ನೀವು ಬಳಸುವ ತುಪ್ಪ ಶುದ್ದವೋ? ಕಲಬೆರಕೆಯೋ? ಇಲ್ಲಿದೆ ಸಿಂಪಲ್ ಆಗಿ ಕಂಡುಹಿಡಿಯುವ 5 ವಿಧಾನ..
ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ ಬಳಸುತ್ತಿದ್ದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ತುಪ್ಪ ಶುದ್ಧವೇ ಎಂಬ ಅನುಮಾನಗಳು ಹೆಚ್ಚುತ್ತಿವೆ. ಶುದ್ಧ ತುಪ್ಪವನ್ನು ಪತ್ತೆ ಮಾಡುವ 5 ಸರಳ ವಿಧಾನಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ ಬಳಸುತ್ತಿದ್ದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಪತ್ತೆಯಾಗಿರುವುದು ದೃಢವಾಗಿದೆ. ಇದರ ನಡುವೆ ಶುದ್ದ ತುಪ್ಪದ ಬಗ್ಗೆಯೂ ಅನುಮಾನಗಳು ವ್ಯಕ್ತವಾಗದೆ. ಸ್ವತಃ ಟಿಟಿಡಿ ಹೇಳಿರುವ ಪ್ರಕಾರು ಮಾರುಕಟ್ಟೆಯಲ್ಲಿ ಹಸುವಿನ ಶುದ್ದ ತುಪ್ಪಕ್ಕೆ 1 ಕೆಜಿಗೆ 1 ಸಾವಿರ ರೂಪಾಯಿ ಇದೆ. 300-400ರೂಪಾಯಿಗೆ ಮಾರುಕಟ್ಟೆಯಲ್ಲಿ ಸಿಗುವುದು ಶುದ್ದತುಪ್ಪವೇ ಅಲ್ಲ ಎನ್ನುವುದು ವಾದವಾಗಿದೆ. ಹಾಗಾದರೆ, ಶುದ್ದ ತುಪ್ಪವನ್ನು ಪತ್ತೆ ಮಾಡುವುದು ಹೇಗೆ? ನಾವು ಮನೆಯಲ್ಲಿ ಬಳಸುವ ತುಪ್ಪ ಶುದ್ದವೇ? ಎನ್ನುವ ಪ್ರಶ್ನೆಗಳು ಏಳುವುದು ಸಹಜ.
ನಿಮಗೇನಾದರೂ ಇಂಥ ಅನುಮಾನ ಕಾಡುತ್ತಿದ್ದಲ್ಲಿ, ಸಿಂಪಲ್ ಆಗಿ ಮನೆಯಲ್ಲಿಯೇ ನೀವು ಬಳಕೆ ಮಾಡುತ್ತಿರುವ ಶುದ್ದವನ್ನು ಪರೀಕ್ಷೆ ಮಾಡಬಹುದು. ಇಲ್ಲಿ ಅದರ ಐದು ವಿಧಾನಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ. ಆ ಮೂಲಕ ನೀವು ಬಳಸುವ ಶುದ್ದ ತುಪ್ಪವೇ? ಕಲಬೆರಕೆಯೇ? ಎನ್ನುವುದು ಗೊತ್ತು ಮಾಡಿಕೊಳ್ಳಬಹುದು. ನಿಮಗೆ ನೆನಪಿರಲಿ ಇತ್ತೀಚೆಗೆ ಗುಜರಾತ್‌ನಲ್ಲಿ 3 ಸಾವಿರ ಕೆಜಿಯ ಕಲಬೆರಕೆ ತುಪ್ಪವನ್ನು ವಶಪಡಿಸಿಕೊಳ್ಳಲಾಗಿತ್ತು.
ವಾಟರ್ ಟೆಸ್ಟ್: ನೀವು ಮನೆಗೆ ತಂದ ತುಪ್ಪವನ್ನು ಒಂದು ಚಮಚದಲ್ಲಿ ತೆಗೆದುಕೊಂಡು ಶುದ್ದ ನೀರಿನಲ್ಲಿ ಹಾಕಬೇಕು. ಹಾಗೇನಾದರೂ ನೀರಿನಲ್ಲಿ ನೀವು ಹಾಕಿದ ತುಪ್ಪ ತೇಲುತ್ತಿದ್ದರೆ ಅದು ಶುದ್ದವಾಗಿದೆ ಎಂದರ್ಥ.
