MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Food
  • ಬೇಯಿಸಿದ ಆಲೂಗಡ್ಡೆ ಫ್ರಿಜ್‌ನಲ್ಲಿಟ್ಟು ಬಳಸಿದ್ರೆ ಏನಾಗುತ್ತೆ? ಹೀಗಿದ್ದು ಕೆಲಸ್ ಮಾಡ್ಲೇ ಬೇಡಿ

ಬೇಯಿಸಿದ ಆಲೂಗಡ್ಡೆ ಫ್ರಿಜ್‌ನಲ್ಲಿಟ್ಟು ಬಳಸಿದ್ರೆ ಏನಾಗುತ್ತೆ? ಹೀಗಿದ್ದು ಕೆಲಸ್ ಮಾಡ್ಲೇ ಬೇಡಿ

ಬೇಯಿಸಿದ ಆಲೂಗಡ್ಡೆಯನ್ನು ಫ್ರಿಜ್ ನಲ್ಲಿ ಸಂಗ್ರಹಿಸುತ್ತೀರಾ? ಇದು ನಿಜಕ್ಕೂ ದೊಡ್ಡ ತಪ್ಪು. ಯಾಕಂದ್ರೆ ಹೀಗೆ ಮಾಡೋದರಿಂದ ಆಲೂಗಡ್ಡೆಯ ರುಚಿಯೂ ಕೆಡುತ್ತದೆ. ಜೊತೆಗೆ ನಿಮ್ಮ ಆರೋಗ್ಯಕ್ಕೂ ಹಾನಿಯಾಗುತ್ತೆ. ಹಾಗಿದ್ರೆ ಇದನ್ನು ಸಂಗ್ರಹಿಸೋದು ಹೇಗೆ?  

1 Min read
Suvarna News
Published : Dec 01 2023, 03:30 PM IST
Share this Photo Gallery
  • FB
  • TW
  • Linkdin
  • Whatsapp
16

ಅಡುಗೆ ಮಾಡಲು ಸುಲಭವಾಗುತ್ತೆ ಎಂದು ನೀವು ಹೆಚ್ಚು ಆಲೂಗಡ್ಡೆಯನ್ನು (boiled potato) ಒಟ್ಟಿಗೆ ಬೇಯಿಸಿ ಫ್ರಿಜ್ ನಲ್ಲಿ ಸಂಗ್ರಹಿಸುತ್ತೀರಾ? ಹಾಗಿದ್ರೆ ಇದನ್ನು ನೀವು ಓದಲೇಬೇಕು. ಏಕೆಂದರೆ ಬೇಯಿಸಿದ ಆಲೂಗಡ್ಡೆಯನ್ನು ಸಂಗ್ರಹಿಸುವ ಸರಿಯಾದ ವಿಧಾನ ಮತ್ತು ಅದನ್ನು ಫ್ರಿಜ್ ನಲ್ಲಿ ಸಂಗ್ರಹಿಸುವುದರಿಂದ ಉಂಟಾಗುವ ಹಾನಿ ಅಷ್ಟಿಷ್ಟಲ್ಲ.

26

ಬೇಯಿಸಿದ ಆಲೂಗಡ್ಡೆಯನ್ನು ಬಹುತೇಕ ಪ್ರತಿ ಮನೆಯಲ್ಲೂ ಅಡುಗೆಯಲ್ಲಿ ಬಳಸುತ್ತಾರೆ. ಏಕೆಂದರೆ ಇದು ಸಸ್ಯಾಹಾರಿಯಿಂದ ಮಾಂಸಾಹಾರದವರೆಗೆ ಎಲ್ಲಾ ರೀತಿಯ ಆಹಾರಗಳೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಆದರೆ ಅದರ ಸಂಗ್ರಹದ ವಿಷಯಕ್ಕೆ ಬಂದಾಗ, ಹೆಚ್ಚಿನ ಜನರು ತಪ್ಪು ಮಾಡುತ್ತಾರೆ. ಅದರ ತಾಜಾತನವನ್ನು ಕಾಪಾಡಿಕೊಳ್ಳಲು, ಬೇಯಿಸಿದ ಆಲೂಗಡ್ಡೆಯನ್ನು ಫ್ರಿಜ್ನಲ್ಲಿ ಸಂಗ್ರಹಿಸೋದು ತುಂಬಾ ದೊಡ್ಡ ತಪ್ಪು ಮತ್ತು ಹಾನಿಕಾರಕ ಮಾರ್ಗ. ಇದರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ನೋಡೋಣ. 

