ಹಾಲಿನ ಪುಡಿಯಿಂದ ರಸಮಲೈ ಮಾಡೋ ಸುಲಭ ವಿಧಾನ ಇಲ್ಲಿದೆ!
ರಸಮಲೈ ಎಂಬುದು ಮೃದುವಾದ ಮಿಲ್ಕ್ ಡಂಪಿಂಗ್ ಸ್ವೀಟ್. ಇದನ್ನು ಹಾಲಿನಿಂದ ತಯಾರಿಸಲಾಗುತ್ತೆ. ಇದು ಬಹಳ ವಿಶಿಷ್ಟವಾದ ವಿನ್ಯಾಸ ಮತ್ತು ಪರಿಮಳ ಹೊಂದಿದೆ. ಇದರ ಟೇಸ್ಟ್ ತುಂಬಾ ಚೆನ್ನಾಗಿರುತ್ತೆ. ನೀವು ರಸಮಲೈ ಇಷ್ಟಪಡುವವರಾಗಿದ್ರೆ ಮತ್ತು ಈ ಮೃದುವಾದ ಸಿಹಿ ಡಂಪಿಂಗನ್ನು ಸುಲಭ ರೀತಿಯಲ್ಲಿ ಹೇಗೆ ತಯಾರಿಸೋದು ಅನ್ನೋದನ್ನು ಇಲ್ಲಿ ತಿಳಿಸ್ತೀವಿ ನೋಡಿ…
ನೀವು ಹಲವಾರು ಬಾರಿ ರಸ್ ಮಲೈಯನ್ನು ತಿಂದಿರಬಹುದು. ಇದರ ಸ್ವಾದಿಷ್ಟ ರುಚಿ, ಇದನ್ನ ಮತ್ತೆಮತ್ತೆ ತಿನ್ನುವಂತೆ ಮಾಡುತ್ತೆ. ರಸಮಲೈಯನ್ನು(Rasmalai) ಕುದಿಸಿ ಸೋಸಿದ ಹಾಲಿನಿಂದ ತಯಾರಿಸಲಾಗುತ್ತೆ. ಇಲ್ಲಿ ನಾವು ಹಾಲಿನ ಪುಡಿಯಿಂದ ಹೇಗೆ ರಸಮಲೈ ಮಾಡೋದು ಎಂದು ತಿಳಿಯೋಣ. ಇದು ತುಂಬಾ ಸುಲಭ ವಿಧಾನವಾಗಿದೆ. ಜೊತೆಗೆ ಇದು ಉತ್ತಮ ರಿಸಲ್ಟ್ ಕೂಡ ಕೊಡುತ್ತೆ.
ರಸಮಲೈನ ಈ ಸಿಂಪಲ್ ಮತ್ತು ಈಸಿ ರೆಸಿಪಿಯನ್ನು(Recipe) ಆನಂದಿಸಿ. ನೀವು ಇದನ್ನು ಮನೆಯಲ್ಲಿ ಮಾಡಿ ನೋಡಿ, ನೀವು ಮತ್ತೆ ಮತ್ತೆ ಹೆಚ್ಚು ಹೆಚ್ಚು ರಸಮಲೈ ತಿನ್ನೋದಂತೂ ಗ್ಯಾರಂಟಿ. ಇನ್ನೇಕೆ ತಡ ಹೇಗೆ ಮಾಡೋದು ಬನ್ನಿ ನೋಡೋಣ…
ಹಾಲಿನ ಪುಡಿ ಬಳಸಿ ರಸಮಲೈ ಮಾಡಲು ಬೇಕಾದ ವಸ್ತುಗಳು ಹೀಗಿವೆ
ಈ ರಸಮಲೈ ತಯಾರಿಸಲು ಮೊದಲು ಬೇಕಾಗಿರೋದು ಹಾಲಿನ ಪುಡಿ(Milk powder). ಜೊತೆಗೆ ಮೊಟ್ಟೆ, ಬೇಕಿಂಗ್ ಪೌಡರ್, ಮೈದಾ, ಹಾಲು ಮತ್ತು ಸಕ್ಕರೆ ಬೇಕು. ಈ ಪದಾರ್ಥಗಳೊಂದಿಗೆ ನೀವು ಉತ್ತಮ ರುಚಿಯಾದ ರಸಮಲೈ ತಯಾರಿಸಬಹುದು.
