2 ಸ್ಪೂನ್ ಎಣ್ಣೆಗೆ ಸಾಸವೆ, ಜೀರಿಗೆ ಹಾಕಿ ತಯಾರಿಸಿಕೊಳ್ಳಿ ರುಚಿಯಾದ ಪಿಕಲ್ ರೈಸ್; ಯಾವ ತರಕಾರಿಯೂ ಬೇಡ!
ತರಕಾರಿ ಬೆಲೆ ಏರಿಕೆಯಿಂದಾಗಿ ತಿಂಡಿ ಏನು ಮಾಡಬೇಕೆಂದು ಚಿಂತಿಸುತ್ತಿದ್ದೀರಾ? ಯಾವುದೇ ತರಕಾರಿ ಇಲ್ಲದೆ ಕಡಿಮೆ ಸಮಯದಲ್ಲಿ ರುಚಿಕರವಾದ ಪಿಕಲ್ ರೈಸ್ ಮಾಡುವ ವಿಧಾನ ಇಲ್ಲಿದೆ.

ತರಕಾರಿ ಬೆಲೆ ಕೇಳಿದ್ರೆ ಜೇಬು ಬಿಸಿಯಾಗುವ ಕಾಲ ಬಂದಿದೆ. ಯಾವ ತರಕಾರಿ ಬೆಲೆ ಕೇಳಿದ್ರೂ 100 ರೂ.ಗಿಂತಲೂ ಅಧಿಕವಾಗಿದೆ. ಇಂದು ನಾವು ನಿಮಗೆ ಯಾವುದೇ ತರಕಾರಿ ಇಲ್ಲದೇ ಅಥವಾ ಕಡಿಮೆ ತರಕಾರಿ ಬಳಸಿ ತಿಂಡಿ ಹೇಗೆ ಮಾಡೋದು ಅಂತ ಹೇಳಿಕೊಡುತ್ತಿದ್ದೇವೆ.
vegitable
ಕಳೆದ ಕೆಲವು ದಿನಗಳಿಂದ ತರಕಾರಿ ಬೆಲೆ ಏರಿಕೆಯಾಗುತ್ತಿದೆ. ಹಾಗೆ ಬೆಳಗ್ಗೆ ತಿಂಡಿ ಏನು ಮಾಡೋದು ಅನ್ನೋದು ಗೃಹಿಣಿಯರಿಗೆ ಅತಿದೊಡ್ಡ ಸವಾಲು. ಯಾವುದೇ ತರಕಾರಿ ಇಲ್ಲದೇ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಟೇಸ್ಟಿ ತಿಂಡಿ ಬಗ್ಗೆ ಹೇಳುತ್ತಿದ್ದೇವೆ.
ಬೇಕಾಗುವ ಸಾಮಾಗ್ರಿಗಳು
ಪಿಕಲ್ ರೈಸ್ ಮಾಡಲು ಬೇಕಾಗುವ ಸಾಮಾಗ್ರಿಗಳು
ಉಪ್ಪಿನಕಾಯಿ ಗ್ರೇವಿ: 2 ಟೀ ಸ್ಪೂನ್, ಬಿಸಿ ಅನ್ನ: 1 ಕಪ್, ಸಾಸವೆ: 1/2 ಟೀ ಸ್ಪೂನ್, ಜೀರಿಗೆ: 1 ಟೀ ಸ್ಪೂನ್, ಕರೀಬೇವು: 4 ರಿಂದ 5 ಎಲೆ, ಎಣ್ಣೆ: 1 ಟೀ ಸ್ಪೂನ್, ಬ್ಯಾಡಗಿ ಮೆಣಸಿನಕಾಯಿ: 2, ಇಂಗು: ಎರಡು ಚಿಟಿಕೆ, ಉದ್ದಿನಬೇಳೆ: 1 ಟೀ ಸ್ಪೂನ್, ಕಡಲೆಬೇಳೆ: 1/2 ಟೀ ಸ್ಪೂನ್, ಬೆಳ್ಳುಳ್ಳಿ:4, ಕೋತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು
ಪಿಕಲ್ ರೈಸ್ ಮಾಡುವ ವಿಧಾನ