ಹಾಟ್ ಟೆಸ್ಟ್: ಇನ್ನೊಂದು ಹಾಟ್ ಟೆಸ್ಟ್. ನೀವು ತಂದ ತುಪ್ಪವನ್ನು ಫುಲ್ ಬಿಸಿ ಮಾಡಬೇಕು. ಆ ಬಳಿಕ ಅದನ್ನು ಒಂದು ಗ್ಲಾಸ್‌ನಲ್ಲಿ ಹಾಕಿ ಫ್ರಿಜ್‌ನಲ್ಲಿ ಇಡಬೇಕು. ಹಾಗೇನಾದರೂ ಈ ತುಪ್ಪದಲ್ಲಿ ಸಪರೇಟ್ ಆದ ಲೇಯರ್ ಕಂಡು ಬಂದಲ್ಲಿ ಕಲಬೆರಕೆ ಆಗಿದೆ ಎಂದರ್ಥ. ಬೇರೆ ಯಾವುದಾದರೂ ಎಣ್ಣೆಯನ್ನು ತುಪ್ಪದಲ್ಲಿ ಮಿಶ್ರ ಮಾಡಿರಬಹುದು ಎನ್ನುವ ಸೂಚನೆ ನೀಡುತ್ತದೆ.
ಅಯೋಡಿನ್ ಟೆಸ್ಟ್: ನೀವು ತಂದ ತುಪ್ಪದಲ್ಲಿ ಸಣ್ಣ ಪ್ರಮಾಣದಲ್ಲಿ ಅಯೋಡಿನ್‌ಅನ್ನು ಮಿಶ್ರಣ ಮಾಡಬೇಕು. ಶುದ್ದ ತುಪ್ಪದ ಬಣ್ಣ ಯಾವುದೇ ಕಾರಣಕ್ಕೂ ಬದಲಾಗೋದಿಲ್ಲ. ಇನ್ನು ಕಲಬೆರಕೆ ತುಪ್ಪಕ್ಕೆ ಅಯೋಡಿನ್ ಹಾಕಿ ಮಿಕ್ಸ್ ಮಾಡುವ ವೇಳೆಗಾಗಲೇ ಅದು ನೀಲಿ ಬಣ್ಣಕ್ಕೆ ತಿರುಗುತ್ತದೆ.
ಹಸ್ತ ಪರೀಕ್ಷೆ: ನಾಲ್ಕನೇ ವಿಧ ಎಂದರೆ, ಹಸ್ತ ಪರೀಕ್ಷೆ. ತಂದ ತುಪ್ಪವನ್ನು ಸರಿಯಾಗಿ ನಿಮ್ಮ ಹಸ್ತದ ಮಧ್ಯಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಾಕಬೇಕು. ಶುದ್ದ ತುಪ್ಪ, ಕರಗಿ ಬೀಳಲು ಆರಂಭವಾಗುತ್ತದೆ. ಎಷ್ಟು ಬೇಗ ಕರಗುತ್ತದೆಯೋ ಅಷ್ಟು ಶುದ್ದವಾದ ತುಪ್ಪ ಎಂದರ್ಥ. ಕಲಬೆರಕೆಯಾಗಿರುವ ತುಪ್ಪ ಬೇಗ ಕರಗುವುದಿಲ್ಲ.
ಇದನ್ನೂ ಓದಿ: ತಿರುಪತಿಗೆ ಹೋದಾಗ 'ಮುಡಿ' ಕೊಡೋದು ಏಕೆ? ಕೂದಲು ಮಾರಾಟದಿಂದಲೇ ಕೋಟಿ ಕೋಟಿ ಗಳಿಸುವ ಟಿಟಿಡಿ!
ಎಚ್‌ಸಿಎಲ್ ಟೆಸ್ಟ್: ಕೊನೆಯ ಟೆಸ್ಟ್ ಏನೆಂದರೆ, ಎಚ್‌ಸಿಎಲ್ ಟೆಸ್ಟ್. ತುಪ್ಪದಲ್ಲಿ ಕೊಂಚ ಪ್ರಮಾಣದ ಹೈಡ್ರೋಕ್ಲೋರಿಕ್ ಆಸಿಡ್‌ಅನ್ನು ಹಾಕಬೇಕು. ಶುದ್ದ ತುಪ್ಪದ ಬಣ್ಣ ಯಾವುದೇ ಕಾರಣಕ್ಕೂ ಬದಲಾಗೋದಿಲ್ಲ. ಆದರೆ, ಕಲಬೆರಕೆ ತುಪ್ಪ ಕೆಂಪು ಬಣ್ಣಕ್ಕೆ ಬದಲಾಗುತ್ತದೆ.
ಇದನ್ನೂ ಓದಿ: ತಿರುಪತಿಯ 'ನಾನ್‌ವೆಜ್..' ಪ್ರಸಾದ ತಿಂದ ಪಾಪ ಕಾಡ್ತಿದ್ಯಾ? ದೈವಜ್ಞ ಸೋಮಯಾಜಿ ಪರಿಹಾರ ಹೇಳಿದ್ದಾರೆ ನೋಡಿ..