36

ವಿನ್ಯಾಸ ಹದಗೆಡುತ್ತದೆ
ಫ್ರಿಜ್‌ನಲ್ಲಿ ಅತಿಯಾದ ಶೀತದಿಂದಾಗಿ ಬೇಯಿಸಿದ ಆಲೂಗಡ್ಡೆ ಕೆಟ್ಟದಾಗಿ ಕಾಣಿಸುತ್ತದೆ. ಅದರಲ್ಲಿರುವ ಪಿಷ್ಟ ಹೆಚ್ಚು ಸ್ಫಟಿಕ ರೂಪಕ್ಕೆ ಬದಲಾಗುವ ಮೂಲಕ, ಅದು ಮೂಲ ವಿನ್ಯಾಸವನ್ನು (spoils the texture) ಕಳೆದುಕೊಳ್ಳುತ್ತದೆ. 

46

ವಿಚಿತ್ರ ರುಚಿ 
ಫ್ರಿಜ್‌ನಲ್ಲಿಟ್ಟ ಬೇಯಿಸಿದ ಆಲೂಗಡ್ಡೆ ತಮ್ಮ ಮೂಲ ರುಚಿಯನ್ನು (taste changes) ಕಳೆದುಕೊಳ್ಳುತ್ತದೆ. ತಂಪಿನ ಕಾರಣದಿಂದ ಹೆಚ್ಚು ಮೃದುವಾಗುತ್ತದೆ ಮತ್ತು ವಿಚಿತ್ರ ರುಚಿ ನೀಡುತ್ತದೆ. ಕೆಲವೊಮ್ಮೆ ತಿನ್ನಲು ಸಾಧ್ಯ ಆಗದೇ ಇರುವಷ್ಟು ಕೆಟ್ಟ ರುಚಿ ಹೊಂದಿರುತ್ತೆ.

56

ಆರೋಗ್ಯಕ್ಕೆ ಹಾನಿಕಾರಕ 
ಬೇಯಿಸಿದ ಆಲೂಗಡ್ಡೆಯನ್ನು ತಂಪಾಗಿಸುವುದು ಮತ್ತು ನಂತರ ಅವುಗಳನ್ನು ಮತ್ತೆ ಬಿಸಿ ಮಾಡುವುದು ಅದರಲ್ಲಿ ಅಕ್ರಿಲಾಮೈಡ್ ಮಟ್ಟ ಹೆಚ್ಚಿಸುತ್ತದೆ. ಇದರಿಂದ ಆರೋಗ್ಯಕ್ಕೆ ಹಾನಿಕಾರಕ. (health effect) ಇದಲ್ಲದೆ, ಆಲೂಗಡ್ಡೆಯನ್ನು ಫ್ರಿಜ್ನಲ್ಲಿ ಸಂಗ್ರಹಿಸುವುದರಿಂದ ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ.

66

ಸರಿಯಾದ ಮಾರ್ಗ
ಮೊದಲನೆಯದಾಗಿ, ನಿಮಗೆ ಅಗತ್ಯವಿರುವಂತೆ ಮಾತ್ರ ಆಲೂಗಡ್ಡೆಯನ್ನು ಬೇಯಿಸಲು ಪ್ರಯತ್ನಿಸಿ. ಒಂದು ವೇಳೆ ಬೇಯಿಸಿದ ಆಲೂಗಡ್ಡೆ ಉಳಿದು ಬಿಟ್ಟರೆ ಅದನ್ನು ಸಾಮಾನ್ಯ ಕೋಣೆಯ ತಾಪಮಾನದಲ್ಲಿ ಇರಿಸಿ. ಇದನ್ನು ದೊಡ್ಡ ಪಾತ್ರೆಯಲ್ಲಿ ಹರಡಿ ಮತ್ತು ಸಿಪ್ಪೆ ಹಾಗೆಯೇ ಇರಲಿ. ಆದರೆ ಆದಷ್ಟು ಬೇಗ ಅದನ್ನು ಬಳಕೆ ಮಾಡೋದು ಉತ್ತಮ. 

About the Author

SN
Suvarna News
ಆಹಾರ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved