MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Food
  • Health Tips: ತೆಂಗಿನಕಾಯಿ ನೀರಲ್ಲಷ್ಟೇ ಅಲ್ಲ ಗಂಜಿಯಲ್ಲಿದೆ ಆರೋಗ್ಯದ ಗುಟ್ಟು

Health Tips: ತೆಂಗಿನಕಾಯಿ ನೀರಲ್ಲಷ್ಟೇ ಅಲ್ಲ ಗಂಜಿಯಲ್ಲಿದೆ ಆರೋಗ್ಯದ ಗುಟ್ಟು

ತೆಂಗಿನಕಾಯಿ ನೀರು ಅದೆಷ್ಟು ರುಚಿಕರವಾಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಹಾಗೆಯೇ ತೆಂಗಿನಕಾಯಿ ಗಂಜಿ ಕೂಡಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅನ್ನೋದು ನಿಮ್ಗೆ ಗೊತ್ತಿದ್ಯಾ. ಆ ಬಗ್ಗೆ ಇಲ್ಲಿದೆ ಮಾಹಿತಿ.

2 Min read
Vinutha Perla
Published : Apr 01 2023, 07:00 AM IST
Share this Photo Gallery
  • FB
  • TW
  • Linkdin
  • Whatsapp
17

ತೆಂಗಿನಕಾಯಿ ಅಥವಾ ಎಳನೀರು ಬಹುತೇಕರಿಗೆ ಇಷ್ಟವಾಗುತ್ತದೆ. ಆದರೆ ಹೆಚ್ಚಿನವರು ಬರೀ ಇದರ ನೀರನ್ನಷ್ಟೇ ಕುಡಿಯುತ್ತಾರೆ. ಅದರಲ್ಲೂ ಬೇಸಿಗೆಯ ಧಗೆಗೆ ಈ ಪಾನೀಯ ತುಂಬಾ ಆರೋಗ್ಯಕರವಾಗಿದೆ. ಆದರೆ ಎಳನೀರು ಮಾತ್ರವಲ್ಲ ಅದರ ಗಂಜಿ ಅಥವಾ ತೆಂಗಿನಕಾಯಿಯ ತಿರುಳು ಆರೋಗ್ಯಕ್ಕೆಷ್ಟು ಒಳ್ಳೇದು ನಿಮಗೆ ಗೊತ್ತಿದೆಯಾ? 

27

ಎಳನೀರಿನ ಗಂಜಿ ಅಥವಾ ತೆಂಗಿನಕಾಯಿಯ ತಿರುಳು ಮಧ್ಯಮ ಸರಣಿ ಟ್ರೈಗ್ಲಿಸರೈಡ್‌ಗಳು, ಲಾರಿಕ್ ಆಮ್ಲ ಮತ್ತು ಇತರ ಪ್ರಯೋಜನಕಾರಿ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ. ಆಹಾರ ತಜ್ಞ ಮತ್ತು ಪೌಷ್ಟಿಕತಜ್ಞ ಅವ್ನಿ ಕೌಲ್ ಅವರು ಇದರ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ವಿವರಿಸಿದ್ದಾರೆ.

37

1. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ
ಸ್ಯಾಚುರೇಟೆಡ್ ಕೊಬ್ಬುಗಳಲ್ಲಿ ಅಧಿಕವಾಗಿದ್ದರೂ, ತೆಂಗಿನಕಾಯಿ ಗಂಜಿ ಹೃದಯದ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ತೆಂಗಿನಕಾಯಿ ಮಲೈನಲ್ಲಿರುವ ಅಂಶ ಕಡಿಮೆ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳಿಗೆ ಸಂಬಂಧಿಸಿವೆ, ಹೆಚ್ಚುವರಿಯಾಗಿ, ತೆಂಗಿನಕಾಯಿ ಮಲೈನಲ್ಲಿರುವ ಲಾರಿಕ್ ಆಮ್ಲವು ರಕ್ತದೊತ್ತಡದ ಮಟ್ಟವನ್ನು ಸುಧಾರಿಸುತ್ತದೆ, ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

