ಹೀಗಿದೆ ನೋಡಿ ವಿರಾಟ್ ಕೊಹ್ಲಿಯ ಬೆಂಗಳೂರಿನ ರೆಸ್ಟೋರೆಂಟ್ One8 ಕಮ್ಯೂನ್ ಒಳಾಂಗಣ
ವಿರಾಟ್ ಕೊಹ್ಲಿ ಒಡೆತನದ One8 ಕಮ್ಯೂನ್ ರೆಸ್ಟೋರೆಂಟ್ ಬೆಂಗಳೂರಿನಲ್ಲಿ ಹೊಸ ಸೆನ್ಸೇಶನ್ ಹುಟ್ಟು ಹಾಕಿದೆ. ಇದು ಎಲ್ಲಿದೆ, ಹೇಗಿದೆ, ಸರಾಸರಿ ಊಟದ ಬೆಲೆ ವಿವರ ಇಲ್ಲಿದೆ.
ಅಂತಾರಾಷ್ಟ್ರೀಯ ಆಹಾರದಿಂದ ಹಿಡಿದು ಪಕ್ಕಾ ಕರ್ನಾಟಕ ಅಡುಗೆಗಳವರೆಗೆ ಯಾವುದು ಬೇಕಿದ್ದರೂ ದೊರೆಯುವ ಸ್ಥಳ One8 ಕಮ್ಯೂನ್.
ಕ್ರಿಕೆಟರ್ ವಿರಾಟ್ ಕೊಹ್ಲಿ ಒಡೆತನದ ಈ ರೆಸ್ಟೋರೆಂಟ್ ಉದ್ಯಾನನಗರಿಯಲ್ಲಿ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಿಂದ ಸ್ವಲ್ಪ ದೂರದಲ್ಲಿದೆ.
ಕೊಹ್ಲಿಯ ಸಸ್ಯಾಹಾರಿ ಜೀವನಶೈಲಿಯಿಂದ ಸ್ಫೂರ್ತಿ ಪಡೆದ ರೆಸ್ಟೋರೆಂಟ್‌ನ ಮೆನುವು ಅವರ ಮೆಚ್ಚಿನವುಗಳನ್ನು ಕೂಡಾ ಒಳಗೊಂಡಿದೆ.
ವಾರದಲ್ಲಿ 7 ದಿನಗಳು ಮಧ್ಯಾಹ್ನ 12:30 ರಿಂದ ರಾತ್ರಿ 01:00ವರೆಗೆ ತೆರೆದಿರುವ ಈ ರೆಸ್ಟೋರೆಂಟ್‌ನಲ್ಲಿ ಪಾಸ್ತಾ, ಬರ್ಗರ್‌ಗಳಿಂದ ಹಿಡಿದು ಸುಶಿ, ಪಿಜ್ಜಾ, ಬಾವೋಸ್, ಸಲಾಡ್, ಚಾಕೋಲೇಟ್ ಕೇಕ್, ಚಿಕನ್ ಕೊರ್ಮಾ ಇತ್ಯಾದಿ ಇತ್ಯಾದಿ ಬಹುತೇಕ ನೀವು ಬಯಸಬಹುದಾದ ಎಲ್ಲವೂ ಇದೆ.
ಬೆಂಗಳೂರಿನ ರೆಸ್ಟೊರೆಂಟ್ ಮೂರು ಮಹಡಿಗಳಲ್ಲಿ ಬೆರಗುಗೊಳಿಸುವ ಬೋಹೀಮಿಯನ್ ಅಲಂಕಾರವನ್ನು ಹೊಂದಿದ್ದು, ಇಲ್ಲಿ ಇಬ್ಬರಿಗೆ ಸರಾಸರಿ ಊಟದ ಬೆಲೆ 3000 ರೂ.ಗಳಾಗಿರುತ್ತದೆ.
ಮುಂಬೈ, ಪುಣೆ ಮತ್ತು ಕೋಲ್ಕತ್ತಾ, ದೆಹಲಿ ಹಾಗೂ ಬೆಂಗಳೂರಿನಲ್ಲಿ One8 ಕಮ್ಯೂನ್ ಔಟ್‌ಲೆಟ್‌ಗಳಿವೆ. ಮತ್ತು ಇವು ಆಹಾರಪ್ರಿಯರ ಮೆಚ್ಚಿನವಾಗಿವೆ.
ಪ್ರವೇಶದ್ವಾರದಲ್ಲಿ ನಿಯಾನ್‌ನಲ್ಲಿ ಕೊಹ್ಲಿಯ ಸಹಿಯನ್ನು ಅಲಂಕಾರಿಕವಾಗಿ ಕಾಣಬಹುದಾಗಿದೆ. ಇದು ಫೋಟೋಗಳು ಮತ್ತು ಸೆಲ್ಫಿಗಳಿಗೆ ಆಹ್ವಾನಿಸುವ ಸ್ಥಳವಾಗಿದೆ.
ವಾರದ ದಿನಗಳಲ್ಲಿಯೂ ಸಹ, ರೆಸ್ಟಾರೆಂಟ್ ತುಂಬಿ ತುಳುಕುತ್ತಿರುತ್ತದೆ, ಆಸನಕ್ಕೆ ಹೆಚ್ಚಿನ ಬೇಡಿಕೆಯಿರುವ ಕಾರಣ ಮೊದಲೇ ಬುಕ್ ಮಾಡುವುದು ಉತ್ತಮ.
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗಿನ ಕೊಹ್ಲಿಯ ಒಡನಾಟವು ಅವರಿಗೆ ನಗರದಲ್ಲಿ ಗಮನಾರ್ಹ ಅಭಿಮಾನಿಗಳನ್ನು ಗಳಿಸಿದೆ, ಇದು ಬೆಂಗಳೂರಿಗರಲ್ಲಿ One8 ಕಮ್ಯೂನ್ ಸುತ್ತಲಿನ ಗಣನೀಯ ಆಸಕ್ತಿ ಮತ್ತು ಕುತೂಹಲಕ್ಕೆ ಕಾರಣವಾಗಿದೆ.