ಜೊತೆಗೆ, ರಸಮಲೈಗೆ ವಿಶಿಷ್ಟ ಪರಿಮಳ ಮತ್ತು ರುಚಿ ನೀಡಬೇಕೆಂದು ಬಯಸಿದ್ರೆ ಏಲಕ್ಕಿ, ಒಂದು ಚಿಟಿಕೆ ಉಪ್ಪು, ಬೆರಳೆಣಿಕೆಯಷ್ಟು ಡ್ರೈ ಫ್ರೂಟ್ಸ್(Dry fruits) (ಪಿಸ್ತಾ ಅಥವಾ ಬಾದಾಮಿ) ಮತ್ತು ಒಂದು ಚಿಟಿಕೆ ಕೇಸರಿಯನ್ನು ಸೇರಿಸಬಹುದು. ಇದರಿಂದ ರುಚಿ ಮತ್ತಷ್ಟು ಹೆಚ್ಚುತ್ತೆ.
ಫುಲ್ ಫ್ಯಾಟ್ / ಹೋಲ್ ಮಿಲ್ಕ್ ಪೌಡರ್ ಯೂಸ್ ಮಾಡಿ. ನೀವು ಸೆಮಿ-ಸ್ಕಿಮ್ಡ್ ಹಾಲಿನ ಪುಡಿಯನ್ನು ಬಳಸಬಹುದಾದರೂ, ಇದು ಹಿಟ್ಟನ್ನು ಸ್ವಲ್ಪ ಮೃದುವಾಗಿಸುತ್ತೆ, ಆದರೆ ನಯವಾಗಿರೋದಿಲ್ಲ. ಮತ್ತು ಇದು ರುಚಿ ಮತ್ತು ವಿನ್ಯಾಸದಲ್ಲಿ ಹಗುರವಾದ ರಸಮಲೈ ನೀಡುತ್ತೆ. ಹಾಗೆ ಅವುಗಳನ್ನು ಕುದಿಸಿದಾಗ, ಹಾಲಿನ ತಾಪಮಾನವು ತುಂಬಾ ಬಿಸಿಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಇಲ್ಲದಿದ್ರೆ ನಿಮ್ಮ ರಸಮಲೈನ ಒಳಭಾಗವು ಹಾರ್ಡ್(Hard) ಆಗುತ್ತೆ ಮತ್ತು ಕಂದು ಬಣ್ಣದ್ದಾಗಿರುತ್ತೆ.
ರಸಮಲೈ ತಯಾರಿಸೋದು ಹೇಗೆ?
ಮೊದಲಿಗೆ ಹಾಲಿನ ಪುಡಿ ಮತ್ತು ಬೇಕಿಂಗ್ ಪೌಡರನ್ನು ಮಿಶ್ರಣ ಮಾಡಿ. ನಂತರ ಮೊಟ್ಟೆಗಳನ್ನು ಒಡೆದು ಹಾಲಿನ ಪುಡಿ ಮಿಶ್ರಣಕ್ಕೆ ಸೇರಿಸಿ, ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ಎರಡು ಚಮಚ ಮೈದಾ ಹಿಟ್ಟು ಬೆರೆಸಿ ಚೆನ್ನಾಗಿ ನಾದಿ. ಈಗ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಸಣ್ಣ ದುಂಡಗಿನ ಬಾಲ್(Ball) ಮಾಡಿ. ನಂತರ ಅದನ್ನು ಲಘುವಾಗಿ ಚಪ್ಪಟೆ ಮಾಡಿ. ಇದರ ದಪ್ಪ ಸುಮಾರು 0.7-1 ಸೆಂ.ಮೀ ಇರಬೇಕು. ಎಲ್ಲಾ ಹೊಂದುಕೊಳ್ಳೋವರೆಗೂ ಶೇಪ್ ಮಾಡಿ. ಪಕ್ಕಕ್ಕೆ ಇಡಿ.
