ನೀವು ಖರೀದಿ ಮಾಡುವ ಮೊಟ್ಟೆ ಅಸಲಿಯೋ? ನಕಲಿಯೋ? ತಿಳಿಯಲು ಈ ಟ್ರಿಕ್ಸ್ ಫಾಲೋ ಮಾಡಿ
ಅಸಲಿ ಮೊಟ್ಟೆ vs ನಕಲಿ ಮೊಟ್ಟೆ: ಮಾರ್ಕೆಟ್‌ನಲ್ಲಿ ನಕಲಿ ಮೊಟ್ಟೆಗಳು ತುಂಬಾ ಸಿಗ್ತಾ ಇವೆ. ಇವುಗಳನ್ನ ತಿಂದ್ರೆ ಹೆಲ್ತ್‌ಗೆ ತುಂಬಾ ಡೇಂಜರ್. ಹಾಗಾಗಿ ನಕಲಿ ಮೊಟ್ಟೆಗಳನ್ನು ಹೇಗೆ ಗುರುತಿಸೋದು ಅಂತ ಈ ಪೋಸ್ಟ್‌ನಲ್ಲಿ ನೋಡೋಣ.
ಅಸಲಿ vs ನಕಲಿ ಮೊಟ್ಟೆ
ಮಾರ್ಕೆಟ್‌ನಲ್ಲಿ ನಕಲಿ ಮೊಟ್ಟೆಗಳ ಹೆಚ್ಚಳವಾಗಿದೆ. ಅಸಲಿ ಮೊಟ್ಟೆಗಳಂತೆಯೇ ಕಾಣುವ ಈ ನಕಲಿ ಮೊಟ್ಟೆಗಳ ಸಂಖ್ಯೆ ಹೆಚ್ಚಳಗೊಂಡಿದೆ.
ನಕಲಿ ಮೊಟ್ಟೆ ಗುರುತಿಸುವುದು ಹೇಗೆ
ನಕಲಿ ಮೊಟ್ಟೆಯನ್ನು ಹೊರಗಿನಿಂದ ನೋಡಿ ಗುರುತಿಸೋದು ಕಷ್ಟ. ಜನ ಈ ಮೊಟ್ಟೆಗಳನ್ನು ತೆಗೆದುಕೊಂಡು ಮೋಸ ಹೋಗ್ತಾರೆ. ನಕಲಿ ಮೊಟ್ಟೆಗಳ ಸೇವನೆ ಆರೋಗ್ಯಕ್ಕೂ ಅಪಾಯಕಾರಿ.
ಪ್ಲಾಸ್ಟಿಕ್ ಮೊಟ್ಟೆ, ಅಸಲಿ vs ನಕಲಿ
ಸ್ಪೆಷಲ್ ಕೆಮಿಕಲ್ಸ್‌ಗಳಿಂದ ಈ ಮೊಟ್ಟೆಗಳನ್ನು ತಯಾರಿಸಲಾಗುತ್ತದೆ. ದೇಶದ ಹಲವು ಮಾರ್ಕೆಟ್‌ಗಳಲ್ಲಿ ಈ ನಕಲಿ ಮೊಟ್ಟೆಗಳು ಮಾರಾಟವಾಗುತ್ತಿರುವ ಮಾತುಗಳು ಕೇಳಿ ಬಂದಿವೆ.
ಅಸಲಿ - ನಕಲಿ ಮೊಟ್ಟೆಗಳ ವ್ಯತ್ಯಾಸ
ಈ ಮೊಟ್ಟೆ ಅಸಲಿಯೋ ಅಥವಾ ನಕಲಿಯೋ ಅಂತ ಹೇಗೆ ಗುರುತಿಸೋದು? ಚೆನ್ನಾಗಿ ಗಮನಿಸಿದರೆ ವ್ಯತ್ಯಾಸ ಗೊತ್ತಾಗುತ್ತದೆ. ಖರೀದಿ ಅಥವಾ ಅಡುಗೆ ಮಾಡುವ ಸಂದರ್ಭದಲ್ಲಿ ಮೊಟ್ಟೆ ಅಸಲಿಯೋ? ನಕಲಿಯೋ ಎಂಬುದನ್ನು ಪತ್ತೆ ಮಾಡಬಹುದು.
ಮೊಟ್ಟೆ ಚಿಪ್ಪಿನ ಗುಣಲಕ್ಷಣ
ಅಸಲಿ ಮೊಟ್ಟೆಯ ಚಿಪ್ಪು ಸ್ವಲ್ಪ ಒರಟಾಗಿರುತ್ತದೆ. ಆದರೆ, ಪ್ಲಾಸ್ಟಿಕ್ ಮೊಟ್ಟೆಯ ಚಿಪ್ಪು ಮೃದುವಾಗಿರುತ್ತದೆ. ಈ ಮೂಲಕ ಮೊಟ್ಟೆ ಅಸಲಿಯೋ ಅಥವಾ ನಕಲಿ ಎಂದು ಕಂಡು ಹಿಡಿಯಬಹುದು.
ಮೊಟ್ಟೆಯ ತೂಕ
ಪ್ಲಾಸ್ಟಿಕ್ ಮೊಟ್ಟೆ ಅಸಲಿ ಮೊಟ್ಟೆಗಿಂತ ತೂಕದಲ್ಲಿ ತುಂಬಾ ಕಡಿಮೆ ಇರುತ್ತದೆ. ಚೆನ್ನಾಗಿ ಗಮನಿಸಿದರೆ ವ್ಯತ್ಯಾಸ ಗೊತ್ತಾಗುತ್ತೆ. ಹಾಗಾಗಿ, ಇನ್ಮೇಲೆ ಮೊಟ್ಟೆ ತೆಗೆದುಕೊಳ್ಳುವ ಮುಂಚೆ ಜಾಗ್ರತೆಯಿಂದ ಇರಬೇಕು.