆಶ್ ಆಗಿ ಸಂಗ್ರಹಿಸಬಹುದು ಎಂಬುದಕ್ಕೆ ಇಲ್ಲಿದೆ ಗೈಡ್.

ಹಸಿರು ಎಲೆಗಳ ತರಕಾರಿಗಳನ್ನು ಯಾವಾಗಲೂ ಕತ್ತರಿಸಿ ಪೇಪರ್‌ನಲ್ಲಿ ಇರಿಸಿ. ಅದರ ತೇವಾಂಶ ಉಳಿಯುವುದರ ಜೊತೆ ಹೆಚ್ಚು ಕಾಲ ಫ್ರೆಶ್ ಆಗಿರುತ್ತದೆ.

ಹಸಿರು ಸೊಪ್ಪು ತರಕಾರಿಗಳಾದ ಕೊತ್ತಂಬರಿ, ಪಾಲಕ್, ಮೆಂತ್ಯೆ ಮುಂತಾದವುಗಳನ್ನು ತಾಜಾವಾಗಿ ಇಡಬೇಕಾದರೆ, ಕರಗಿದ ಬೆಣ್ಣೆ ಅಥವಾ ಎಣ್ಣೆ ಜೊತೆ ಐಸ್ ಟ್ರೇನಲ್ಲಿ ಸಂಗ್ರಹಿಸಿ. ವಾರಗಳವರೆಗೆ ಅವುಗಳನ್ನು ತಾಜಾವಾಗಿರಿಸುತ್ತದೆ.

ಆಡುಗೆಯ ಫ್ಲೇವರ್ ಹೆಚ್ಚಿಸಲು ಸಾಮಾನ್ಯವಾಗಿ ಕಸೂರಿ ಮೆಥಿಯನ್ನು ಗ್ರೇವಿಯಲ್ಲಿ ಸೇರಿಸಲಾಗುತ್ತದೆ. ಮೆಂತ್ಯೆ ಸೊಪ್ಪನ್ನು ನೆರಳಿನಲ್ಲಿ ಒಣಗಿಸಿ ಗಾಳಿಯಾಡದ ಡಬ್ಬಿ ಇರಿಸಿ. ಇದನ್ನು ಪರೋಟ, ಗ್ರೇವಿ ಮುಂತಾದವುಗಳಲ್ಲಿ ವರ್ಷಪೂರ್ತಿ ಬಳಸಬಹುದು.

ಕರಿಬೇವು ಪ್ರತಿ ಅಡುಗೆಯಲ್ಲೂ ಬಳಸಲಾಗುತ್ತದೆ. ಇದನ್ನು ಎಣ್ಣೆಯಲ್ಲಿ ಫ್ರೈ ಮಾಡಿ ಏರ್ ಟೈಟ್ ಬಾಕ್ಸ್‌ನಲ್ಲಿ ಸ್ಟೋರ್ ಮಾಡಿದರೆ ಹಲವಾರು ವಾರಗಳವರೆಗೆ ಇಡಬಹುದು.

ಯಾವಾಗಲೂ ಹಸಿರು ತರಕಾರಿಗಳನ್ನು ದೂರದೂರ ಹರಡಿ ಇಡಿ. ಹೀಗೆ ಮಾಡುವುದರಿಂದ ಹೆಚ್ಚು ದಿನಗಳವರೆಗೆ ತಾಜಾವಾಗಿರಿಸುತ್ತದೆ.

ಒಟ್ಟಿಗೆ ಒಂದೇ ಬುಟ್ಟಿಯಲ್ಲಿ ಇಡಬೇಡಿ.

ಒಟ್ಟಿಗೆ ಒಂದೇ ಬುಟ್ಟಿಯಲ್ಲಿ ಇಡಬೇಡಿ.

ಸೌತೆಕಾಯಿ, ಕ್ಯಾಪ್ಸಿಕಂ, ಡ್ರಮ್ ಸ್ಟಿಕ್, ಬದನೆಕಾಯಿ ಮುಂತಾದ ತರಕಾರಿಗಳನ್ನು ದೀರ್ಘಕಾಲ ತಾಜಾವಾಗಿಡಲು, ಒದ್ದೆಯಾದ ಹತ್ತಿ ಬಟ್ಟೆಯಲ್ಲಿ ಕಟ್ಟಿ ಇಡಿ.

ಹಸಿರು ಮೆಣಸಿನಕಾಯಿಗಳು ದೀರ್ಘಕಾಲ ಫ್ರೆಶ್ ಇಡಲು, ಅವುಗಳನ್ನು ಟಿಶ್ಯೂ ಪೇಪರ್‌ನಲ್ಲಿ ಸುತ್ತಿ ಇಡಿ ಮತ್ತು ರಂಧ್ರದ ಪೆಟ್ಟಿಗೆಯಲ್ಲಿ ಅಥವಾ ಬುಟ್ಟಿಯಲ್ಲಿ ಇರಿಸಿ.

ಕೊತ್ತಂಬರಿ ಸೊಪ್ಪನ್ನು ಟಿಶ್ಯೂ ಫೇಪರ್‌ನಲ್ಲಿ ಸುತ್ತಿ ಫ್ರಜ್‌ನಲ್ಲಿಟ್ಟರೆ ಹೆಚ್ಚು ದಿನಗಳ ಕಾಲ ಹಾಳಾಗದೆ ಫ್ರೆಶ್ ಆಗಿರುತ್ತದೆ.