ಹಾಲು ಕುಡಿದ ನಂತರ ನೀರು ಕುಡಿಯುವುದು ಸರಿಯೋ? ತಪ್ಪೋ?
First Published Dec 23, 2020, 5:17 PM IST
ಬಾಲ್ಯದಿಂದಲೂ ಮಕ್ಕಳು ಹಾಲನ್ನು ಕುಡಿದು ಕೊಂಡೇ ಬೆಳೆಯುತ್ತಾರೆ. ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ಇದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂಬುದನ್ನು ಮಕ್ಕಳಿಗೆ ತಿಳಿಸುತ್ತಳೇ ಅವರನ್ನು ಬೆಳೆಸಲಾಗುತ್ತದೆ. ಆರೋಗ್ಯಕ್ಕೆ ಹಾಲು ತುಂಬಾ ಮುಖ್ಯ. ಇದು ಪ್ರತಿ ತಾಯಿಯ ಮೊದಲ ಆಯ್ಕೆಯಾಗಿದ್ದು, ಅದರ ಪೌಷ್ಟಿಕಾಂಶದ ಗುಣಗಳಿಂದಾಗಿ ಎಲ್ಲಾ ಮಕ್ಕಳಿಗೆ ಹಾಲು ನೀಡಲಾಗುತ್ತದೆ. ಕೇವಲ ಮಕ್ಕಳಿಗೆ ಮಾತ್ರವಲ್ಲ, ವಯಸ್ಸಾದವರಿಗೂ ಹಾಲು ತುಂಬಾ ಪ್ರಯೋಜನಕಾರಿ.

ಹಾಲನ್ನು ನಾವೆಲ್ಲರೂ ಕುಡಿಯುತ್ತೇವೆ ನಿಜ. ಆದರೆ ಹಾಲು ಕುಡಿಯುವ ಸರಿಯಾದ ವಿಧಾನ ಅನೇಕರಿಗೆ ತಿಳಿದಿಲ್ಲ. ಇದರಿಂದ ಹಾಲು ಕುಡಿಯುವುದು ಕೂಡ ಹಾನಿ ಉಂಟು ಮಾಡುತ್ತದೆ. ಇಂದು ನಾವು ನಿಮಗೆ ಹಾಲು ಕುಡಿಯುವ ಸರಿಯಾದ ವಿಧಾನವನ್ನು ತಿಳಿಸಲಿದ್ದೇವೆ. ಹಾಲಿನ ಎಲ್ಲಾ ಪೌಷ್ಟಿಕಾಂಶದ ಗುಣಗಳ ಜೊತೆಗೆ ನೀವು ಕೆಲವೊಂದು ಅಂಶಗಳನ್ನು ಗಮನಿಸಬೇಕು. ಇಲ್ಲದಿದ್ದರೆ, ಹಾಲು ಲಾಭದ ಬದಲು ಹಾನಿಮಾಡುತ್ತದೆ.

ಹಾಲು ಕುಡಿದ ನಂತರ ನೀರು ಕುಡಿಯಬಾರದು ಎಂದು ಹಿರಿಯರು ಹೇಳುವುದನ್ನು ನೀವು ಅನೇಕ ಬಾರಿ ಕೇಳಿರಬಹುದು. ಇದರ ಜೊತೆಗೆ ಹಾಲನ್ನು ಕುಡಿದ ನಂತರ ಸಿಟ್ರಸ್ ಹಣ್ಣುಗಳನ್ನು ಸೇವಿಸಬೇಡಿ ಎನ್ನುವುದನ್ನು ಕೇಳಿರಬಹುದು. ಇದಕ್ಕೆ ಒಂದು ವಿಶೇಷ ಕಾರಣವಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?