ಪ್ರತಿದಿನ ಚಿಕನ್ ತಿಂದ್ರೆ ಆರೋಗ್ಯಕ್ಕೆ ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ನೋಡಿ ಮಾಹಿತಿ
ಪ್ರತಿದಿನ ಚಿಕನ್ ತಿನ್ನುವುದು ಆರೋಗ್ಯಕರವಲ್ಲವೇ? ನಿಯಮಿತವಾಗಿ ಕೋಳಿ ಮಾಂಸವನ್ನು ಸೇವಿಸುವುದರಿಂದ ಏನಾಗಬಹುದು ಎಂದು ತಿಳಿದರೆ ನೀವು ಆಶ್ಚರ್ಯಪಡುತ್ತೀರಿ
ಕೋಳಿ ಮಾಂಸ ತಿನ್ನಲು ಅನೇಕರು ಇಷ್ಟಪಡುತ್ತಾರೆ. ವಾರದಲ್ಲಿ ಹೆಚ್ಚಿನ ದಿನಗಳು ಮಾಂಸವನ್ನು ಸೇವಿಸುವ ಜನರ ಸಂಖ್ಯೆ ಕಡಿಮೆಯಿಲ್ಲ. ಪ್ರತಿದಿನ ಮಾಂಸ ತಿನ್ನುವುದರಿಂದ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?
ಚಿಕನ್ ಅಥವಾ ಕೋಳಿ ಮಾಂಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಚಿಕನ್ ತಿನ್ನುವುದರಿಂದ ದೇಹದಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಬಹುದು.
ಅಜೀರ್ಣ ಸಮಸ್ಯೆ ತೀವ್ರವಾಗಿ ಹೆಚ್ಚಾಗಬಹುದು. ಪ್ರತಿದಿನ ಚಿಕನ್ ತಿನ್ನುವುದರಿಂದ ಜೀರ್ಣಕ್ರಿಯೆ ಶಕ್ತಿ ಕುಂಠಿತಗೊಳ್ಳಬಹುದು. ಪ್ರತಿದಿನ ಚಿಕನ್ ತಿನ್ನುವುದರಿಂದ ಎದೆಯುರಿ ಅಥವಾ ಆಮ್ಲೀಯತೆಯ ಸಮಸ್ಯೆ ತೀವ್ರವಾಗಿ ಹೆಚ್ಚಾಗುತ್ತದೆ.
ಚಿಕನ್ ಮಲಬದ್ಧತೆ ಸಮಸ್ಯೆಯನ್ನು ಹೆಚ್ಚಿಸಬಹುದು. ಮಲಬದ್ಧತೆ ಇರುವವರು ಪ್ರತಿದಿನ ಚಿಕನ್ ತಿನ್ನಬಾರದು. ಪ್ರತಿದಿನ ಚಿಕನ್ ತಿನ್ನುವುದು ಕೊಲೆಸ್ಟ್ರಾಲ್ ಹೆಚ್ಚಾಗಲು ಒಂದು ಪ್ರಮುಖ ಕಾರಣ.
ನಿಯಮಿತವಾಗಿ ಕೋಳಿ ಮಾಂಸ ಸೇವಿಸುವ ಅಭ್ಯಾಸವು ಹೃದ್ರೋಗದ ಸಮಸ್ಯೆಯನ್ನು ತೀವ್ರವಾಗಿ ಹೆಚ್ಚಿಸುತ್ತದೆ. ಆದ್ದರಿಂದ ಹೃದಯವನ್ನು ಆರೋಗ್ಯವಾಗಿಡಲು ಪ್ರತಿದಿನ ಕೋಳಿ ಮಾಂಸ ತಿನ್ನಬೇಡಿ.