ಪಿಕಲ್ ರೈಸ್ ಮಾಡುವ ವಿಧಾನ
ಮೊದಲಿಗೆ ಒಂದು ಕಪ್‌ನಷ್ಟು ಅನ್ನ ಮಾಡ್ಕೊಂಡು ಎತ್ತಿಟ್ಟುಕೊಳ್ಳಿ. ಆನಂತರ ಒಲೆ ಆನ್ ಮಾಡ್ಕೊಂಡು ಬಾಣಲೆ ಇರಿಸಿಕೊಳ್ಳಿ. ಬಾಣಲೆಗೆ 1 ಟೀ ಸ್ಪೂನ್ ಅಡುಗೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸವೆ ಮತ್ತು ಜೀರಿಗೆ ಹಾಕಿ. ಆ ಬಳಿಕ ಉದ್ದಿನಬೇಳೆ ಮತ್ತು ಕಡಲೆಬೇಳೆ ಸೇರಿಸಿಕೊಳ್ಳಿ.
ಉದ್ದಿನಬೇಳೆ ಮತ್ತು ಕಡಲೆಬೇಳೆ ಕಂದು ಬಣ್ಣಕ್ಕೆ ಬರುತ್ತಿದ್ದಂತೆ ತರಿತರಿಯಾಗಿ ಜಜ್ಜಿದ ಬೆಳ್ಳುಳ್ಳಿ ಮತ್ತು ಕರೀಬೇವು ಸೇರಿಸಿಕೊಂಡು ಚೆನ್ನಾಗಿ ಬಿಸಿ ಮಾಡಿಕೊಳ್ಳಬೇಕು. ಈಗ ಬ್ಯಾಡಗಿ ಮೆಣಸಿನಕಾಯಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಒಗ್ಗರಣೆ ಸೇರಿಸಿ ಮಿಕ್ಸ್ ಮಾಡಿ. ಆನಂತರ ಇಂಗು ಮತ್ತು ರುಚಿಗೆ ಉಪ್ಪು ಹಾಕಿದ ನಂತರ ಒಲೆ ಆಫ್ ಮಾಡಿಕೊಳ್ಳಬೇಕು.
Pickle Rice
ಕೊನೆಗೆ ಈ ಒಗ್ಗರಣೆಗೆ ತೆಗೆದುಕೊಟ್ಟಿಕೊಂಡಿರುವ ಉಪ್ಪಿನಕಾಯಿ ಗ್ರೇವಿ ಸೇರಿಸಿ ಮಿಕ್ಸ್ ಮಾಡಬೇಕು. ಕೊನೆಗೆ ಇದಕ್ಕೆ ಅನ್ನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಕೊನೆಗೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಕೋತಂಬರಿ ಸೊಪ್ಪು ಸೇರಿಸಿದ್ರೆ ತರಕಾರಿ ಇಲ್ಲದ ರುಚಿಯಾದ ಪಿಕಲ್ ರೈಸ್ ಸವಿಯಲು ಸಿದ್ಧವಾಗುತ್ತದೆ. (ಬೇಕಿದ್ರೆ ಬೆಳ್ಳುಳ್ಳಿ, ಉದ್ದಿನಬೇಳೆ ಮತ್ತು ಕಡಲೆಬೇಳೆನ್ನು ಸ್ಕಿಪ್ ಮಾಡಬಹುದು. ಸಿಹಿ ಇಷ್ಟಪಡ್ತಿದ್ರೆ ಅರ್ಧ ಚಮದಷ್ಟು ಸಕ್ಕರೆ ಸೇರಿಸಿಕೊಳ್ಳಬಹುದು)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.