ನಂತರ, ಫುಲ್ ಫ್ಯಾಟ್ / ಹೋಲ್ ಮಿಲ್ಕ್, ಸಕ್ಕರೆ ಮತ್ತು ಏಲಕ್ಕಿಯನ್ನು ಕುದಿಯುವವರೆಗೆ ಹೆಚ್ಚಿನ ಶಾಖದಲ್ಲಿ ಬಿಸಿ ಮಾಡಿ. ಹಾಲು (Milk) ಕುದಿಯುವ ಹಂತ ತಲುಪಿದ ತಕ್ಷಣ, ಫ್ಲೇಮ್ ಕಡಿಮೆ ಮಾಡಿ ಹಾಲಿನ ಉಂಡೆಗಳನ್ನು ಕುದಿಯುವ ಹಾಲಿಗೆ ಹಾಕಿ. ಅವುಗಳನ್ನು ಸುಮಾರು 5 ನಿಮಿಷಗಳ ಕಾಲ ಕಡಿಮೆ ಶಾಖದಲ್ಲಿ ಬೇಯಲು ಬಿಡಿ.
ಈಗ ಪಾತ್ರೆಯ ಮುಚ್ಚಳ ಮುಚ್ಚಿ ಮತ್ತು ಸುಮಾರು 15-20 ನಿಮಿಷಗಳ ಕಾಲ ಬೇಯಲು ಬಿಡಿ. ಆದರೆ ಪ್ರತಿ ಐದು ನಿಮಿಷಗಳಿಗೊಮ್ಮೆ ಓಪನ್ ಮಾಡಿ ಮತ್ತು ಹಾಲಿನ ಬಾಲ್ ಗಳನ್ನು(Milk ball) ಮೆಲ್ಲನೆ ತಿರುಗಿಸಿ. ಅವು ಸರಿಯಾಗಿ ಬೆಂದಿದೆಯೇ ನೋಡಿ. ಅದು ಬೆಂದ ನಂತರ, ಗ್ಯಾಸ್ ಸ್ವಿಚ್ ಆಫ್ ಮಾಡಿ ಮತ್ತು ಕನಿಷ್ಠ 10 ನಿಮಿಷಗಳ ಕಾಲ ಅದು ತಣ್ಣಗಾಗಲು ಬಿಡಿ.
ಈಗ ರಸಮಲೈಯನ್ನು ಸರ್ವಿಂಗ್ ಬೌಲ್ ಗೆ ಹಾಕಿ ಮತ್ತು ನಂತರ ನುಣ್ಣಗೆ ಕತ್ತರಿಸಿದ ಪಿಸ್ತಾ ಮತ್ತು ಬಾದಾಮಿ ಫ್ಲೇಕ್ಸ್(Flacks) ಅಥವಾ ನಿಮಗೆ ಇಷ್ಟವಾದ ಯಾವುದೇ ಬೀಜಗಳಿಂದ ಅಲಂಕರಿಸಿ. ಮತ್ತು ಒಂದು ಚಿಟಿಕೆ ಕೇಸರಿ ದಳಗಳನ್ನು ಸಹ ಸೇರಿಸಿ. ರಸಮಲೈ ಸಂಪೂರ್ಣವಾಗಿ ಕೂಲ್ ಆದ ನಂತರ ಅದನ್ನು ತಿಂದು ಆನಂದಿಸಿ.