47

2. ತೂಕ ನಷ್ಟಕ್ಕೆ ಒಳ್ಳೆಯದು
ತೆಂಗಿನ ಮಲೈನಲ್ಲಿರುವ ಗಂಜಿ ಹಸಿವನ್ನು ಕಡಿಮೆ ಮಾಡುತ್ತದೆ. ಇದರ ಸೇವನೆಯಿಂದ ಆಗಾಗ ಹಸಿವಾಗುವುದು ತಪ್ಪುವ ಕಾರಣ ಮತ್ತೆ ಮತ್ತೆ ತಿನ್ನುವಂತೆ ಅನಿಸುವುದಿಲ್ಲ. ಇದರಿಂದ ಸಹಜವಾಗಿಯೇ ನಾವು ಕಡಿಮೆ ಪ್ರಮಾಣದಲ್ಲಿ ತಿನ್ನುತ್ತೇನೆ. ಹೀಗಾಗಿ ತೂಕ ಹೆಚ್ಚಳದ ಭಯವಿಲ್ಲ. ಇತರ ರೀತಿಯ ಕೊಬ್ಬುಗಳಿಗೆ ಹೋಲಿಸಿದರೆ ತೆಂಗಿನಕಾಯಿ ಮಲೈ ಅನ್ನು ಆಹಾರದಲ್ಲಿ ಸೇರಿಸುವುದರಿಂದ ಹೆಚ್ಚಿನ ತೂಕ ನಷ್ಟ ಮತ್ತು ಸೊಂಟದ ಸುತ್ತಳತೆ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.

57

3. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಜರ್ನಲ್ ಆಫ್ ಕಾಂಪ್ಲಿಮೆಂಟರಿ ಅಂಡ್ ಇಂಟಿಗ್ರೇಟಿವ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ 100 ಗ್ರಾಂ ತಾಜಾ ತೆಂಗಿನಕಾಯಿಯ ದೈನಂದಿನ ಸೇವನೆಯು 80 ಆರೋಗ್ಯವಂತ ವ್ಯಕ್ತಿಗಳಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆ ಮೂಲಕ ಟೈಪ್ -2 ಮಧುಮೇಹವನ್ನು ತಡೆಯುತ್ತದೆ.
 

67

4. ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ
ಎಳನೀರು ಅಥವಾ ತೆಂಗಿನಕಾರಯಿ ಆಹಾರದ ಫೈಬರ್‌ಲ್ಲಿ ಸಮೃದ್ಧವಾಗಿರುವ ಕಾರಣ, ಸುಧಾರಿತ ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ ಎಂದು ಪೌಷ್ಟಿಕತಜ್ಞರು ವಿವರಿಸುತ್ತಾರೆ. ತೆಂಗಿನ ಮಲೈಯಲ್ಲಿರುವ ಫೈಬರ್ ಕರುಳಿನ ಚಲನೆಯನ್ನು ನಿಯಂತ್ರಿಸಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ತೆಂಗಿನಕಾಯಿ ಮಲೈಯು ಕರುಳಿನ ಬ್ಯಾಕ್ಟೀರಿಯಾದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುವ ಸಂಯುಕ್ತಗಳನ್ನು ಹೊಂದಿರುತ್ತದೆ.

77
pregnancy

pregnancy

5. ಗರ್ಭಿಣಿಯರಿಗೆ ಪ್ರಯೋಜನಕಾರಿ
ತೆಂಗಿನ ಮಲೈಯ ಪೌಷ್ಟಿಕಾಂಶದ ಸಂಯೋಜನೆಯು ಗರ್ಭಿಣಿಯರಿಗೆ ಪ್ರಯೋಜನಕಾರಿಯಾಗಿದೆ ಏಕೆಂದರೆ ಇದು ಭ್ರೂಣದ ಮೆದುಳು ಮತ್ತು ನರಮಂಡಲದ ಬೆಳವಣಿಗೆಗೆ ಸಹಾಯ ಮಾಡುತ್ತದೆ, ವಾಕರಿಕೆ ಮತ್ತು ಬೆಳಗಿನ ಬೇನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಾಯಿಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. .

About the Author

VP
Vinutha Perla
ಆಹಾರ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved